ಮಾಜಿ ಮಿಸ್ ಆಂಧ್ರಳ ಜೊತೆ ಡೇಟಿಂಗ್ ಮಾಡಿ ಯಾಮಾರಿಸಿದ ಬಾಯ್‌ಫ್ರೆಂಡ್ ಬಂಧನ
ಬೆಂಗಳೂರು, ಜುಲೈ 28: ಮಾಜಿ ಮಿಸ್ ಆಂಧ್ರಪ್ರದೇಶ ಸುಂದರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಜಿಮ್ ತರಬೇತುದಾರನನ್ನು ಉತ್ತರ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಚಿಕ್ಕಬಾಣಾವರ ಸಮೀಪದ ಕೆಂಪಾಪುರದ ತನ್ನ ಮನೆಯಲ್ಲಿ ಜುಲೈ 21ರಂದು 25 ವರ್ಷದ ವಿದ್ಯಾಶ್ರೀ ಬಿ ಆರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತನ್ನ ತಾಯಿ ತ್ರಿವೇಣಿ ಆರ್ ಮತ್ತು ಅವಳ ಕಿರಿಯ ಸಹೋದರ ಮನೋಜ್ ಬಿ ಆರ್ ಜೊತೆ ವಾಸಿಸುತ್ತಿದ್ದಳು. ಆಕೆಯ ತಂದೆ ಆರು ವರ್ಷಗಳ ಹಿಂದೆ ನಿಧನರಾಗಿದ್ದರು.

ಎಂಸಿಎ ಪದವೀಧರರಾಗಿದ್ದ ವಿದ್ಯಾಶ್ರೀ ಅವರು ಅಮೆರಿಕದ ಬಹುರಾಷ್ಟ್ರೀಯ ಕಂಪನಿಯಾದ ಬ್ಲೂ ಯೋಂಡರ್‌ನಲ್ಲಿ ಬೆಳ್ಳಂದೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಮಾಡೆಲಿಂಗ್‌ನಲ್ಲಿಯೂ ತೊಡಗಿಸಿಕೊಂಡಿದ್ದ ಅವರು ಮಿಸ್ ಆಂಧ್ರ ಪ್ರಶಸ್ತಿಯನ್ನು ಗೆದ್ದಿದ್ದರು.
2021ರಲ್ಲಿ ವಿದ್ಯಾಶ್ರೀ ಅವರು ಬಸವೇಶ್ವರ ನಗರದ ಜಿಮ್‌ನಲ್ಲಿ ಟ್ರೈನರ್ ಆಗಿದ್ದ ಅಕ್ಷಯ್ ಎಂಬಾತನೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದರು. ಇವರು ಮಂಡ್ಯ ಮೂಲದವರಾಗಿದ್ದು, ಕೆಂಗೇರಿಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದನು. ಪರಿಚಯವಾದ ಬಳಿಕ ಅಕ್ಷಯ್ ಮತ್ತು ವಿದ್ಯಾಶ್ರೀ ಡೇಟಿಂಗ್ ಆರಂಭಿಸಿ ಅನ್ಯೋನ್ಯತೆಯನ್ನು ಬೆಳೆಸಿಕೊಂಡರು.
ಬಳಿಕ ಅವರು ಅನೇಕ ಬಾರಿ ವೆಕೆಶನ್ ಕೂಡ ಕೂಡ ಹೋಗಿ ಬಂದಿದ್ದರು. ಮದುವೆಯಾಗುವ ಚಿಂತನೆ ನಡೆಸಿದ್ದರು. ವಿದ್ಯಾಶ್ರೀ ಅಕ್ಷಯ್‌ಗೆಗೆ ಹಣವನ್ನು ಸಹ ಸಾಲವಾಗಿ ಕೊಟ್ಟಿದ್ದಳು. ಸುಮಾರು ಮೂರು ತಿಂಗಳ ಹಿಂದೆ ಅಕ್ಷಯ್ ಅವಳನ್ನು ಅವೈಡ್ ಮಾಡಲು ಪ್ರಾರಂಭಿಸಿದ್ದನು. ಇದರಿಂದ ಸಂಬಂಧ ಹಳಸಿತ್ತು. ಬಳಿಕ ಅವಳು ಸತ್ತರೂ ಹೆದರುವುದಿಲ್ಲ ಎಂದು ಅವನು ಅವಳಿಗೆ ಹೇಳಿದ್ದನು. ನಂತರ ಅವನು ಅವಳ ಫೋನ್ ಕರೆಗಳಿಗೆ ಉತ್ತರಿಸುವುದನ್ನು ಮತ್ತು ಅವಳ ಸಂದೇಶಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದನು.
ಕೊನೆಗೆ ವಿದ್ಯಾಶ್ರೀ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳಿದ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆಗ ಆತ ಆಕೆಯ ಖಾಸಗಿ ಚಿತ್ರಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಅಕ್ಷಯ್ ಜೊತೆಗಿನ ಸಂಬಂಧದ ಬಗ್ಗೆ ವಿದ್ಯಾಶ್ರೀ ಕುಟುಂಬಕ್ಕೆ ತಿಳಿದಿದ್ದರೂ, ಅವಳು ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಅವರಿಗೆ ತಿಳಿದಿರಲಿಲ್ಲ.
ಆಕೆಯ ಸಾವಿನ ನಂತರ ಆಕೆ ಕುಟುಂಬ ಅವಳು ನಿರಂತರವಾಗಿ ಬರೆದು ಇಟ್ಟುಕೊಂಡಿರುವ ಡೈರಿಯನ್ನು ಪರಿಶೀಲಿಸಿತ್ತು. ಆಗ ಅವಳ ಡೆತ್ ನೋಟ್ ಸಿಕ್ಕಿತ್ತು. ಅದರಲ್ಲಿ ವಿದ್ಯಾಶ್ರೀ ತನ್ನ ಸಾವಿಗೆ ಅಕ್ಷಯ್ ಕಾರಣ ಎಂದು ಬರೆದಿದ್ದಳು. ಅವಳನ್ನು ಆತ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದನು. ಅವನು ತನಗೆ 1.76 ಲಕ್ಷ ರೂಪಾಯಿ ಸಾಲದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಅವನ ಫೋನ್ ಸ್ವಿಚ್ ಆಫ್ ಮಾಡಿದ ಬಗ್ಗೆಯೂ ಅವಳು ಬರೆದಿದ್ದಳು. ನಂತರ ಅವಳು ಖಿನ್ನತೆಗೆ ಒಳಗಾಗಿ ಬದುಕಲು ಇಷ್ಟವಿಲ್ಲ ಎಂದು ಬರೆದಿದ್ದಳು.
ಈ ಹಿನ್ನೆಲೆಯಲ್ಲಿ ಡೆತ್ ನೋಟ್ ಪತ್ತೆಯಾದ ನಂತರ ಆಕೆಯ ತಾಯಿ ಬುಧವಾರ ಅಕ್ಷಯ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಗುರುವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.












Click it and Unblock the Notifications