Namma Metro: ಬೆಂಗಳೂರಲ್ಲಿ 5 ಹೊಸ ನಮ್ಮ ಮೆಟ್ರೋ ಡಿಪೋ ನಿರ್ಮಾಣ

ಬೆಂಗಳೂರು, ಆಗಸ್ಟ್ 06: ನಮ್ಮ ಮೆಟ್ರೋ ಉದ್ಯಾನ ನಗರಿ ಬೆಂಗಳೂರು ನಗರದ ಜನರ ಜೀವನಾಡಿಯಾಗುತ್ತಿದೆ. ಪ್ರತಿದಿನ 5 ಲಕ್ಷಕ್ಕೂ ಅಧಿಕ ಜನರು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ವರ್ಷ ಇನ್ನೂ ಎರಡು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಪ್ರಾಯೋಗಿಕ ಸಂಚಾರವೂ ಆರಂಭವಾಗಿದೆ.

2041ರ ವೇಳೆಗೆ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ಹಲವು ಹೊಸ ಹೊಸ ಯೋಜನೆ ರೂಪಿಸುತ್ತಿದೆ. ಇದರ ಭಾಗವಾಗಿಯೇ 5 ಹೊಸ ಡಿಪೋಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

Five New Depots To Maintenan Namma Metro Trains

ಪ್ರಸ್ತುತ ನಗರದಲ್ಲಿ 3 ನಮ್ಮ ಮೆಟ್ರೋ ಡಿಪೋಗಳಿವೆ. ರೈಲುಗಳ ನಿರ್ವಹಣೆ ಸೇರಿದಂತೆ ವಿವಿಧ ತಾಂತ್ರಿಕ ಕೆಲಸಗಳಿಗೆ ಡಿಪೋ ಬಳಕೆಯಾಗುತ್ತಿದೆ. ರೈಲುಗಳ ಸಂಖ್ಯೆ ಅಧಿಕವಾಗುವುದರಿಂದ ಡಿಪೋಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

ಸದ್ಯ ಬೈಯಪ್ಪನಹಳ್ಳಿಯಲ್ಲಿರುವ ಡಿಪೋ ಸಂಪೂರ್ಣವಾಗಿ ಪುನರ್ ಅಭಿವೃದ್ಧಿಗೊಳಿಸಲಾಗುತ್ತದೆ. ಎರಡು ಹಂತಗಳಲ್ಲಿ ಎರಡು ಮೆಟ್ರೋ ಮಾರ್ಗದ ರೈಲುಗಳ ನಿರ್ವಹಣೆ ಮಾಡುವಂತೆ ಡಿಪೋವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಎಷ್ಟು ವೆಚ್ಚವಾಗಲಿದೆ?: ಬೈಯಪ್ಪನಹಳ್ಳಿಯಲ್ಲಿರುವ ನಮ್ಮ ಮೆಟ್ರೋ ಡಿಪೋವನ್ನು ಸಂಪೂರ್ಣವಾಗಿ 249.19 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗುತ್ತದೆ. ಎರಡು ಹಂತದ ನಿರ್ವಹಣಾ ವ್ಯವಸ್ಥೆ ಇರುವ ಮೊದಲ ಡಿಪೋ ಎಂಬ ಹೆಗ್ಗಳಿಗೆ ಈ ಡಿಪೋಗೆ ಸೇರಲಿದೆ.

ಈ ಡಿಪೋದಲ್ಲಿ ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಸಾಗುವ 16, ವಿಮಾನ ನಿಲ್ದಾಣ ಮಾರ್ಗದಲ್ಲಿ ಸಾಗುವ 21 ರೈಲುಗಳ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಈ ಎರಡೂ ಮಾರ್ಗಗಳು ವಿರುದ್ಧ ದಿಕ್ಕಿನಲ್ಲಿದ್ದು, ಅವುಗಳು ಬಂದು ಹೋಗಲು ಅನುಕೂಲವಾಗುವಂತೆ ಡಿಪೋದಲ್ಲಿ ಬದಲಾವಣೆ ಮಾಡಲಾಗುತ್ತದೆ.

