ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿ: ನಿತಿನ್ ಗಡ್ಕರಿ ಶಂಕುಸ್ಥಾಪನೆ

|
Google Oneindia Kannada News

ಬೆಂಗಳೂರು, ಮಾರ್ಚ್ 24: ಬೆಂಗಳೂರು-ಮೈಸೂರು ವಿಭಾಗದ ಷಟ್ಪಥ ಹೆದ್ದಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಸಂಕು ಸ್ಥಾಪನೆ ನೆರವೇರಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೆಂಗೇರಿಯ ಪಂಚಮುಖಿ ಗಣಪತಿ ದೇವಾಲಯದ ಬಳಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಕಾರ್ಯಕ್ರಮ ನಡೆಯಿತು. ಈ ಯೋಜನೆಯು 10 ಪಥದ ಸಂಚಲನವನ್ನು ಹೊಂದಿ ನೇರ ಚಲನ ವಲನಕ್ಕಾಗಿ 6 ಪಥದ ನಿಯಂತ್ರಿತ ಎಕ್ಸ್ ಪ್ರೆಸ್‌ ವೇನೊಂದಿಗೆ ರೆಉ ಬದಿಯಲ್ಲಿ 2 ಪಥದ ಸರ್ವೀಸ್ ರಸ್ತೆಗಳನ್ನು ಒಳಗೊಂಡಿರುತ್ತದೆ.

ಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿಗೆ ಕೇಂದ್ರ ಸಮ್ಮತಿಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿಗೆ ಕೇಂದ್ರ ಸಮ್ಮತಿ

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಸಭೆಯು ಬೆಂಗಳೂರು-ಮೈಸೂರು ನಡುವಿನ ಷಟ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಮೈಸೂರಿನಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಈ ಘೋಷಣೆ ಮಾಡಿದ್ದರು.

Foundation stone for 6 lane of Bengaluru-Mysuru highway

ಪ್ರಧಾನಿ ಅಧ್ಯಕ್ಷತೆಯಲ್ಲಿ 'ಸಾಗರಮಾಲಾ' ಯೋಜನೆಗೆ ಕರ್ನಾಟಕದ 8 ಹೆದ್ದಾರಿಗಳು ಆಯ್ಕೆ ರಾಷ್ಟ್ರೀಯ ಹೆದ್ದಾರಿ-274 ಮಾರ್ಗದ ನಿಡಘಟ್ಟ-ಮೈಸೂರು ವಿಭಾಗದಲ್ಲಿ(74.20 ಕಿ/ಮೀನಿಂದ 135.304 ಕಿ.ಮೀವರೆಗೆ) ನಿರ್ಮಾಣಕ್ಕೆ ಸಂಪುಟ ಸಮ್ಮತಿಸಿದೆ.

ಇದರಲ್ಲಿ 2,028.93ಕೋಟಿ ರಸ್ತೆ ಕಾಮಗಾರಿಗೆ ಖರ್ಚಾಗಲಿದ್ದು, ಉಳಿದ ಹಣ ಭೂ ಸ್ವಾಧೀನ ಪ್ರಕ್ರಿಯೆಗೆ ಬಳಕೆಯಾಗಲಿದೆ. ಮೈಸೂರು-ಬೆಂಗಳೂರು ನಗರದ ಮಧ್ಯೆ ಬರುವ ಉಪನಗರಗಳಲ್ಲಿಯೇ ಸಂಚಾರ ವ್ಯತ್ಯಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೂ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಹಾಗೆಯೇ ಮದ್ದೂರಿನಲ್ಲಿ ಮೇಲ್ಸೇತುವೆ ರಸ್ತೆಗಳು ಕೂಡ ನಿರ್ಮಾಣವಾಗಲಿದೆ.

English summary
Union Transport minister Nitin gadkari laid the Foundation stone for six lane of Bengaluru-Mysuru highway on Saturday near kengeri in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X