ತಲೆ ಬುರುಡೆ ಹೊಡೆದ ಕಾರ್ಮಿಕ ಇಲಾಖೆ ನಿವೃತ್ತ ಅಧಿಕಾರಿ!
ಬೆಂಗಳೂರು, ಆ. 15: ಕಾರ್ಮಿಕ ಇಲಾಖೆಯ ನಿವೃತ್ತ ಆಯುಕ್ತ ನ್ಯಾಯ ಕೇಳಿದ ಯುವ ವಕೀಲನ ತಲೆ ಬುರಡೆಗೆ ಇಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ನಡೆದಿದೆ.
ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ. ಇಲ್ಲೊಬ್ಬ ನಿವೃತ್ತ ಸರ್ಕಾರಿ ಅಧಿಕಾರಿ ನ್ಯಾಯ ಕೇಳಿದ ಯುವ ವಕೀಲನಿಗೆ ರಾಡ್ ನಿಂದ ಥಳಿಸಿದ್ದಾನೆ. ಇಟ್ಟಿಗೆಯಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಇದಕ್ಕೂ ತೃಪ್ತಿ ಪಡದೇ ಕೆಳಗೆ ತಳ್ಳಿ ಕಾಲಿನಲ್ಲಿ ಹೊದ್ದು ಗೂಂಡಾಗಿರಿ ಮೆರೆದಿದ್ದಾನೆ. ಇಂತಹ ಆರೋಪಕ್ಕೆ ಗುರಿಯಾದವರು ಕಾರ್ಮಿಕ ಇಲಾಖೆಯ ನಿವೃತ್ತ ಆಯುಕ್ತ ಶಮೀವುಲ್ಲಾ. ಆರ್.ಕೆ. ಹೆಗ್ಗಡೆ ನಗರ ನಿವಾಸಿ ರೆಹಮಾನ್ ಗಾಯಗೊಂಡ ವ್ಯಕ್ತಿ. ತಡವಾಗಿ ಘಟನೆ ಬೆಳಕಿಗೆ ಬಂದಿದ್ದು ರೆಹಮಾನ್ ಇದೀಗ ನ್ಯಾಯ ಕೋರಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೃತ್ತಿಯಲ್ಲಿ ವಕೀಲೆಯಾಗಿರುವ ರೆಹಮಾನ್ ತಾಯಿಗೆ ನಿವೇಶನ ವಿಚಾರದಲ್ಲಿ ಶಮೀವುಲ್ಲಾ ಮೋಸ ಮಾಡಿದ್ದಾನೆ. ತನ್ನ ತಾಯಿಗೆ ಮಾಡಿರುವ ಅನ್ಯಾಯ ಸರಿಪಡಿಸುವಂತೆ ರೆಹಮಾನ್ ಕೇಳಿದ್ದಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ನಿವೃತ್ತ ಅಧಿಕಾರಿ ಶಫೀವುಲ್ಲಾ ಮಾಡಿರುವ ಅಕ್ರಮದ ಬಗ್ಗೆ ಮಾಹಿತಿ ಹೊಂದಿದ್ದ ರೆಹಮಾನ್ ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾನೆ. ಇದರಿಂದ ರೆಹಮಾನ್ ವಿರುದ್ಧ ಶಮೀವುಲ್ಲಾ ಕುಟುಂಬ ದ್ವೇಷ ಕಾರುತ್ತಿತ್ತು.

ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣಕ್ಕೆ ಗೋಡೆ ವಿಚಾರವಾಗಿ ರೆಹಮಾನ್ ಜತೆ ಜಗಳ ತೆಗೆದಿದ್ದಾನೆ. ಆಗಸ್ಟ್ 3 ರಂದು ರೆಹಮಾನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಶಮೀವುಲ್ಲಾ ಪುತ್ರ ಅಜ್ಮಲ್ ಶರೀಫ್, ಕೆಲಸ ಗಾರ ಆಲ್ತಾಫ್ ಗೂಂಡಾ ವರ್ತನೆ ತೋರಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿವೇಶನ ಖರೀದಿ ವಿಚಾರದಲ್ಲಿ ಶಮೀವುಲ್ಲಾ ನಮ್ಮ ತಾಯಿಗೆ ಮೋಸ ಮಾಡಿದ್ದರು. ನ್ಯಾಯ ಕೇಳಿದರೂ ಸ್ಪಂದಿಸಲಿಲ್ಲ. ಹೀಗಾಗಿ ನ್ಯಾಯ ಕೋರಿ ನಾನು ಅವರು ಮಾಡಿರುವ ವಂಚನೆ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದೆ. ಇದೇ ದ್ವೇಷದಿಂದ ಗೋಡೆ ವಿಚಾರವಾಗಿ ಉದ್ದೇಶ ಪೂರ್ವಕವಾಗಿ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಇಟ್ಟಿಗೆಯಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಶಮೀವುಲ್ಲಾ, ಆತನ ಪುತ್ರ ಹಾಗೂ ಕೆಲಸಗಾರ ಸೇರಿ ಹಲ್ಲೆ ಮಾಡಿದ್ದಾರೆ ಎಂದು ರೆಹಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮನೆ ವಿಚಾರದಲ್ಲಿ ಕಿರಿಕ್: ರೆಹಮಾನ್ ತನ್ನ ಮನೆಯ ಮೇಲ್ಭಾಗದ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸಿದ್ದರು. ತಮ್ಮ ಕಟ್ಟಡದ ಗೋಡೆಯಿಂದ ಆರು ಅಡಿ ಅಂತರ ಕಾಪಾಡುವಂತೆ ಶಮೀವುಲ್ಲಾ ತಾಕೀತು ಮಾಡಿದ್ದರು. 3 ಅಡಿ ಅಂತರ ಬಿಟ್ಟಿದ್ದಕ್ಕೆ 6 ಅಡಿ ಬಿಡುವಂತೆ ಸುಖಾಸುಮ್ಮನೆ ಕಿರಿಕ್ ತೆಗೆದು ಶಮೀವುಲ್ಲಾ ರೆಹಮಾನ್‌ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದೇ ಶಮೀವುಲ್ಲಾ ಕುಟುಂಬ ಸೇರಿಕೊಂಡು ರೆಹಮಾನ್ ತಲೆ ಮತ್ತು ಕೈ ಹಾಗೂ ಭುಜದ ಮೇಲೆ ಗಾಯವಾಗಿದೆ. ಈ ಕುರಿತು ರೆಹಮಾನ್ ನೀಡಿರುವ ದೂರು ಆಧರಿಸಿ ಸಂಪಿಗೆಹಳ್ಳಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪರರಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವ ಸ್ಥಾನದಲ್ಲಿರುವ ಯುವ ವಕೀಲನಿಗೆ ವೃತ್ತಿ ಆರಂಭದಲ್ಲೇ ಕಹಿ ಅನುಭವವಾಗಿದ್ದು ತನಗೆ ಹೀಗಾದ್ರೇ ಹೇಗೆ ಎನ್ನುತ್ತಿದ್ದಾನೆ.

Recommended Video
ಶಮೀವುಲ್ಲಾ ಕಾರ್ಮಿಕ ಇಲಾಖೆಯ ನಿವೃತ್ತ ಆಯುಕ್ತನಾಗಿದ್ದು, ಯುವ ವಕೀಲನ ಮೇಲೆ ದುಂಡಾವರ್ತನೆ ತೋರಿ ಮಾಡಿರುವ ಹಲ್ಲೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ರೆಹಮಾನ್ ದೂರು ನೀಡಿದರೂ ಸಹ ಪೊಲೀಸರು ಸಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಶಮೀವುಲ್ಲಾ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.












Click it and Unblock the Notifications