ಆನೇಕಲ್‌ : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

ಬೆಂಗಳೂರು, ಅ.21 : ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳಿಗೆ ವಿಷವುಣಿಸಿ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಇಂದು ಬೆಳಗ್ಗೆ ಸ್ಥಳೀಯರಿಂದಾಗಿ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ತಮಿಳುನಾಡು ಮೂಲದ ಶಿವರಾಜ್ (38), ಪತ್ನಿ ಪಾರ್ವತಿ (28), ಮಕ್ಕಳಾದ ಸುಧಾ (11) ಮತ್ತು ಕಾವ್ಯ (5) ಎಂದು ಗುರುತಿಸಲಾಗಿದೆ. ಊಟದಲ್ಲಿ ಮಕ್ಕಳಿಗೆ ಮತ್ತು ಪತ್ನಿಗೆ ವಿಷಬೆರೆಸಿ ನೀಡಿರುವ ಶಿವರಾಜ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

suicide

ಮಂಗಳವಾರ ಬೆಳಗ್ಗೆ ಮನೆಯವರು ಎಷ್ಟು ಹೊತ್ತಾದರೂ ಬಾಗಿಲು ತೆರಯದ ಕಾರಣ ಅಕ್ಕಪಕ್ಕದವರು ಕಿಟಕಿ ಮೂಲಕ ಮನೆಯೊಳಗೆ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಳಿದುಬಂದಿದೆ. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. [ತಾಪಂ ಕಚೇರಿಯಲ್ಲೇ ಉದ್ಯೋಗಿ ಆತ್ಮಹತ್ಯೆ]

ಶಿವರಾಜ್ ಚಂದಾಪುರ ಸಂತೆಯಲ್ಲಿ ಟೀ ಮಾರಿಕೊಂಡು ಜೀವನ ನಡೆಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸಾಲಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್‌ ಬರೆದಿಟ್ಟು ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನವವಿವಾಹಿತೆ ಆತ್ಮಹತ್ಯೆ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಯಲಹಂಕದ ಕೋಗಿಲುವಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವಳನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರವಿವಾಹವಾಗಿ ಆರು ತಿಂಗಳು ಕಳೆದಿತ್ತು. ಅತ್ತೆ, ಮಾವ, ಗಂಡನ ಕಿರುಕುಳದಿಂದ ಬೇಸತ್ತು ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+