ನೇಪಾಳದ ಪಶುಪತಿನಾಥನ ಸನ್ನಿಧಿಗೆ ಹೊರಟ ದೇವೇಗೌಡರು

Recommended Video

      ನೇಪಾಳದ ಪಶುಪತಿನಾಥನ ಸನ್ನಿಧಾನಕ್ಕೆ ಭೇಟಿ ನೀಡಲಿದ್ದಾರೆ ಎಚ್ ಡಿ ದೇವೇಗೌಡ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 6: ಮೂರುದಿನಗಳ ಹಿಂದಷ್ಟೇ ತಮ್ಮ ನಿವಾಸದಲ್ಲಿ ಕಾಶಿವಿಶ್ವನಾಥನ ಬೃಹತ್ ಭಾವಚಿತ್ರ ಅಳವಡಿಸಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಇದೀಗ ಖುದ್ದಾಗಿ ಪಶುಪತಿನಾಥ ಮಂದಿರಕ್ಕೆ ತೆರಳಲು ಸಿದ್ಧರಾಗಿದ್ದಾರೆ.

      ದೇವೇಗೌಡರು ಗುರುವಾರ ಸಂಜೆ ನವದೆಹಲಿಯಿಂದ ನೇಪಾಳ ರಾಜಧಾನಿ ಕಟ್ಮಂಡುವಿಗೆ ತೆರಳಲಿದ್ದು ಶುಕ್ರವಾರ ಪಶುಪತಿನಾಥ ಮಂದಿರಕ್ಕೆ ತೆರಳಲಿದ್ದಾರೆ. ಕುಟುಂಬ ಸಮೇತ ದರ್ಶನ ಪಡೆಯಲಿರುವ ಮಾಜಿ ಪ್ರಧಾನಿ ಶನಿವಾರದ ವೇಳೆಗೆ ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆ ಇದೆ.

      ಅಪಾರ ದೈವಭಕ್ತರಾಗಿರುವ ದೇವೇಗೌಡರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಹೋಮ ಹವನ ನಡೆಸಿರುವುದಲ್ಲದೇ ಅವರ ಪುತ್ರ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಆಂಧ್ರಪ್ರದೇಶದ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನವನ್ನು ಪಡೆದಿದ್ದಾರೆ.

      Former PM Devegowda to visit Nepal

      ಇತ್ತೀಚೆಗಷ್ಟೆ ಕೇದಾರನಾಥ ದೇವಾಲಯಕ್ಕೆ ತೆರಳುವಂತೆ ನಿರ್ಧರಿಸಿದ್ದರು ಆದರೆ ಮಳೆಯಿಂದಾಗಿ ಮುಂದೂಡಿದ್ದರು, ಮನೆ ದೇವರು ಶೃಂಗೇರಿ ಶಾರದೆ ಹಾಗು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೋಮ-ಹವನ ನಡೆಸಿದರು.

      ಇದೀಗ ದೇಶದ ಗಡಿಯಾಚೆ ಇರುವ ನೇಪಾಳಕ್ಕೂ ತೆರಳಿ ಪಶುಪತಿನಾಥನ ದರ್ಶನಕ್ಕೆ ಮುಂದಾಗಿದ್ದಾರೆ. ಮೂಲಗಳ ಪ್ರಕಾರ ದೆಹಲಿಯ ಜ್ಯೋತಿಷಿಯೊಬ್ಬರು ಪಶುಪತಿನಾಥನ ದರ್ಶನ ಪಡೆಯುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ದೇವೇಗೌಡ ನೇಪಾಳಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+