KSRTC: ಟಿಕೆಟ್ ಕೇಳಿದ್ದಕ್ಕೆ ಪ್ರಯಾಣಿಕನಿಗೆ ಜೀವ ಬೆದರಿಕೆ: ಡಿಪೋ ಮ್ಯಾನೇಜರ್, ಸಿಬ್ಬಂದಿ ಮೇಲೆ ಎಫ್‌ಐಆರ್
ಬೆಂಗಳೂರು, ಡಿಸೆಂಬರ್ 26: ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮೇಲೆ ಹಲ್ಲೆ, ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ಟಿಕೆಟ್ ವಿಚಾರವಾಗಿ ನಡೆದ ಗಲಾಟೆ ಇದೀಗ ಕೊಲೆ ಬೆದರಿಕೆವರೆಗೂ ತಲುಪಿದೆ. ಈ ಕಾರಣದಿಂದ ನಿಗಮದ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ ಘಟನೆ ಶನಿವಾರ ನಡೆದಿದೆ.
ಶನಿವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವ್ಯಾಪಾರಿ ರಾಘವೇಂದ್ರ ಅವರು ತಮ್ಮ ಊರಿಗೆ ತೆರಳಲು ಮೆಜೆಸ್ಟಿಕ್ ನಲ್ಲಿನ ಕೆಎಸ್‌ಆರ್‌ಟಿ ಬಸ್ ಟರ್ಮಿನಲ್ ಗೆ ಬಂದಿದ್ದಾರೆ. ಅಲ್ಲಿಂದ ಅವರು ಹರಿಹರಕ್ಕೆ ಹೋಗುವ ಬಸ್ ಹತ್ತಿ ಹಿರಿಯೂರಿಗೆ ಟಿಕೆಟ್ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಗಲಾಟೆ ನಡೆದಿದೆ ಎಂದು 'ಡಿಎಚ್' ವರದಿ ಮಾಡಿದೆ.

ಟಿಕೆಟ್ ವಿಚಾರವಾಗಿ ದೂರು ನೀಡಿದ ಈ ಪ್ರಯಾಣಿಕ ರಾಘವೇಂದ್ರ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದೆ. ಹಿರಿಯೂರಿಗೆ ಟಿಕೆಟ್ ಕೇಳಿದಾಗಿ ನಿರ್ವಾಹಕರು ಈ ಬಸ್ ಹಿರಿಯೂರಿಗೆ ಹೋಗುವುದಿಲ್ಲ ಬದಲಿಗೆ ಬೈಪಾಸ್ ಮೂಲಕ ತೆರಳುತ್ತದೆ ಎಂದು ತಿಳಿಸಿದ್ದಾರೆ. ಹಾಗಾದರೆ ತಾನು ಬೈಪಾಸ್‌ನಲ್ಲಿ ಇಳಿದುಕೊಳ್ಳುವುದಾಗಿ ರಾಘವೇಂದ್ರ ಹೇಳಿ ಟಿಕೆಟ್ ಕೇಳಿದ್ದಾರೆ.
ಹಿರಿಯೂರಿಗೆ ಇಳಿಯಬೇಕು, ಚಿತ್ರದುರ್ಗಕ್ಕೆ ಟಿಕೆಟ್ ಯಾಕೆ?
ಆಗ ಕಂಡಕ್ಟರ್ ಚಿತ್ರದುರ್ಗಕ್ಕೆ ಟಿಕೆಟ್ ಪಡೆಯಬೇಕು ಮತ್ತು ನಂತರ ಮಾತ್ರ ಹಿರಿಯೂರಿನಲ್ಲಿ ಇಳಿಯಬಹುದು ಎಂದು ಹೇಳಿದ್ದಾರೆ. ಹಿರಿಯೂರಿನಲ್ಲಿ ಇಳಿಯಬೇಕಾದರೆ ನಾನು ಯಾಕೆ ಚಿತ್ರದುರ್ಗಕ್ಕೆ ಯಾಕೆ ಟಿಕೆಟ್ ಪಡೆಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಒಪ್ಪದ ಆ ಬಸ್ ನಿರ್ವಾಃಕರು ರಾಘವೇಂದ್ರ ಅವರನ್ನು ಬಸ್‌ನಿಂದ ಕೆಳಗೆ ಇಳಿಸಿದ್ದಾರೆ.
