ಬೆಂಗಳೂರಿನಲ್ಲೇ 5 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಪೊಲೀಸರು ಸೇಫ್
ಬೆಂಗಳೂರು, ಸೆ.29: ಐದು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳು ಸೇಫ್, ವರ್ಗಾವಣೆ ನಿಯಮ ಸಡಿಲಗೊಳಿಸಲು ಚಿಂತನೆ ನಡೆಯುತ್ತಿದೆ.
ಐದು ವರ್ಷ ಬೆಂಗಳೂರಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳನ್ನು ನಗರ ಕಮಿಷನರೇಟ್ ವ್ಯಾಪ್ತಿಯಿಂದ ಹೊರಗೆ ಕಳುಹಿಸಬೇಕು ಎನ್ನುವ ನಿಯಮವನ್ನು ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಲ್ಲಿ ಕರ್ತವ್ಯ ನಿರ್ವಹಿಸಲು ಐದು ವರ್ಷ ಮಿತಿ ಹಾಕಲಾಗುತ್ತಿತ್ತು, ಹೊಸ ಸರ್ಕಾರ ಬಂದ ನಂತರವೂ ಇದೇ ನಿಯಮವನ್ನು ಮುಂದುವರೆಸಲಾಗಿತ್ತು ಆದರೆ ಈ ಕುರಿತು ಆಲೋಚಿಸಿರುವ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ನಿಯಮದ ಸಡಿಲಿಕೆಗೆ ಮುಂದಾಗಿದ್ದಾರೆ.
ಈ ಬಗ್ಗೆ ಗೇಹ ಸಚಿವರ ಒಪ್ಪಿಗೆ ಸಿಕ್ಕ ಬಳಿಕವೇ ನಿಯಮ ಬದಲಾವಣೆ ಸಂಬಂಧ ಕಡತ ಸಿದ್ದಗೊಂಡಿದ್ದು, ಗೃಹ ಕಾರ್ಯದರ್ಶಿಗಳ ಒಪ್ಪಿಗೆಗಾಗಿ ಕಾಯುತ್ತಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಕಡತಕ್ಕೆ ಸಹಿ ಬಿದ್ದು ಹೊಸ ನಿಯಮ ಹೊರ ಬಿರಲಿದೆ.

ಐದು ವರ್ಷದ ಮಿತಿಗೆ ಕಾರಣವೇನು?
ನಿವೃತ್ತ ಐಪಿಎಲ್ ಅಧಿಕಾರಿ ಕೆಂಪಯ್ಯಹಿಂದಿನ ಸರ್ಕಾರದಲ್ಲಿ ಗೃಹ ಸಚಿವರ ಸಲಹೆಗಾರರಾಗಿದ್ದು, ಈ ಸಂದರ್ಭದಲ್ಲಿ ಐದು ವರ್ಷದ ಮಿತಿ ಹಾಕಲಾಗಿತ್ತು, ಈ ಮಿತಿಗೆ ಮೂಲ ಕಾರಣವೇನೆಂದರೆ ಪೊಲೀಸರು ಐದು ವರ್ಷದಲ್ಲಿ ಬೆಂಗಳೂರನ್ನು ತಮ್ಮ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಸತ್ಯ ಆದರೆ, ಹೊಸ ಅಧಿಕಾರಿಗಳು ಬಂದರೆ ಇನ್ನಷ್ಟು ಮಾಫಿಯಾ, ಜಾಲಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ ಎಂದು ತಿಳಿಸಿದ್ದರು.

ಎಲ್ಲಾ, ಜಾತಿ ವರ್ಗದ ಅಧಿಕಾರಿಗಳಿಗೆ ಅವಕಾಶ
ಐದು ವರ್ಷಕ್ಕಿಂತ ಹೆಚ್ಚು ಒಂದೇ ಜಾಗದಲ್ಲಿದ್ದರೆ ಜಾತಿ, ವರ್ಗಗಳ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತದೆ ಹೀಗಾಗಿ ಸಮಾನತೆಯನ್ನು ತರಲು ಐದು ವರ್ಷಕ್ಕೊಮ್ಮೆ ಪೊಲೀಸರ ವರ್ಗಾವಣೆ ಮಾಡಲಾಗುತ್ತಿತ್ತು.

ರಾಜಕಾರಣಿ, ರಿಯಲ್ ಎಸ್ಟೇಟ್ ಮಾಫಿಯಾ ಜತೆ ಹೊಂದಾಣಿಕೆ
ಸ್ಥಳೀಯ ರಾಜಕಾರಣಿ ಮತ್ತು ರಿಯಲ್ ಎಸ್ಟೇಟ್ ಸೇರಿ ಇತರೆ ಮಾಫಿಯಾ ಜತೆ ಹೊಂದಾಣಿಕೆ ಮಾಡಿಕೊಂಡು ಅವರ ಮುಲಾಜಿಗೆ ಅಧಿಕಾರಿಗಳು ಸಿಕ್ಕಿಕೊಂಡಿದ್ದಾರೆ ಎನ್ನುವುದು ಪೊಲೀಸರನ್ನು ವರ್ಗಾವಣೆ ಮಾಡಲು ಕಾರಣವಾಗಿತ್ತು.

ಮಿತಿ ಸಡಿಲಿಕೆಗೆ ಪ್ರಮುಖ ಕಾರಣಗಳೇನು?
-ಐದು ವರ್ಷ ಮಿತಿ ಹಾಕಿದ್ದರ ಹಿಂದಿನ ಉದ್ದೇಶಗಳು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು
-ಬೆಂಗಳೂರಿಗೆ ಬಂದ ಹೊಸ ಅಧಿಕಾರಿಗಳು, ಠಾಣಾಧಿಕಾರಿಗಳು ಇಲ್ಲಿನ ಅಪರಾಧ ಸ್ವರೂಪ, ಅನೇಕ ಜಾಲ ಮತ್ತು ಮಾಫಿಯಾಗಳ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸದಿರುವುದು.-ಢಾಣೆಗಳಿಗೆ ಬಂದ ವರ್ಷ ತಮ್ಮ ವ್ಯಾಪ್ತಿಗಳನ್ನೇ ಸಮರ್ಪಕವಾಗಿ ಗುರುತಿಸಿಕೊಳ್ಳಲು, ಠಾಣಾ ವ್ಯಾಪ್ತಿಯ ಅಪರಾಧಿಗಳನ್ನು ಹದ್ದುಬಸ್ತಿನಲ್ಲಿಡಲು ವಿಫಲರಾಗಿರುವುದು ಪ್ರಮುಖ ಕಾರಣವಾಗಿದೆ.











Click it and Unblock the Notifications