ನಟ ದರ್ಶನ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಎದುರು ಮನೆಯವರು
Recommended Video
ಬೆಂಗಳೂರು, ಫೆಬ್ರವರಿ 17: ಚಿತ್ರನಟ ದರ್ಶನ್ ಅವರ ವ್ಯವಸ್ಥಾಕರ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರು ಮನೆಯಲ್ಲಿ ಫೆ 16 ರಂದು ದರ್ಶನ್ ಅವರು ಹಟ್ಟುಹಬ್ಬ ಆಚರಣೆಗೆ ಅವರ ಅಭಿಮಾನಿಗಳು ಬಂದಿದ್ದರು. ಈ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ನಮ್ಮ ಮನೆ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಕಾರ್‌ಗೆ ಹಾನಿಯಾಗಿದೆ ಎಂದು ರಾಮಪ್ರಸಾದ್ ಎಂ ಎಸ್ ಎನ್ನುವರು ದೂರು ದಾಖಲಿಸಿದ್ದಾರೆ.
ದರ್ಶನ್ ತೂಗುದೀಪ ಅವರ ಜನ್ಮದಿನಾಚರಣೆಗೆ ಸಾವಿರಾರು ಅಭಿಮಾನಿಗಳು ಬರುತ್ತಾರೆಂದರೂ, ಅವರ ವ್ಯವಸ್ಥಾಪಕರು ನೂಕು ನುಗ್ಗಲು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ. ಬ್ಯಾರಿಕೇಡ್‌ಗಳನ್ನು ಹಾಕಿಲ್ಲ. ಇದರಿಂದ ನಮಗೆ 40 ಸಾವಿರ ರುಪಾಯಿ ಹಾನಿಯಾಗಿದೆ. ಜನ್ಮದಿನ ಆಯೋಜನೆ ಮಾಡಿದ್ದವರ ಮೇಲೆ ಕ್ರಮ ಕೈಗೊಂಡು, ಉಂಟಾದ ಹಾನಿಯನ್ನು ಕೊಡಿಸಬೇಕು ಎಂದು ರಾಮಪ್ರಸಾದ್ ದೂರು ನೀಡಿದ್ದಾರೆ.

ಈ ಕುರಿತು ದೂರು ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ದರ್ಶನ್ ಜನ್ಮದಿನಕ್ಕೆ ಸಾವಿರಾರು ಜನ ಬರುತ್ತಾರೆಂದು ಗೊತ್ತಿದ್ದರೂ ಅವರ ವ್ಯವಸ್ಥಾಪಕರು ಪೂರ್ವ ಸಿದ್ದತೆಗಳನ್ನು ಮಾಡದೇ, ಸ್ಥಳೀಯರಿಗೆ ತೊಂದರೆಯನ್ನುಂಟು ಮಾಡಿರುವುದನ್ನು ಹಲವರು ಟೀಕಿಸಿದ್ದಾರೆ.












Click it and Unblock the Notifications