ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಲಾಕ್: ಐಟಿ ಕಂಪನಿಗಳ ಪಕ್ಕದಲ್ಲೇ ಅಬ್ಬರಿಸುತ್ತಿದ್ದ ವ್ಯಾಘ್ರ!
ಬೆಂಗಳೂರಿನ ಐಟಿ ತವರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಓಡಾಡುತ್ತಾ ಜನರಿಗೆ ತುಂಬಾ ಟೆನ್ಷನ್ ಆಗಿತ್ತು. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ಬಳಿಯೇ ಚಿರತೆಯ ಓಡಾಟ ಕಂಡು ಜನರು ಬೆಚ್ಚಿಬಿದ್ದಿದ್ದರು. ಯಾವಾಗ ಚಿರತೆ ಸೆರೆ ಹಿಡಿಯುತ್ತಾರೆ? ಎನ್ನುವ ಚಿಂತೆ ಕೂಡ ಕಾಡುತ್ತಿತ್ತು. ಅರಣ್ಯ ಇಲಾಖೆ ಕೂಡ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತಿರುವ ಚಿರತೆ ಸೆರೆ ಹಿಡಿಯಲು ಅಲರ್ಟ್ ಆಗಿತ್ತು. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿ ಭಾಗದ ಹೆಲಿಪ್ಯಾಡ್ ಸಮೀಪದಲ್ಲೇ ಆಘಾತಕಾರಿ ವಿಚಾರ ಒಂದು ಬಯಲಾಗಿದೆ!
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಆದಾಯ ತರುವ ಕಂಪನಿಗಳು ಇವೆ. ಇನ್ಫೋಸಿಸ್, ವಿಪ್ರೋ, ಸಿಮೆನ್ಸ್, ಎಚ್‌ಸಿಎಲ್ ಹೀಗೆ ನೂರಾರು ಕಂಪನಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹುಟ್ಟಿಕೊಂಡಿವೆ. ಹೀಗಿದ್ದರೂ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಜಾಗದಲ್ಲಿ ಈಗ ಕೂಡ ಹಸಿರು, ಹಸಿರು ವಾತಾವರಣ ಇದೆ. ಬೆಂಗಳೂರಿನ ಹೊರ ವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಲಿ ಜಾಗಗಳು ಸಾಕಷ್ಟು ಇವೆ. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿಯ ಹೆಲಿಪ್ಯಾಡ್ ಪ್ರದೇಶದಲ್ಲಿ ಸಾಕಷ್ಟು ಮರ & ಗಿಡ ತುಂಬಿ ಹೋಗಿವೆ. ಇದರ ಜೊತೆಗೆ ಪೊದೆಗಳು ಕೂಡ ಇವೆ. ಹೀಗೆ ಖಾಲಿ ಇದ್ದ ಜಾಗದಲ್ಲೇ ಚಿರತೆ ಒಂದು ಸೇರಿಕೊಂಡಿತ್ತು!

ಹೆಲಿಕಾಪ್ಟರ್ ಇರುವ ಜಾಗದಲ್ಲಿ ಚಿರತೆ!
