ಕಸ ಬೇರ್ಪಡಿಸದವರಿಗೆ ಭಾರೀ ದಂಡ : ಮೇಯರ್ ಎಚ್ಚರಿಕೆ
ಬೆಂಗಳೂರು, ಡಿ. 4: ನಗರದಲ್ಲಿ ಕಸದ ಸಮಸ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಕಸವನ್ನು ಬೇರ್ಪಡಿಸಿ ನೀಡದಿರುವವರು ಹಾಗೂ ರಸ್ತೆಗೆ ಎಸೆಯುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಮೇಯರ್ ಎನ್. ಶಾಂತಕುಮಾರಿ ಸೂಚಿಸಿದ್ದಾರೆ. [ಒನ್ಇಂಡಿಯಾಕ್ಕೆ ಶಾಂತಕುಮಾರಿ ಸಂದರ್ಶನ]
ಕಸವನ್ನು ಮನೆಯವರೇ ಬೇರ್ಪಡಿಸಿದರೆ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ. ಆದ್ದರಿಂದ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸುವುದು ಕಡ್ಡಾಯ. ಈ ನಿಯಮ ಪಾಲಿಸದವರಿಗೆ ಭಾರೀ ದಂಡ ವಿಧಿಸಬೇಕು. ಎಲ್ಲ ವಾರ್ಡ್‌ಗಳ ಸದಸ್ಯರೂ ಇದಕ್ಕೆ ಸಹಕಾರ ನೀಡಬೇಕೆಂದು ಅವರು ತಿಳಿಸಿದರು. [ಬೆಂಗಳೂರು ಕಸಕ್ಕೆ ಮಾಗಡಿ ಗ್ರಾಮಸ್ಥರ ವಿರೋಧ]
ಒಣ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸೋಷಿಯಲ್ ವೆಂಚರ್ಸ್ ಪಾರ್ಟನರ್ಸ್ ಸಂಸ್ಥೆ ನೀಡಿದ ವರದಿ ಪಡೆದ ಶಾಂತಕುಮಾರಿ, ಕಸ ನಿರ್ವಹಣೆ ವಿಷಯದಲ್ಲಿ ಬಿಬಿಎಂಪಿ ಜನರ ನಂಬಿಕೆ ಕಳೆದುಕೊಂಡಿದೆ. ಮಂಡೂರಿನ ಜನರಿಗೆ ಮುಖ್ಯಮಂತ್ರಿಗಳೇ ಬಂದು ಭರವಸೆ ನೀಡಬೇಕಾಯಿತು ಎಂದು ಖೇದ ವ್ಯಕ್ತಪಡಿಸಿದರು. [ಮಾತು ಉಳಿಸಿಕೊಂಡ ಸರ್ಕಾರ]

ಒಣ ತ್ಯಾಜ್ಯದಿಂದ ಆದಾಯ: ಹಣ ಗಳಿಕೆಗೆ ಹತ್ತು ಮಾರ್ಗ ಹುಡುಕುವ ಬೆಂಗಳೂರು ನಿವಾಸಿಗಳಿಗೆ ಕಸದಿಂದಲೂ ಆದಾಯ ಗಳಿಕೆ ಸಾಧ್ಯ ಎಂದು ಸೋಷಿಯಲ್ ವೆಂಚರ್ಸ್ ಸಂಸ್ಥೆ ತಿಳಿಸಿದೆ.
ಈ ಕುರಿತು ಸಂಸ್ಥೆಯು ಮೇಯರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ವಿವರವಾಗಿ ತಿಳಿಸಿದೆ. ಒಣ ತ್ಯಾಜ್ಯ ಮರುಬಳಕೆಯಿಂದ ಆದಾಯ ಗಳಿಕೆ ಸಾಧ್ಯ. ಆದರೆ ಇದಕ್ಕೆ ಕಸವನ್ನು ಮೂಲದಲ್ಲಿಯೇ ಬೇರ್ಪಡಿಸುವುದು ಅತ್ಯಂತ ಮುಖ್ಯ. ಭಾರೀ ತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳು ತಾವೇ ಕಸ ಸಂಸ್ಕರಣೆ ಘಟಕ ಸ್ಥಾಪಿಸಬೇಕು. ಒಣ ಕಸ ಸಂಗ್ರಹಣೆ, ಸಂಸ್ಕರಣೆ, ರಿ ಸೈಕ್ಲಿಂಗ್ ಪಾರ್ಕ್ ನಿರ್ಮಿಸಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ. [ಬಿಬಿಎಂಪಿಯಿಂದ 4 ಕಡೆ ತ್ಯಾಜ್ಯ ವಿಲೇವಾರಿ ಘಟಕ]
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು












Click it and Unblock the Notifications