ಸೈಬರ್ ಕ್ರೈಂ; ನೋ ಬ್ರೋಕರ್ ಸಂಸ್ಥಾಪಕರ ವಿರುದ್ಧ ಎಫ್‌ಐಆರ್
ಬೆಂಗಳೂರು, ಜೂನ್ 28 : ನೋ ಬ್ರೋಕರ್ ಕಂಪನಿ ಸಂಸ್ಥಾಪಕರು ಸೇರಿದಂತೆ ಏಳು ಜನರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಂಪನಿಯೊಂದರ ದತ್ತಾಂಶವನ್ನು ಕದ್ದಿಟ್ಟುಕೊಂಡು ವಂಚನೆ ನಡೆಸಿದ್ದಾರೆ ಎಂಬುದು ಆರೋಪ.
ವೀವಿಸ್ ಟೆಕ್ನಾಲಜೀಸ್ ಕಂಪನಿಯ ಎ. ವಿಜಯ್ ಎಂಬುವವರು ಸಿಐಡಿಗೆ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ನೋ ಬ್ರೋಕರ್ ಕಂಪನಿಯ ಅಖಿಲ್ ಗುಪ್ತಾ, ಅಮಿತ್ ಕುಮಾರ್, ಮಯಾಂಕ್ ಸೇರಿದಂತೆ 7 ಜನರ ವಿರುದ್ಧ ವಂಚನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಯಾವ ರೀತಿಯ ವಂಚನೆ ನಡೆದಿದೆ ಎಂದು ಸಿಐಡಿಯ ಸೈಬರ್ ಕ್ರೈಂ ವಿಭಾಗ ಹೆಚ್ಚಿನ ತನಿಖೆ ನಡೆಸಬೇಕಿದೆ. ಎಲ್ಲಾ ಆರೋಪಿಗಳಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ವೀವಿಸ್ ಟೆಕ್ನಾಲಜೀಸ್ ಸಾಫ್ಟ್‌ವೇರ್ ಸೇವೆ ಒದಗಿಸುವ ಕಂಪನಿಯಾಗಿದೆ.

ಸಾಫ್ಟ್‌ವೇರ್ ದತ್ತಾಂಶಗಳನ್ನು ಕಂಪನಿಯ ಸರ್ವರ್‌ನಲ್ಲಿ ಸಂಗ್ರಹಿಸಿ ಇಡಲಾಗಿದೆ. ಕಂಪನಿಯ ಕೆಲವು ಸಿಬ್ಬಂದಿಗೆ ಲಂಚದ ಆಮಿಷ ತೋರಿಸಿ ಬೆದರಿಕೆಯೊಡ್ಡಿದ ಆರೋಪಿಗಳು ದತ್ತಾಂಶಗಳನ್ನು ಹ್ಯಾಕ್ ಮಾಡಿದ್ದಾರೆ. ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ವೀವಿಸ್ ಟೆಕ್ನಾಲಜೀಸ್ ಕಂಪನಿಯ ಆಂತರಿಕ ತನಿಖೆಯಲ್ಲಿ ಇದು ಬಹಿರಂಗವಾಗಿದೆ. ಆದ್ದರಿಂದ ಕಂಪನಿಯ ಪರವಾಗಿ ಎ. ವಿಜಯ್ ಎಂಬುವವರು ಸಿಐಡಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.












Click it and Unblock the Notifications