ವೇಮ ರೆಡ್ಡಿ ಸಮಾಜ ಸಂಘಟನೆ ಭರವಸೆ ಕೊಟ್ಟ ಜನಾರ್ದನ ರೆಡ್ಡಿ
ಬೆಂಗಳೂರು, ಜನವರಿ 19: "ಹೇಮ-ವೇಮ ರೆಡ್ಡಿ ಸಮಾಜದ ಸಂಘಟನೆಗೆ ಕಾರ್ಯಕ್ರಮದ ರೂಪುರೇಶೆಗಳು ಸಿದ್ಧವಾಗಿದ್ದು, ಶೀರ್ಘದಲ್ಲಿಯೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು" ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭರವಸೆ ನೀಡಿದರು.
ತತ್ವಜ್ಞಾನಿ ವೇಮನರ 609ನೇ ಜಯಂತ್ಯೋತ್ಸವದ ಅಂಗವಾಗಿ ಮಂಗಳವಾರ ಬೆಂಗಳೂರಿನ ಬಸವೇಶ್ವರ ಸರ್ಕಲ್ ನಲ್ಲಿರುವ ಹೈಪಾಯಿಂಟ್ ಕಚೇರಿಯಲ್ಲಿ ಹೇಮ-ವೇಮ ರೆಡ್ಡಿ ಜನಸಂಘ ಕರ್ನಾಟಕದ ಮುಖ್ಯ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಳೆದ ಆರೇಳು ತಿಂಗಳಿನಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಸಂಘದ ಕಾರ್ಯಗಳಿಗೆ ಅಡೆತಡೆಯಾಗಿದೆ. ಹೀಗಿದ್ದರೂ ಕಾರ್ಯಕ್ರಮವನ್ನು ಅತ್ಯಂತ ವೇಗವಾಗಿ ಆರಂಭಿಸಿ, ಸಮಾಜದ ಎಲ್ಲಾ ಮುಖಂಡರುಗಳನ್ನು, ಯುವಕರನ್ನು ಸಂಪರ್ಕಿಸಿ ಸಂಘಟಿಸುವತ್ತ ರೂಪುರೇಶೆಗಳನ್ನು ರಚಿಸಲಾಗಿದೆ. ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬಲಿದೆ" ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು. ರೆಡ್ಡಿ ಸಮಾಜ ಸ್ವಾಮೀಜಿ ಶಾಂತಮಲ್ಲಿಕಾರ್ಜುನ ಸ್ವಾಮಿ, ಹೆಡಗಿನಮುದ್ರ ಸ್ವಾಮಿ ವೇಮನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಶೀರ್ವಚನ ನೀಡಿದ ಸ್ವಾಮೀಜಿಗಳು ವೇಮನರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಬಾಂಧವರು ಇತರೆ ಸಮಾಜದವರೊಂದಿಗೆ ಐಕ್ಯತೆ ಹಾಗೂ ಸ್ನೇಹ ಭಾವನೆಯಿಂದಿದ್ದು, ಸಮಾಜದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.












Click it and Unblock the Notifications