ಶ್ರೀಲಂಕಾ ಸ್ಫೋಟ: ಬೆಂಗಳೂರು ತಲುಪಿದ ಐವರು ಕನ್ನಡಿಗರ ಮೃತದೇಹ
ಬೆಂಗಳೂರು, ಏ.24: ಶ್ರೀಲಂಕಾದ ಕೊಲಂಬೋದಲ್ಲಿ ಭಾನುವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 8 ಕನ್ನಡಿಗರ ಪೈಕಿ ಐವರ ಮೃತದೇಹ ಬೆಂಗಳೂರು ತಲುಪಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಯುಎಲ್-173 ಶ್ರೀಲಂಕಾ ಏರ್ ಲೈನ್ಸ್ ವಿಮಾನದ ಮೂಲಕ ನಾಲ್ವರ ಮೃತದೇಹವನ್ನು ರವಾನೆ ಮಾಡಲಾಗಿದ್ದು, ಮಧ್ಯರಾತ್ರಿ 2.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತ್ತು. ಇದೇ ವೇಳೆ ನೆಲಮಂಗಲ ಶಾಸಕ ಶ್ರೀನಿವಾಸ್, ಇ.ಕೃಷ್ಣಪ್ಪ ಬೆಂಗಳೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಮೃತರಾದವರು ನೆಲಮಂಗಲ, ಕಾಚನಹಳ್ಳಿ ಜೆಡಿಎಸ್ ಮುಖಂಡ ಹನುಮಂತರಾಯಪ್ಪ, ಲಕ್ಷ್ಮೀ ನಾರಾಯಣ, ಶಿವಕುಮಾರ್, ದಾಸರಹಳ್ಳಿಯ ರಂಗಪ್ಪ ಈ ನಾಲ್ವರ ಮೃತದೇಹಗಳು ಶ್ರೀಲಂಕಾದಿಂದ ರವಾನೆಯಾಗಿದೆ. ರಂಗಪ್ಪ ಮೃತದೇಹ ದಾಸರಹಳ್ಳಿಯ ಚೊಕ್ಕಸಂದ್ರದ ನಿವಾಸಕ್ಕೆ ರವಾನೆಯಾಗಿದೆ.

ಉಳಿದ ಮೂವರ ಮೃತದೇಹಗಳನ್ನು ನೆಲಮಂಗಲದ ಅವರವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಶಿವಕುಮಾರ್ ಮೃತದೇಹಗಳನ್ನು ನೆಲಮಂಗಲದ ಜ್ಯೂನಿಯರ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡುವ ಸಾಧ್ಯತೆ ಇದೆ.
ಜೆಡಿಎಸ್ ಮುಖಂಡ, ತುಮಕೂರು ನಿವಾಸಿ ರಮೇಶ್, ಅಡಕಮಾರನಹಳ್ಳಿಯ ಮಾರೇಗೌಡ ಹಾಗೂ ನೆಲಮಂಗಲ ಹಾರೋಕ್ಯಾತನಹಳ್ಳಿಯ ಪುಟ್ಟರಾಜು ಈ ಮೂವರ ಮೃತದೇಹಗಳು ಇಂದು ಮಧ್ಯಾಹ್ನ ಬೆಂಗಳೂರಿಗೆ ಕರೆತರಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಟಿಎಂ ಲೇಔಟ್‌ನಾಗರಾಜ್ ರೆಡ್ಡಿ ಮೃತದೇಹ ಕೂಡ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ರವಾನೆಯಾಗಿದೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ 11.30ಕ್ಕೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications