ಸುದ್ದಿಗೋಷ್ಠಿಯಲ್ಲಿ ವಿಷ ಕುಡಿದ ನಾಗ, ಆಸ್ಪತ್ರೆಗೆ ದಾಖಲು
ಬೆಂಗಳೂರು, ಏಪ್ರಿಲ್ 06: ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ನಾಗ ಅಲಿಯಾಸ್ ನಾಗರಾಜ್ ವಿಷ ಕುಡಿದು ಅಸ್ವಸ್ಥರಾಗಿದ್ದು ಅವರನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ಕರೆದಿದ್ದ ಅವರು, ಪತ್ರಕರ್ತರೆದುರು ಮಾತನಾಡುತ್ತ, "ನನ್ನ ಸಾವಿಗೆ ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಮತ್ತು ಕೆ.ಜೆ.ಜಾರ್ಜ್ ಕಾರಣ. ಅವರಿಂದ ನನಗೆ ಅನ್ಯಾಯವಾಗಿದೆ" ಎಂದು ಹೇಳಿ ತಕ್ಷಣ ವಿಷ ಸೇವಿಸಿದರು.
ಈಗಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರ ಪತ್ನಿ, 'ಯಾರನ್ನೋ ಭೇಟಿಯಾಗಿ ಬರುತ್ತೇನೆ ಎಂದು ಹೋದವರು ಈಗ ವಿಷ ಕುಡಿದು ಆಸ್ಪತ್ರೆಯಲ್ಲಿದ್ದಾರೆ. ಅವರಿಗೆ ಕೆಲವರಿಂದ ಬಹಳ ನೋವಾಗಿದೆ, ಅನ್ಯಾಯವಾಗಿದೆ. ಅದಕ್ಕೇ ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಿಂತ ಹೆಚ್ಚು ನನಗೇನೂ ಗೊತ್ತಿಲ್ಲ' ಎಂದಿದ್ದಾರೆ












Click it and Unblock the Notifications