ಈ ಎರಡು ನಿರ್ವಹಣಾ ಲೈನ್‌ಗಳ ಪೈಕಿ ಒಂದು ನೆಲದಡಿಯಲ್ಲಿ ನಿರ್ಮಾಣವಾಗಲಿದೆ. ಇಲ್ಲಿ 21 ರೈಲುಗಳನ್ನು ನಿರ್ವಹಣೆ ಮಾಡಲಾಗುತ್ತದೆ. ನೆಲದ ಮೇಲಿನ ಲೈನ್‌ನಲ್ಲಿ 20 ರೈಲು ನಿರ್ವಹಣೆ ಮಾಡುವಷ್ಟು ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

2026-28ರ ನಡುವೆ ನಮ್ಮ ಮೆಟ್ರೋ ರೈಲುಗಳ ಸಂಖ್ಯೆ 159 ಆಗಲಿದೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ. ಸದ್ಯ ಇರುವ ಡಿಪೋಗಳಲ್ಲಿ ಇಷ್ಟು ಸಂಖ್ಯೆಯ ರೈಲುಗಳನ್ನು ನಿರ್ವಹಣೆ ಮಾಡುವುದು ಸವಾಲು ಆಗಲಿದೆ. ಆದ್ದರಿಂದ ಹೊಸ ಡಿಪೋಗಳ ನಿರ್ಮಾಣದ ಯೋಜನೆಯನ್ನು ರೂಪಿಸಲಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಶೆಟ್ಟಿಗೆರೆ ಡಿಪೋವನ್ನು 182.33 ಕೋಟಿ, ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಶೇ 49ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 21 ರೈಲುಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗುತ್ತಿದ್ದು, ನಮ್ಮ ಮೆಟ್ರೋ-2ನೇ ಹಂತದ ರೈಲುಗಳನ್ನು ಇಲ್ಲಿ ನಿರ್ವಹಿಸಲಾಗುತ್ತದೆ.

ಕೊತ್ತನೂರು ಡಿಪೋ ಹಳದಿ ಮಾರ್ಗದ ರೈಲುಗಳನ್ನು ನಿರ್ವಹಣೆ ಮಾಡಲಿದೆ. ಈ ಡಿಪೋದ ಶೇ 60ರಷ್ಟು ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಅಂಜನಾಪುರ ಡಿಪೋದ ಶೇ 50ರಷ್ಟು ಕಾಮಗಾರಿ ಪೂರ್ಣವಾಗುತ್ತಾ ಬಂದಿದೆ.

ರೂ. 499 ಕೋಟಿ ರೂ. ವೆಚ್ಚದಲ್ಲಿ ಚೆಲ್ಲಘಟ್ಟ ಡಿಪೋ ನಿರ್ಮಾಣವಾಗುತ್ತಿದೆ. 38 ರೈಲುಗಳ ನಿರ್ವಹಣೆ ಇಲ್ಲಿ ಆಗಲಿದೆ. ಹೆಬ್ಬಗೋಡಿ ಡಿಪೋದ ಶೇ 99ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದ ರೈಲು ಇಲ್ಲಿ ನಿರ್ವಹಣೆ ಆಗಲಿದ್ದು, ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ.

ಸದ್ಯ ಕಾಡುಗೋಡಿ ಡಿಪೋ ನೇರಳೆ ಮಾರ್ಗ ಮತ್ತು ಪೀಣ್ಯ ಡಿಪೋ ಹಸಿರು ಮಾರ್ಗದ ರೈಲುಗಳ ನಿರ್ವಹಣೆ ನೋಡಿಕೊಳ್ಳುತ್ತಿದೆ. ಬೈಯಪ್ಪನಹಳ್ಳಿಯ ಡಿಪೋ ಪುನರ್ ನಿರ್ಮಾಣ ಕಾಮಗಾರಿಗಾಗಿ ಎಲ್ಲಾ ರೈಲುಗಳನ್ನು ಕಾಡುಗೋಡಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಬೈಯಪ್ಪನಹಳ್ಳಿಯಲ್ಲಿರುವ ಕಂಟ್ರೋಲ್ ರೂಂ ಕಾರ್ಯ ನಿರ್ವಹಣೆ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+