Bengaluru Tunnel Road: ಮೊದಲ ಹಂತದ 50 ಕಿಮೀ.ಗೆ ಅಂದಾಜು ₹22000 ಕೋಟಿ
ಬೆಂಗಳೂರು, ಜುಲೈ 11: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರಾಜ್ಯದ ಉಪಮುಖ್ಯಮಂತ್ರಿಗಳು ಭರ್ಜರಿ ಪ್ಲಾನ್ ಮಾಡಿದ್ದಾರೆ. ವಿದೇಶಗಳಲ್ಲಿರುವಂತೆ ಸುರಂಗ ರಸ್ತೆಯನ್ನು ನಗರದಲ್ಲಿ ನಿರ್ಮಿಸಲು ಯೋಜನೆ ನಿರ್ಮಿಸಿದ್ದಾರೆ. ಯೋಜನೆಗಳ ಬಗ್ಗೆ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ವಿನ್ಯಾಸ ಸಲಹಾ ಸಂಸ್ಥೆ ಎಇಕಾಂ ಇಂಡಿಯಾದ ಎಂಜಿನಿಯರ್‌ಗಳ ಎರಡು ಸುತ್ತಿನ ಚರ್ಚೆಗಳು ನಡೆದಿವೆ.
ಮೊದಲ ಹಂತದಲ್ಲಿ ಸುರಂಗ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಸುರಂಗ ರಸ್ತೆಗಳಿಗೆ ಪ್ರತಿ ಕಿಲೋ ಮೀಟರ್‌ಗೆ ಸುಮಾರು 450 ಕೋಟಿಯಂತೆ ಅಂದಾಜು 22,000 ಕೋಟಿ ರೂಪಾಯಿ ಹಣ ಬೇಕಾಗಬಹುದು ಎಂದು ಸರ್ಕಾರ ಅಂದಾಜು ಮಾಡಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಈ ಸುರಂಗ ರಸ್ತೆ ಯಲಹಂಕವನ್ನು ಉತ್ತರದಿಂದ ದಕ್ಷಿಣ ಕಾರಿಡಾರ್ ಅಡಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿಗೆ ಹಾಗೂ ಪೂರ್ವ ದಿಂದ ಪಶ್ಚಿಮ ಕಾರಿಡಾರ್ ಅಡಿ (ಕೆ.ಆರ್ ಪುರದಿಂದ ಕಂಟೋನ್ಮೆಂಟ್) ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಮೂಲಕ ಹೆಚ್ಚು ಸಂಚಾರ ದಟ್ಟಣೆ ಹೆಚ್ಚಿರುವವ ಕಡೆಗೆ ಪರ್ಯಾಯ ರಸ್ತೆ ದೊರೆಯದಂತಾಗುತ್ತದೆ.
ಈ ಭಾಗಗಳಿಗೆ ಸಂಪರ್ಕ: ಟ್ರಾಫಿಕ್ ಇಳಿಕೆ ಗುರಿ
ಯಲಹಂಕ-ಹೊಸೂರು ರಸ್ತೆಯನ್ನು ಹೆಬ್ಬಾಳ, ಮೇಖ್ರಿ ವೃತ್ತ, ಕಂಟೋನ್ಮೆಂಟ್, ಕಸ್ತೂರಬಾ ರಸ್ತೆ ಹಾಗೂ ಸಿಲ್ಕ್ ಬೋರ್ಡ್ ಮೂಲಕ 27 ಕಿ.ಮೀ ವ್ಯಾಪ್ತಿಗೆ ಸಂಪರ್ಕಿಸುವ ಉತ್ತರ-ದಕ್ಷಿಣ ಕಾರಿಡಾರ್ ಮಾದರಿ ಯೋಜನೆ ಇದಾಗಿದೆ. ಈ ಕುರಿತು AECOM ಇಂಡಿಯಾ ಪ್ರತಿನಿಧಿಗಳು ಮಾಹಿತಿ ನೀಡಿದ್ದು, ಪೂರ್ವ-ಪಶ್ಚಿಮ ಕಾರಿಡಾರ್-1 ಗಾಗಿ ಕೆಆರ್ ಪುರದ ಭಟರಹಳ್ಳಿ ಯಿಂದ ಮೇಖ್ರಿ ವೃತ್ತದವರೆಗೆ ನಿರ್ಮಿಸಲಾಗುತ್ತದೆ. ಇದು ಉತ್ತರ-ದಕ್ಷಿಣ ಕಾರಿಡಾರ್ ರಸ್ತೆಗೆ ಸಂಪರ್ಕ ಸಾಧಿಸಲಿದ್ದು, ಇದರ ಉದ್ದ ಸುಮಾರು 20 ಕಿ.ಮೀ. ಎಂದು ಕಂಪನಿ ತಿಳಿಸಿದೆ.

ಪೂರ್ವ-ಪಶ್ಚಿಮ ಕಾರಿಡಾರ್-1ರಲ್ಲಿ ಬಾಕಿ ಉಳಿದ ಕೆಲಸವನ್ನು ಎರಡನೇ ಹಂತ (ಪೂರ್ವ-ಪಶ್ಚಿಮ ಕಾರಿಡಾರ್ 2) ಮತ್ತು ಸೆಂಟ್ರಲ್ ಕಾರಿಡಾರ್‌ಗಳು ಸೇಂಟ್ ಜಾನ್ಸ್ ಆಸ್ಪತ್ರೆ ಜಂಕ್ಷನ್‌ನಿಂದ ಹೊರ ವರ್ತುಲ ರಸ್ತೆಯ ಅಗರ, ಹಲಸೂರಿನಿಂದ ಡಿಸೋಜಾ ವೃತ್ತ ಹಾಗೂ ವೀಲರ್ಸ್ ರಸ್ತೆ ಜಂಕ್ಷನ್- ಕಲ್ಯಾಣ್ ನಗರವರೆಗಿನ ರಸ್ತೆಯನ್ನು ಎರಡನೇ ಹಂತದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಎಲ್ಲವು ಅಂತಿಮಗೊಳ್ಳಬೇಕಿದೆ.
