ದರೋಡೆಗೆ ಹೊಂಚು : ಐವರ ಬಂಧನ

ಬೆಂಗಳೂರು, ಡಿ. 9: ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ಐವರನ್ನು ಎಸ್.ಆರ್. ನಗರ ಪೊಲೀಸರು ಬಂಧಿಸಿದ್ದಾರೆ. ಇದರಿಂದ ನಗರದಲ್ಲಿ ನಡೆಯಲಿದ್ದ ದರೋಡೆಯೊಂದು ತಪ್ಪಿದಂತಾಗಿದೆ.

ಬಂಧಿತರಿಂದ ಏಳು ಮೊಬೈಲ್ ಫೋನ್, ಡ್ಯಾಗರ್, ಕಬ್ಬಿಣದ ರಾಡು, ಮರದ ದೊಣ್ಣೆ, ಮೂರು ಖಾರದ ಪುಡಿ ಪೊಟ್ಟಣ, ಮಾರುತಿ ಸ್ವಿಫ್ಟ್ ಕಾರು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳೆಲ್ಲರೂ 20ರಿಂದ 30 ವರ್ಷ ವಯಸ್ಸಿನ ಯುವಕರು. [ಓವೈಸಿ ಹತ್ಯೆಗೆ ಸಂಚು]

ಆರೋಪಿಗಳಿವರು: ಜೆಪಿ ನಗರದ ಆರ್‌ಬಿಎ ಲೇ ಔಟ್‌ನ 7ನೇ ಹಂತದಲ್ಲಿರುವ ಎಲಿಟಾ ಅಪಾರ್ಟ್‌ಮೆಂಟ್‌ ನಿವಾಸಿ ಕಾರ್ತಿಕ್ ಗೋಪಾಲ (25), ಕುಮಾರಸ್ವಾಮಿ ಲೇ ಔಟ್‌ನ ಎಲೆಚೇನಹಳ್ಳಿಯ ಮಂಜುನಾಥ ಮಹಾದೇವಪ್ಪ (28), ಜಯ ನಗರದ 9ನೇ ವಿಭಾಗದ ಲತೇಶ ನಟರಾಜ (23), ಜಯ ನಗರದ 4ನೇ ಟಿ ಬ್ಲಾಕ್‌ನ ಸುನಿಲ್ ವೆಂಕಟೇಶ ಮೂರ್ತಿ (22) ಹಾಗೂ ಹೊಸೂರು ರಸ್ತೆಯ ಪ್ರವೀಣ ಕುಮಾರ್ ಮುನಿಸ್ವಾಮಿ (30) ಬಂಧಿತ ಆರೋಪಿಗಳು. [ಕುಖ್ಯಾತ ಕುಣಿಗಲ್ ಗಿರಿ ವಿವರ]

police

ಉದ್ಯಮಿ ಅಪಹರಣಕ್ಕೆ ಸಂಚು: ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ರಿಚ್ಮಂಡ್ ವೃತ್ತದಲ್ಲಿ ಉದ್ಯಮಿ ಅಂಕಿತ್ ಜೈನ್ ಅವರನ್ನು ಅಪಹರಿಸಲು ಯತ್ನಿಸಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಈ ಕುರಿತು ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. [ಬಾಬಾ ರಾಮಪಾಲ್ ಬಂಧನ]

ಬಂಧಿತರಲ್ಲಿ ಆರೋಪಿ ಮಂಜುನಾಥನು ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ.

ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿ ಸಂದೀಪ ಪಾಟೀಲ ಹಾಗೂ ಹಲಸೂರು ಗೇಟ್ ಉಪ ವಿಭಾಗದ ಎಸಿಪಿ ಅಂಗಡಿ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎನ್. ಮಂಜುನಾಥ ಮತ್ತು ಸಿಬ್ಬಂದಿ ದೇವರಾಜ್, ಪ್ರಶಾಂತ, ಸಂತೋಷ್ ನೋಕರೆ, ಆಂಜನೇಯ, ಸುರೇಂದ್ರ, ಶ್ರೀನಿವಾಸ್ ದಾಳಿ ನಡೆಸಿದ್ದಾರೆ. [ಆನ್ ಲೈನ್ ಶಾಪಿಂಗ್ ವಂಚಕರ ಬಂಧನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+