ಎಲೆಕ್ಟ್ರಾನಿಕ್ಸ್ ಸಿಟಿ ಫೂಟ್‌ ಬ್ರಿಡ್ಜ್ ಸಾರ್ವಜನಿಕರಿಗೆ ಮುಕ್ತ

ಬೆಂಗಳೂರು, ಮೇ 10: ಸದಾ ವಾಹನಗಳ ದಟ್ಟಣೆಯಿಂದ ತುಂಬಿ ತುಳುಕುತ್ತಿರುವ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವುದೇ ದೊಡ್ಡ ಸಮಸ್ಯೆಯಾಗಿತ್ತು.

ಆದರೆ ಆ ಸಮಸ್ಯೆ ಈಗ ಬಗೆಹರಿದಿದೆ. ಎಲೆಕ್ಟ್ರಾನಿಕ್ಸ್ ಸಿಟಿಯ ಪೂರ್ವ ಹಾಗೂ ಪಶ್ಚಿಮ ಭಾಗವನ್ನು ಸಂಪರ್ಕಿಸುವ ಫೂಟ್‌ ಬ್ರಿಡ್ಜ್ ನಿರ್ಮಾಣ ಕಾರ್ಯ ಮುಗಿದಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.

ಈ ಫೂಟ್ ಬ್ರಿಡ್ಜ್ ಮೂರು ಎಲಿವೇಟರ್‌ಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಇಂಟಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಈ ಫೂಟ್‌ಬ್ರಿಡ್ಜ್‌ನ್ನು ನಿರ್ಮಿಸಿದೆ. ಸುಮಾರು 1.6 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣಗೊಂಡಿದೆ.

Foot overbridge at Electronic City is ready for public

ವಾಹನಗಳ ಕಿರಿಕಿರಿ ಇಲ್ಲದೆ ದಿನಕ್ಕೆ ಈ ಫೂಟ್‌ಬ್ರಿಡ್ಜ್‌ ಮೇಲೆ 30 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸಲಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಪಾದಚಾರಿ ಸ್ನೇಹಿಯನ್ನಾಗಿ ಮಾಡುವುದು ನಮ್ಮ ಉದ್ದೇಶ, ಹಾಗೆಯೇ ಪಾದಚಾರಿಗಳ ಸುರಕ್ಷತೆಯ ಕಡೆಗೂ ಗಮನ ಹರಿಸಬೇಕಿದೆ.

Foot overbridge at Electronic City is ready for public

ಒಂದು ರಸ್ತೆಯಿಂದ ಇನ್ನೊಂದು ರಸ್ತೆ ದಾಟಲು ಪ್ರಯಾಣಿಕರು ಇನ್ನುಮುಂದೆ ಕಷ್ಟಪಡುವಂತಿಲ್ಲ. ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲದ ಕಾರಣ ಪರಿಸರ ಮಾಲಿನ್ಯ ಪ್ರಮಾಣವೂ ಕೂಡ ತಗ್ಗಲಿದೆ ಎನ್ನುವುದು ಸಂಸ್ಥೆಯ ಸಿಇಓ ಎನ್‌ಎಸ್ ರಮಾ ಅವರ ನಂಬಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+