ತಮಗೆ ತಾವೇ ಕಪಾಳಮೋಕ್ಷ ಮಾಡಿಕೊಂಡ ಮಾಜಿ ಪ್ರಧಾನಿ

Recommended Video

      Former Prime Minister HD Devegowda angry on D V Sadananda Gowda | Oneindia Kannada

      ಬೆಂಗಳೂರು, ನವೆಂಬರ್ 28: ಮಾಜಿ ಪ್ರಧಾನಿ ಹೆಚ್.ಡಿ,ದೇವೇಗೌಡ ಆವರು ತಮಗೆ ತಾವೇ ಕಪಾಳಮೋಕ್ಷ ಮಾಡಿಕೊಂಡು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಡಿ.ವಿ.ಸದಾನಂದಗೌಡ ಅವರು ಹಗುರವಾಗಿ ಮಾತನಾಡಿದ್ದಾರೆಂದು ಹೇಳಿ ತಾವೇ ಕಪಾಳಮೋಕ್ಷ ಮಾಡಿಕೊಂಡರು.

      ಇಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಹೆಚ್.ಡಿ,ಕುಮಾರಸ್ವಾಮಿ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಣ್ಣೀರು ಹಾಕಿದ್ದನ್ನು ವ್ಯಂಗ್ಯವಾಡ್ತಿದ್ದಾರೆ. ಇಂತವರಿಗೆ ಏನು ಹೇಳುವುದು ಎಂದು ಹೇಳಿದರು.

      ಕುಮಾರಸ್ವಾಮಿ ಭಾವಜೀವಿ, ಜನರ ಕಷ್ಟಕ್ಕೆ ಕಣ್ಣೀರು ಬರುತ್ತೆ, ಸದಾನಂದಗೌಡರು ಅದನ್ನೇ ಹಾಡಿಕೊಳ್ಳುತ್ತಾರೆ ಅವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ತಿರುಗೇಟು ಕೊಟ್ಟರು. ರಾಜ್ಯದ ಜನರ ಕಷ್ಟಗಳು ನಿಮಗೆ ಅರ್ಥವಾಗುವುದಿಲ್ಲ, ನಿಮ್ಮಿಂದ ಕೇವಲ ಅಧಿಕಾರ ದುರುಪಯೋಗವಾಗ್ತಿದೆ ಎಂದರು.

      Former Prime Minister HD Devegowda Slapped Himself

      ಸುಪ್ರೀಂ ಕೋರ್ಟ್ ಈಗಾಗಲೇ ಬಿಜೆಪಿ ನಾಯಕರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕುತಂತ್ರದಿಂದ ಅಧಿಕಾರ ಹಿಡಿಯಲು ಹೋದ ಮಹಾರಾಷ್ಟ್ರದಲ್ಲೂ ಕಪಾಳಮೋಕ್ಷವಾಗಿದೆ ಎಂದು ಹೇಳಿ ತಮ್ಮ ಕಪಾಳಕ್ಕೆ ತಾವೇ ಹೊಡೆದುಕೊಂಡು ಸನ್ನೆ ಮೂಲಕ ಆಕ್ರೋಶ ಹೊರಹಾಕಿದರು.

      ನಾನು ಯಾವ ಸಮುದಾಯಕ್ಕೂ ದ್ರೋಹ ಮಾಡಿಲ್ಲ, ಈ ಉಪ ಚುನಾವಣೆಯಲ್ಲಿ ಗೋಪಾಲಯ್ಯ ಅವರನ್ನು ಸೋಲಿಸಬೇಕು ಎಂದು ಪ್ರಚಾರದ ವೇಳೆ ಕರೆ ನೀಡಿದರು. ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಉಪ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+