ವಿಧಾನಸೌಧದಲ್ಲಿ ಕೆಲಸ ಗಿಟ್ಟಿಸಿದ್ದ ಬಿಎಂಟಿಸಿ ಡ್ರೈವರ್‌ಗೆ ಜೈಲು!

ಬೆಂಗಳೂರು, ಜನವರಿ 17 : ಫೋರ್ಜರಿ ಸಹಿ ಮಾಡಿ, ನಕಲಿ ದಾಖಲೆಗಳನ್ನು ಕೊಟ್ಟು ವಿಧಾನಸೌಧದಲ್ಲಿ ಕೆಲಸ ಪಡೆದಿದ್ದ ವ್ಯಕ್ತಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಿಎಂಟಿಸಿಯಲ್ಲಿದ್ದ ಈತ ಅಮಾನತುಗೊಂಡ ಬಳಿಕ ವಿಧಾನಸೌಧದಲ್ಲಿ ಕೆಲಸಕ್ಕೆ ಸೇರಿದ್ದ.

8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಎಂ.ಮಹೇಶ್ ಬಾಬು ಅವರು ವೈ.ಮಂಜುನಾಥ್ ಎಂಬ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದ್ದಾರೆ. ನಕಲಿ ಜನನ ಪ್ರಮಾಣ ಪತ್ರ, ನಕಲಿ ದಾಖಲೆಗಳನ್ನು ಕೊಟ್ಟು ಮಂಜುನಾಥ್ ಕೆಲಸ ಗಿಟ್ಟಿಸಿದ್ದರು.

Forgery case : Secretariat driver gets jail

ಮಂಜುನಾಥ್ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಮತ್ತು ಸರ್ಕಾರಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ನಿಡಬೇಕು ಎಂದು ಸರ್ಕಾರಿ ಅಭಿಯೋಜಕ ಜಿ.ಎನ್.ಅರುಣ್ ವಾದ ಮಂಡನೆ ಮಾಡಿದ್ದರು.

ಏನಿದು ಪ್ರಕರಣ : ವೈ.ಮಂಜುನಾಥ್ 1997ರಿಂದ 2002ರ ತನಕ ಬಿಎಂಟಿಸಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು.

2002ರ ಜುಲೈ 30ರಂದು ವಿಧಾನಸೌಧದಲ್ಲಿ ಚಾಲಕರ ಕೆಲಸಕ್ಕೆ ಅರ್ಜಿ ಹಾಕಿದ್ದರು. ನವೆಂಬರ್ 23, 1962ರಲ್ಲಿ ಜನಿಸಿದ್ದ ಅವರು, ಆಗಸ್ಟ್ 11, 1962ರಲ್ಲಿ ಹುಟ್ಟಿದ್ದಾಗಿ ಜನ್ಮ ದಿನಾಂಕ ಬದಲಾವಣೆ ಮಾಡಿದ್ದರು. 1997ರಿಂದ 2001ರ ತನಕ ಖಾಸಗಿ ಕಂಪನಿಯಲ್ಲಿ ಚಾಲಕನಾಗಿದ್ದೆ ಎಂದು ಫೋರ್ಜರಿ ಮಾಡಿದ ಅನುಭವ ಪತ್ರ ಸೇರಿದಂತೆ ಇತರ ದಾಖಲೆ ಒದಗಿಸಿದ್ದರು.

ವಿಧಾನಸೌಧದಲ್ಲಿ ಕೆಲಸ ಸಿಕ್ಕ ಮೂರು ವರ್ಷದ ಬಳಿಕ ಮಂಜುನಾಥ್ ಮಾಡಿದ ಫೋರ್ಜರಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಗೆ ವಿಧಾನಸೌಧದ ಸಿಬ್ಭಂದಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಫೋರ್ಜರಿ ಮಾಡಿರುವುದು ಪತ್ತೆಯಾಗಿತ್ತು.

ಪ್ರಕರಣದ ಕುರಿತು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 4 ವರ್ಷಗಳ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+