ಡಿಸೆಂಬರ್ 15 ರಿಂದ ಬೆಂಗಳೂರು- ಪೋರ್ಟ್ ಬ್ಲೇರ್ ನಡುವೆ ವಿಮಾನಯಾನ ಆರಂಭ
ಬೆಂಗಳೂರು, ನವೆಂಬರ್ 24: ಡಿಸೆಂಬರ್ 15 ರಿಂದ ಬೆಂಗಳೂರು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ನಡುವೆ ದೈನಂದಿನ ವಿಮಾನ ಸೇವೆಗಳನ್ನು ಪ್ರಾರಂಭಿಸುವುದಾಗಿ ಖಾಸಗಿ ವಿಮಾನಯಾನ ಸಂಸ್ಥೆ ಆಕಾಶ ಏರ್ ತಿಳಿಸಿದೆ.
ಈ ವಿಮಾನವು ಚೆನ್ನೈ ಮೂಲಕ ಸಾಗಲಿದೆ ಎಂದು ವಿಮಾನಯಾನ ಸಂಸ್ಥೆ ಬುಧವಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಆಕಾಶ ಏರ್‌ನ 17ನೇ ದೇಶೀಯ ತಾಣವಾಗಿದೆ. ಚೆನ್ನೈನಲ್ಲಿ ವಿಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಈ ಹೆಚ್ಚುವರಿ ಹಾರಾಟವು ಪ್ರವಾಸಿ ಕೇಂದ್ರ ಮತ್ತು ಎರಡು ಪ್ರಮುಖ ಮೆಟ್ರೋಪಾಲಿಟನ್ ನಗರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.

ಹೊಸ ದೈನಂದಿನ ವಿಮಾನಗಳ ವೇಳಾಪಟ್ಟಿ ಇಲ್ಲಿದೆ:
ವಿಮಾನ ಸಂಖ್ಯೆ ಕ್ಯುಪಿ 1485 ಅನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಸುಮಾರು 7:05 ಕ್ಕೆ ತಮಿಳುನಾಡು ರಾಜಧಾನಿ ಚೆನ್ನೈ ತಲುಪಲು ನಿಗದಿಪಡಿಸಲಾಗಿದೆ. ಇದು ಚೆನ್ನೈನಿಂದ ಬೆಳಗ್ಗೆ 7:45ಕ್ಕೆ ಹೊರಟು 9:55ಕ್ಕೆ ಪೋರ್ಟ್ ಬ್ಲೇರ್ ತಲುಪಲಿದೆ. ವಿಮಾನ ಸಂಖ್ಯೆ ಕ್ಯುಪಿ 1486 ನಂತರ ಪೋರ್ಟ್ ಬ್ಲೇರ್‌ನಿಂದ ಬೆಳಿಗ್ಗೆ 10:35 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಚೆನ್ನೈ ತಲುಪುತ್ತದೆ ಮತ್ತು ಬೆಂಗಳೂರು ನಗರಕ್ಕೆ ಮಧ್ಯಾಹ್ನ 1:35 ಕ್ಕೆ ಟೇಕ್ ಆಫ್ ಆಗಿ 2:50 ಕ್ಕೆ ತಲುಪುತ್ತದೆ.
"ಅಂಡಮಾನ್‌ನಲ್ಲಿ ಕಾರ್ಯಾಚರಣೆಯ ಪ್ರಾರಂಭವು ನೆಟ್‌ವರ್ಕ್ ವಿಸ್ತರಣೆಯಲ್ಲಿನ ನಮ್ಮ ನಿರಂತರ ಪ್ರಯತ್ನಗಳತ್ತ ಮತ್ತೊಂದು ಹೆಜ್ಜೆಯಾಗಿದೆ. ಪೋರ್ಟ್ ಬ್ಲೇರ್ ಆಕರ್ಷಕ ಪ್ರವಾಸಿ ತಾಣವಾಗಿದೆ. ಹೀಗಾಗಿ ವಿಶ್ವಾಸಾರ್ಹ ಸೇವೆ ಮತ್ತು ಕೈಗೆಟುಕುವ ದರಗಳು ಹೆಚ್ಚಿನ ಗ್ರಾಹಕರು ದ್ವೀಪಕ್ಕೆ ಭೇಟಿ ನೀಡಲು ಮತ್ತು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ ಎಂದು ಆಕಾಶ ಏರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಹೇಳಿದರು.
ಈ ವಿಮಾನಯಾನವನ್ನು ಆಗಸ್ಟ್ 2022 ರಲ್ಲಿ ಪ್ರಾರಂಭಿಸಲಾಗಿತ್ತು. ಮುಂಬೈ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ, ದೆಹಲಿ, ಗುವಾಹಟಿ, ಅಗರ್ತಲಾ, ಪುಣೆ, ಲಕ್ನೋ, ಗೋವಾ, ಹೈದರಾಬಾದ್, ವಾರಣಾಸಿ, ಬಾಗ್ಡೋಗ್ರಾ, ಭುವನೇಶ್ವರ ಮತ್ತು ಕೋಲ್ಕತ್ತಾದಂತಹ ಭಾರತದಾದ್ಯಂತ 16 ನಗರಗಳನ್ನು ಸಂಪರ್ಕಿಸುತ್ತದೆ.
"ಪೋರ್ಟ್ ಬ್ಲೇರ್‌ನ ದ್ವೀಪವು ಉಷ್ಣವಲಯದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೇಂದ್ರಾಡಳಿತ ಪ್ರದೇಶಕ್ಕೆ ಆಕಾಶ ಏರ್‌ನ ಕಾರ್ಯಾರಂಭವು ದೇಶದಾದ್ಯಂತ ತನ್ನ ಕಾರ್ಯಾಚರಣೆಗಳನ್ನು ಬಲಪಡಿಸುವ ಏರ್‌ಲೈನ್‌ನ ಬದ್ಧತೆಗೆ ಸಾಕ್ಷಿಯಾಗಿದೆ. ಪ್ರಯಾಣಿಕರಿಗೆ ನಗರಗಳ ನಡುವೆ ಸಂಪರ್ಕ ಸಾಧಿಸಲು ಮತ್ತು ಹಾರಲು ಹೆಚ್ಚಿನ ಆಯ್ಕೆಗಳನ್ನು ಅನುಮತಿಸುತ್ತದೆ. ಗಮ್ಯಸ್ಥಾನಗಳ ಸಂಖ್ಯೆ ಹೆಚ್ಚುತ್ತಿದೆ" ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.












Click it and Unblock the Notifications