ಚಿರತೆ ಮೊದಲಿಗೆ ಆನೇಕಲ್‌ನ ಜಿಗಣಿ ಸಮೀಪದ ಕ್ಯಾಲಸನಹಳ್ಳಿಯ ಲೇಔಟ್ ಒಂದರ ಬಳಿ ಓಡಾಟ ನಡೆಸಿತ್ತು. ಹೀಗೆ ಲೇಔಟ್ ಬಳಿ ಚಿರತೆ ಓಡಾಡುತ್ತಿದೆ ಎಂಬುದು ಸಿಸಿ ಕ್ಯಾಮೆರಾದಲ್ಲಿ ಕೂಡ ರೆಕಾರ್ಡ್ ಆಗಿತ್ತು. ಅದೇ ಚಿರತೆ ಕೊನೆಗೆ ಎಲೆಕ್ಟ್ರಾನಿಕ್ ಸಿಟಿ ಪ್ರದೇಶಕ್ಕೂ ನುಗ್ಗಿಬಿಟ್ಟಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಯಾಕಂದ್ರೆ ಕೆಲವೇ ದಿನಗಳ ಹಿಂದೆ ಚಿರತೆ ಒಂದು ರೋಡ್‌ನಲ್ಲಿ ಓಡಾಟ ನಡೆಸಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಇದರ ಜಾಡನ್ನು ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಡುಕಾಟ ನಡೆಸಿದ ಪರಿಣಾಮ ಇದೀಗ ಹೆಲಿಪ್ಯಾಡ್‌ನ ಪೊದೆಯಲ್ಲಿ ಚಿರತೆ ಬೋನಿಗೆ ಬಿದ್ದು ಲಾಕ್ ಆಗಿದೆ.
20 ವರ್ಷದಲ್ಲಿ ಕಾಡು ನಾಶ
ಬೆಂಗಳೂರು ದೊಡ್ಡದಾಗಿ ಬೆಳೆದಂತೆಲ್ಲಾ ಕಾಡು ನಾಶವಾಗುತ್ತಿದೆ. ಅದರಲ್ಲೂ ಈ ಮಹಾನಗರಿ ಬೆಂಗಳೂರು ಬೆಳೆಸಲು, ಕಳೆದ 20 ವರ್ಷಗಳಲ್ಲಿ ಬೆಂಗಳೂರು ಹೊರ ವಲಯದ ಕಾಡುಗಳನ್ನೂ ನಾಶ ಮಾಡಲಾಗಿದೆ. ಇದರ ಪರಿಣಾಮ ಕಾಡು ಪ್ರಾಣಿಗಳು ನಗರಕ್ಕೆ ಬಂದು ಕಾಟ ಕೊಡುತ್ತಿವೆ. ಕಳೆದ ಕೆಲವು ವರ್ಷಗಳಿಂದ ಹೀಗೆ ಚಿರತೆಗಳ ಹಾವಳಿಗೆ ಬೆಂಗಳೂರಿಗರು ಬೆಚ್ಚಿದ್ದಾರೆ. ಪರಿಸ್ಥಿತಿ ಕೈಮೀರಿದರೆ ಹೇಗಪ್ಪಾ ಎಂಬ ಚಿಂತೆಯಲ್ಲಿದ್ದಾರೆ ಕನ್ನಡಿಗರು. ಈ ಸಮಯದಲ್ಲಿ ನೇರವಾಗಿ ಚಿರತೆ ಎಲೆಕ್ಟ್ರಾನಿಕ್ ಸಿಟಿಗೆ ಎಂಟ್ರಿ ಕೊಟ್ಟು ಭಯವೂ ಮೂಡಿಸಿತ್ತು. ಆದರೆ ಇದೀಗ ಚಿರತೆ ಸೆರೆ ಹಿಡಿದು ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಲಾಗಿದೆ.
ಚಿರತೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿಕಿತ್ಸೆ ನೀಡಿದ ನಂತರ ಅದನ್ನು ಕಾಡಿಗೂ ಬಿಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಚಿಂತನೆ ನಡೆಸಿದ್ದಾರೆ. ಮತ್ತೊಂದು ಕಡೆ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಇರುವ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೇ, ಚಿರತೆಗಳು ಮತ್ತೆ ಈ ಪ್ರದೇಶದ ಕಡೆಗೆ ಹೆಜ್ಜೆ ಇಡದಂತೆ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ. ಅಲ್ಲದೆ ಪೊದೆ ರೀತಿ ಇರುವ ಜಾಗಗಳನ್ನ ಸ್ವಚ್ಛಗೊಳಿಸುವ ಕಾರ್ಯ ಕೂಡ ಆರಂಭವಾಗಲಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications