ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ವಿದೇಶಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ, ಆಸ್ಪತ್ರೆಗಳಲ್ಲಿ ಇಂದು 'ಮಾಕ್‌ ಡ್ರಿಲ್'

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ ವಿದೇಶಗಳಿಂದ ಬಂದ ಪ್ರಯಾಣಿಕರಿಂದ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಆರೋಗ್ಯ ಇಲಾಖೆ ಇಂದಿನಿಂದ ನಗರದ ಆಸ್ಪತ್ರೆಗಳಲ್ಲಿ ಸೋಂಕು ನಿಯಂತ್ರಣ ಸಿದ್ಧತೆ ಕುರಿತು 'ಮಾಕ್‌ ಡ್ರಿಲ್' (ಅಣಕು ಪರೀಕ್ಷೆ) ಕಾರ್ಯಕ್ರಮ ಆರಂಭಿಸಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸೋಮವಾರ ವಿದೇಶಗಳಿಂದ ಬಂದಿದ್ದ 119 ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಈ ಮೂಲಕ ವಿದೇಶಿ ಸೋಂಕಿತ ಪ್ರಯಾಣಿಕರ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಎರಡು ದಿನದ ಹಿಂದೆಯಷ್ಟೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದವರ ಪೈಕಿ ಒಟ್ಟು 12ಮಂದಿಗೆ ಪಾಸಿಟಿವ್ ಬಂದಿತ್ತು.

ಈ ಮೂಲಕ ಬೆಂಗಳೂರಿನಲ್ಲಿ ವಿದೇಶಿ ಪ್ರಯಾಣಿಕರಿಂದ ಸೋಂಕಿನ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಹೊಸದಾಗಿ ಪತ್ತೆಯಾದ ನಾಲ್ಕು ಪ್ರಕರಣಗಳಲ್ಲಿ ಸೋಂಕಿತರನ್ನು ಐಸೋಲೆಷನ್ ಮಾಡಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಕೊರೊನಾ ಅಲೆ ಕಂಡು ಬರುತ್ತಿದೆ. ಕೋವಿಡ್ ಮೊದಲ ಅಲೆಯಲ್ಲಿ ಇದ್ದ ಆರಂಭಿಕ ದಿನಗಳು ಮರುಕಳಿಸುತ್ತಿವೆ. ಇದಕ್ಕೆ ಪೂರಕವಾಗಿ ಈಗಾಗಲೇ ಡಿಸೆಂಬರ್22 ರಂದು 16 ಸೋಂಕಿತರು ಪತ್ತೆಯಾಗಿದ್ದರು. ಡಿಸೆಂಬರ್23 ರಂದು 10 ಸೋಂಕಿತರು ಪತ್ತೆ, ಡಿಸೆಂಬರ್ 24 ರಂದು 19 ಸೋಂಕಿತರು ಪತ್ತೆ, ಡಿಸೆಂಬರ್ 25 ರಂದು 22 ಸೋಂಕಿತರು ಪತ್ತೆಯಾಗಿದ್ದಾರೆ.

Foreign Covid Patients Has Increased To 16 In Bengaluru Mock Drill Today In Hospitals

ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್

ಕರ್ನಾಟಕಕ್ಕೆ ಕೊರೊನಾ ಹೊಸ ತಳಿ ಬಿಎಫ್‌7 ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಎಲ್ಲ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್ ಸಜ್ಜಾಗುತ್ತಿದೆ. ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್​ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಸಿ.ವಿ.ರಾಮನ್​ನಗರ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ ಸೇರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಂಗಳವಾರ ಮಾಕ್ ಡ್ರಿಲ್ ನಡೆಸುತ್ತಿದೆ.

ಇದರಡಿ ಕೋವಿಡ್ ನಿಯಂತ್ರಣ ಇಲ್ಲವೇ ತಡೆಗಟ್ಟಲು ಬೇಕಾದ ಆಕ್ಸಿಜನ್ ಪೂರೈಕೆ, ಹಾಸಿಗೆಗಳ ಸಿದ್ಧತೆ, ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ. ಆಕ್ಸಿಜನ್ ಪ್ಲಾಂಟ್‌ಗಳಲ್ಲಿ ಡ್ರೈರನ್ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಕ್ಸಿಜನ್ ಪ್ಲಾಂಟ್‌ಗಳು ಸರಿಯಾಗಿವೆಯೇ ಎಂದು ಅಧಿಕಾರಿಗಳು ಪರೀಶಿಲನೆಗೆ ಮುಂದಾಗಿದ್ದಾರೆ.

Foreign Covid Patients Has Increased To 16 In Bengaluru Mock Drill Today In Hospitals

ಆರಂಭಿಕ ಎರಡು ಕೊರೊನಾ ಅಲೆಗಳ ಸಂದರ್ಭದಲ್ಲಿ ಸರಿಯಾದ ಮಾಹಿತಿ ಹಾಗೂ ಆಕ್ಸಿಜನ್ ಕೊರತೆ ಇದ್ದ ಕಾರಣ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಕ್ಕಿರಲಿಲ್ಲ. ಅನೇಕ ಕಡೆಗಳಲ್ಲಿ ಸಾವು ಸಂಭವಿಸಿದ್ದವು. ಆದರೆ ಈಗ ಕೊರೊನಾ ಓಮಿಕ್ರಾನ್ ಉಪ ತಳಿ ಆತಂಕ ಎದುರಾಗಿದೆ. ಈ ಮಾಕ್‌ಡ್ರಿಲ್ ಮೂಲಕ ಈ ಬಾರಿ ಸೋಂಕಿತರಿಗೆ ಚಿಕಿತ್ಸೆಗೆ ತೊಂದರೆ ಯಾಗದಂತೆ ನೋಡಕೊಳ್ಳಲಾಗುತ್ತಿದೆ.

English summary
The numbers of Foreign Covid Patients has increased to 16 in Bengaluru mock drill today in hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X