• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ಪತ್ರೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಡಿಸ್ಚಾರ್ಜ್

|

ಬೆಂಗಳೂರು, ಡಿಸೆಂಬರ್ 15: ಹೃದಯ ಸಂಬಂಧಿತ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ದಿನಗಳ ನಂತರ ವೇಗಾಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದಾರೆ.

ಮಲ್ಲೇಶ್ವರಂನ ವೆಗಾಸ್ ಆಸ್ಪತ್ರೆಯಲ್ಲಿ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದ ಡಿಸ್ಚಾರ್ಜ್ ಆದ ಬಳಿಕ ಇಂದು ವೇಗಸ್ ಆಸ್ಪತ್ರೆಯ ವೈದ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, " ಐ ಆಮ್ ವೇರಿ ವೆಲ್" ಎಂದು ಹೇಳುತ್ತಾ, ನನ್ನನ್ನು ಚೆನ್ನಾಗಿ ನೋಡಿಕೊಂಡ ಆಸ್ಪತ್ರೆಯ ಸಿಬ್ಬಂದಿಗೆ ಹಾಗೂ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಅನಾರೋಗ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ

ಆಸ್ಪತ್ರೆಯಲ್ಲಿದ್ದಾಗ ರಾಜಕೀಯ ನಾಯಕರ ಭೇಟಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, "ಆರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರೂ ಇಲ್ಲ, ಮಾನವೀಯತೆ ಮುಖ್ಯ ಅಲ್ವೆ, ರಾಜಕೀಯ ಪ್ರಶ್ನೆ ಕೇಳಬೇಡಿ ಸದ್ಯಕ್ಕೆ ನಾನು ಆರೋಗ್ಯವಾಗಿರೋದು ಮುಖ್ಯ" ಎಂದರು.

ನಾನೀಗ ಸಂಪೂರ್ಣ ಆರೋಗ್ಯದಿಂದ ಇದ್ದೇನೆ, ವೈದ್ಯರು 1 ವಾರ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದರು. ಅರೋಗ್ಯ ವಿಚಾರಿಸಲು ಬಂದಿದ್ದ ಎಲ್ಲ ಮಠಾಧೀಶರಿಗೂ, ಗುಣಮುಖರಾಗಲು ಪ್ರಾರ್ಥಿಸಿದ ಅಭಿಮಾನಿಗಳಿಗೂ ಮತ್ತು ಪಕ್ಷಾತೀತವಾಗಿ ಬಂದು ಹಾರೈಸಿದ ಎಲ್ಲ ರಾಜಕೀಯ ನಾಯಕರಿಗೂ ಧನ್ಯವಾದ ತಿಳಿಸಿದರು.

ಈ ಬಗ್ಗೆ ಮಾತನಾಡಿದ ವೆಗಾಸ್ ಆಸ್ಪತ್ರೆಯ ವೈದ್ಯ ಡಾ.ರಮೇಶ್ ಮಾತನಾಡಿ, "ಎಲ್ಲಾ ಸರಿಯಾಗಿದೆ, 1 ವಾರ ವಿಶ್ರಾಂತಿ ಪಡೆಯಬೇಕು, ಈ ಹಿಂದೆ ಹಾಕಿದ್ದ ಸ್ಟೆಂಟ್ 20 ವರ್ಷ ಬಂದಿದೆ. ಈಗ ಮತ್ತೆ ಸ್ಟೆಂಟ್ ಹಾಕಿದ್ದೇವೆ, ಮತ್ತೆ ಅದನ್ನು ಬದಲಿಸುವ ಅಗತ್ತಯವಿಲ್ಲ" ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಎಸ್ ಬಿ ಎಂ ಶಾಸಕರು!

ನಾಟಿ ಕೋಳಿ ಸಾರಿನ ಊಟ ಮುಂದುವರೆಸಿದರೆ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ಸಿದ್ದರಾಮಯ್ಯನವರು ನಾಟಿ ಕೋಳಿ ಸಾರಿನ ಊಟ ಮಾಡುತ್ತಿದ್ದರು.

ಸಿದ್ದರಾಮಯ್ಯ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗುತ್ತಿದ್ದಂತೆಯೇ ಅವರ ಅಭಿಮಾನಿಗಳು ಹುಲಿಯಾ.. ಹುಲಿಯಾ ಎಂದು ಘೋಷಣೆ ಕೂಗಿ ಸಂತಸಪಟ್ಟರು. ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದರಾಮಯ್ಯನವರು ಡಿಸ್ಚಾರ್ಜ್ ಆದ ನಂತರ ಕಾವೇರಿ ನಿವಾಸದಲ್ಲಿ 1 ವಾರ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

English summary
Former CM Siddaramaiah, who was hospitalized for cardiovascular angioplasty, He was discharged from the Vegas hospital four days later. He thanked the hospital staff and everyone who took take care of me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X