ಸರ್ಕಾರದ ಯೋಜನೆ ಪ್ರಕಾರನ ಬೆಂಗಳೂರು ಮುಂದಿನ ದಿನಗಳಲ್ಲಿ ಒಟ್ಟು 99 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ಹೊಂದಲಿದೆ. ಅದರಲ್ಲಿ ಮೊದಲ ಹಂತದಲ್ಲಿ 50 ಕಿ.ಮೀ ನಿರ್ಮಿಸಲು ಪ್ರಸ್ತಾವನೆ ಸಲ್ಲಿಕೆ ಆಗಿದೆ. ಭೂಮಿ ಮೇಲೆ ರಸ್ತೆಗೆ ಜಾಗ ಬೇಕು ಎಂಬ ಕಿರಿ ಕರಿ ತಪ್ಪಿಸಲಿದೆ.
ಸುರಂಗ ರಸ್ತೆಗಳು ಹೇಗಿರಲಿವೆ?
ಉದ್ದೇಶಿತ ಈ ಸುರಂಗ ರಸ್ತೆಗಳು ವಿಶಾಲವಾಗಿದ್ದು, ಸಮರ್ಪಕ ಬೆಳಕನ್ನು ಹೊಂದಿರಲಿವೆ. ವಿಶಾಲ ಫುಟ್‌ಪಾತ್‌ಗಳು, ಪ್ರತ್ಯೇಕ ಸೈಕಲ್ ಲೇನ್‌ಗಳು ಇರಲಿವೆ. ಬಸ್‌ಗಳಿಗೆ ಪ್ರತ್ಯೇಕ ಲೇನ್ ನಲ್ಲಿ ಓಡಾಡಲಿವೆ. ಮುಂದಿನ ದಿನಗಳಲ್ಲಿ ರಸ್ತೆಗಾಗಿ ಬೆಳೆದುನಿಂತ ಮರಗಳನ್ನು ಕಡಿಯುವುದು ತಪ್ಪಲಿದೆ. ಸುರಂಗಗಳ ಪ್ರವೇಶ ಹಾಗೂ ನಿರ್ಗಮನದ ಸ್ಥಳಗಳಲ್ಲಿ ಮಾತ್ರ ಭೂಸ್ವಾಧೀನ ಅಗತ್ಯವಿದೆ. ಆ ಬಗ್ಗೆಯು ಚರ್ಚೆಗಳು ನಡೆದಿವೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದರು.
ಯೋಜನೆಯಡಿ ಸುರಂಗ ರಸ್ತೆಯ ಪ್ರತಿ ದಿಕ್ಕಿಗೆ ಕೆಳ ಮತ್ತು ಮೇಲಿನ ಡೆಕ್‌ಗಳನ್ನು ಹೊಂದಿರುತ್ತದೆ. ಮೇಲಿನ ಡೆಕ್‌ನಲ್ಲಿ ದ್ವಿಚಕ್ರ ವಾಹನಗಳು ಎರಡೂ ದಿಕ್ಕುಗಳಲ್ಲಿ ಸಂಚರಿಸಲು ವ್ಯವಸ್ಥೆ ಒದಗಿಸುತ್ತದೆ. ಸದ್ಯ ಯೋಜನೆ ಆರಂಭಕ್ಕೂ ಮೊದಲು ಕಾರ್ಯಸಾಧ್ಯತೆಯ ಅಧ್ಯಯನ, ವಿವರವಾದ ಯೋಜನಾ ವರದಿ (DPR) ಹಾಗೂ ಮಣ್ಣಿನ ಪರೀಕ್ಷೆ ನಡೆಸಬೇಕಿದೆ. ಉಪಮುಖ್ಯಮಂತ್ರಿ ನಂತರ ಮುಖ್ಯಮಂತ್ರಿಗಳಿಗೆ ಪ್ರಸ್ತುಪಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಸರ್ಕಾರದ ಪಾಲು ಶೇ. 40ರಷ್ಟು
ಈ ಸುರಂಗ ರಸ್ತೆ ಯೋಜನೆಯ ಒಟ್ಟು ಖರ್ಚಿನಲ್ಲಿ ಶೇಕಡ 40 ರಷ್ಟು ವೆಚ್ಚವನ್ನು ಸರ್ಕಾರವು ಭರಿಸಲಿದೆ ಮತ್ತು ಉಳಿದವು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಂಸ್ಥೆಯಿಂದ ಭರಿಸಲಾಗುವುದು. ಸರ್ಕಾರವು 15 ವರ್ಷಗಳವರೆಗೆ ಪ್ರತಿ ವರ್ಷ 2,000 ಕೋಟಿ ರೂ.ಗಿಂತ ಕಡಿಮೆ ಖರ್ಚು ಮಾಡಲಿದೆ. ಟೋಲ್ ಮೂಲಕ ಸಂಗ್ರಹಿಸಿದ ಮೊತ್ತವನ್ನು ಯೋಜನೆಗೆ ನೀಡಿದ್ದ ಏಜೆನ್ಸಿಗೆ ಮರು ಪಾವತಿಯಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ವಿವರಿಸಿದರು.












Click it and Unblock the Notifications