ಪರಮೇಶ್ವರ್ ಹೇಳಿದ್ರೆ 10 ನಿಮಿಷದಲ್ಲಿ ಶರಣಾಗುವೆ : ಬಾಂಬ್ ನಾಗ
ಜಿ ಪರಮೇಶ್ವರ್ ಅವರೊಬ್ಬ ಜಂಟಲ್ ಮ್ಯಾನ್, ಅವರು ಹೇಳಿದರೆ ನಾನು ಹತ್ತು ನಿಮಿಷದಲ್ಲಿ ಶರಣಾಗುತ್ತೇನೆ ಎಂದು ಬಾಂಬ್ ನಾಗ ಅಲಿಯಾಸ್ ನಾಗರಾಜ್ ಅವರು ತಮ್ಮ ಹೊಚ್ಚ ಹೊಸ ವಿಡಿಯೋದಲ್ಲಿ ಹೇಳಿದ್ದಾರೆ.
ಬೆಂಗಳೂರು, ಮೇ 09 : 'ನನ್ನ ಮೇಲೆ ಹಾಕಿರುವ ಕೇಸ್ ಗಳೆಲ್ಲವೂ ಫೇಕ್, ಗೃಹ ಸಚಿವ ಜಿ ಪರಮೇಶ್ವರ್ ಅವರೊಬ್ಬ ಜಂಟಲ್ ಮ್ಯಾನ್, ಅವರು ಹೇಳಿದರೆ ನಾನು ಹತ್ತು ನಿಮಿಷದಲ್ಲಿ ಶರಣಾಗುತ್ತೇನೆ' ಎಂದು ಬಾಂಬ್ ನಾಗ ಅಲಿಯಾಸ್ ನಾಗರಾಜ್ ಹೊಚ್ಚ ಹೊಸ ವಿಡಿಯೋದಲ್ಲಿ ಹೇಳಿದ್ದಾನೆ.
ಚಾರ್ಲ್ಸ್ ಶೋಭರಾಜ್ ನನ್ನೂ ಮೀರಿಸುವಂತೆ ಪೊಲೀಸರಿಗೆ ಚಳ್ಳೆ ಹಣ್ಣು ತೀರಿಸುತ್ತಿರುವ ನಾಗ, ಈಗ 10 ನಿಮಿಷದಲ್ಲೇ ಪರಮೇಶ್ವರ್ ಮುಂದೆ ನಿಲ್ಲುತ್ತೇನೆ ಎಂದಿರುವುದು ನೋಡಿದರೆ ಆತ ಬೆಂಗಳೂರಿನಲ್ಲೇ ಗೃಹ ಸಚಿವಾಲಯದ ಆಸುಪಾಸಿನಲ್ಲೆ ಎಲ್ಲೋ ರೂಮಿನಲ್ಲಿ ಕೂತು ವಿಡಿಯೋ ಮಾಡಿ ಕಳಿಸಿರಬೇಕು ಎಂಬ ಅನುಮಾನ ಮೂಡುತ್ತದೆ.
ಕರ್ನಾಟಕ ಪೊಲೀಸರಿಗೆ ಚಾಲೆಂಜ್ ಹಾಕುತ್ತಿರುವ ವಿಡಿಯೋ ಬಾಂಬ್ ಒಟ್ಟಾರೆ, ಮಾಧ್ಯಮಗಳಿಗೆ ಆಹಾರವಾಗಿದ್ದು, ಸಾರ್ವಜನಿಕರಿಗೆ ಸಕತ್ ಮಜಾ ನೀಡುತ್ತಿದೆ.

ನಾಗ ವಿಡಿಯೋ ಮುಖ್ಯಾಂಶಗಳು ಮುಂದಿವೆ:
* ನಿವೃತ್ತ ಅಧಿಕಾರಿಗಳಾದ ಸಂಗ್ರಾಮ್ ಸಿಂಗ್, ನಾಗರಾಜು ಸೇರಿದಂತೆ ಹಿರಿಯ ಅಧಿಕಾರಿಗಳ ಸಂಚಿಗೆ ನಾನು ಬಲಿಯಾಗಿದ್ದೇನೆ.
* ನಾಲ್ಕು ಸಲ ಎಂಎಲ್ ಎ ಎಲೆಕ್ಷನ್ ನಿಂತವನು ನಾನು ಮತ್ತೆ ತಪ್ಪು ಮಾಡೋಕೆ ಆಗುತ್ತಾ. ನಾನು ನನ್ನ ಹೆಂಡತಿ ಇಬ್ಬರು ಕೌನ್ಸಿಲರ್ ಆದ ಇತಿಹಾಸವಿದೆ.
* ಸಿಬಿಐ ತನಿಖೆ ನಡೆದರೆ ಐಪಿಎಸ್, ಐಎಎಸ್ ಗಳು ಬಟ್ಟೆ ಬಿಚ್ಚಿ ನಿಲ್ಲಬೇಕಾಗುತ್ತದೆ ಎಂದು ಬಾಂಬ್ ಹಾಕಿದ್ದಾರೆ.
* ಪರಮೇಶ್ವರಪ್ಪ ನೋಡಿದ್ರೆ ನಮ್ಮ ಜೀವರಾಜ್ ಅಳ್ವ ನೆನಪಾಗುತ್ತದೆ. ಪರಮೇಶ್ವರ್ ಬಯಸಿದರೆ ನಾನು 10 ನಿಮಿಷದಲ್ಲಿ ಅವರ ಮುಂದಿರುತ್ತೇನೆ.
* ಆದರೆ, ಸುಳ್ಳು ಕೇಸ್ ಗಳನ್ನು ತೆಗೆದು ಹಾಕಬೇಕು. ನನ್ನ ಮೇಲಿರುವುದು ಐಪಿಸಿ 307 ಮಾತ್ರ. ಕಾನೂನು ಪ್ರಕಾರ ಎಲ್ಲರಿಗೂ ನ್ಯಾಯ ಕೇಳುವ ಹಕ್ಕಿದೆ.
* 2013 ಎಂಎಲ್ ಎ ಚುನಾವಣೆಯಲ್ಲಿ ಚುನಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ 13 -16 ಕೇಸ್ ಹಾಕಿದ್ದಾರೆ. 53-41 ಕೇಸ್ ಬಾಯಿ ಬಂದಂತೆ ಪ್ರಸಾರ ಮಾಡಬೇಡಿ ಗೂಬೆ ಕೂರಿಸಬೇಡಿ. ಮಾಧ್ಯಮಗಳು ಕೂಡಾ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಬೇಕು ಎಂದಿದ್ದಾನೆ.












Click it and Unblock the Notifications