ಹಿರಿಯೂರು ಚಿತ್ರದುರ್ಗದಿಂದ ದಕ್ಷಿಣಕ್ಕೆ ಸುಮಾರು 43 ಕಿ.ಮೀ. ದೂರದಲ್ಲಿದೆ. ಹಿರಿಯೂರಿಗೆ ಇಳಿಯಬೇಕಾದವರು ಯಾಕೆ ಮುಂದಿನ ಊರಿಗೆ ಟಿಕೆಟ್ ಪಡೆಯುತ್ತಾರೆ. ಇದು ಸಾಮಾನ್ಯ ಸಂಗತಿಯಾಗಿದೆ.
ನಿಗಮದ ಮ್ಯಾನೇಜರ್‌ಗೆ ದೂರು
ಬಸ್ ನಿಂದ ಕೆಳಗೆ ಇಳಿದ ರಾಘವೇಂದ್ರ ಅವರು ಡಿಪೋ ವ್ಯವಸ್ಥಾಪಕರಿಗೆ ದೂರು ನೀಡಿದ್ದಾರೆ. ಡಿಪೋ ಮ್ಯಾನೇಜರ್ ಅದೇ ನಿಯಮವನ್ನೇ ತಿರುಗಿ ಹೇಳಿದ್ದಾರೆ. ಹಿರಿಯೂರಿಗೆ ಟಿಕೆಟ್ ಇಲ್ಲ. ನೀವು ಚಿತ್ರದುರ್ಗಕ್ಕೆ ಟಿಕೆಟ್ ತೆಗೆದುಕೊಳ್ಳಬೇಕು' ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ರಾಘವೇಂದ್ರ ಅವರು ಡಿಪೋ ಮ್ಯಾನೇಜರ್ ಜೊತೆಗಿನ ಸಂಭಾಷಣೆಯ ವಿಡಿಯೋ ಮಾಡಲು ಆರಂಭಿಸಿದ್ದಾರೆ. ಇದನ್ನು ಕಂಡು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಸತೀಶ್ ಎಂಬುವವರು ಮೊಬೈಲ್ ಕಸಿದು ರಾಘವೇಂದ್ರ ಅವರಿಗೆ ದೊಣ್ಣೆಯಿಂದ ಹೊಡೆದು ಎದೆಗೆ ಒದ್ದು ಹೊರಕ್ಕೆ ಎಳೆದೊಯ್ದಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಘವೇಂದ್ರ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
KSRTC ಸಿಬ್ಬಂದಿಯಿಂದ ಜೀವ ಬೆದರಿಕೆ
ಸಿಬ್ಬಂದಿ ಸತೀಶ್ ಮತ್ತು ಮ್ಯಾನೇಜರ್ ಅವರನ್ನು ನನ್ನನ್ನು ಕೋಣೆಗೆ ಎಳೆದೊಯ್ದ ಹಲ್ಲೆ ನಡೆಸಿದರು. ತಾನೂ ಕೂಡ ಹಿರಿಯೂರಿನವನಾಗಿದ್ದು, ಆತನ ಸಹೋದರ ಗೂಂಡಾ ಎಂದು ರಾಘವೇಂದ್ರಗೆ ಕಾವಲುಗಾರ ಸತೀಶ್ ಹೇಳಿ ಬೆದರಿಸಿದ್ದಾನೆ. ಅಲ್ಲದೇ ಕೊಲೆ ಬೆದರಿಕೆಯನ್ನು ಹಾಕಿದ್ದಾನೆ ಎಂದು ದೂರಿನಲ್ಲಿ ರಾಘವೇಂದ್ರ ತಿಳಿಸಿದ್ದಾರೆ.
ಈ ದೂರಿನ ಆಧಾರದಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು











Click it and Unblock the Notifications