10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಬ್ರಹ್ಮಣ್ಯಪುರ ಕೆರೆ ಪುನಶ್ಚೇತನ ಆರಂಭ
ಬೆಂಗಳೂರು, ಜುಲೈ 31 : ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉತ್ತರಹಳ್ಳಿಯ ಸುಬ್ರಹ್ಮಣ್ಯಪುರ ಕೆರೆಯ ಪುನಶ್ಚೇತನ ಕಾಮಗಾರಿ ಕೊನೆಗೂ ಆರಂಭಗೊಂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 3 ಕೋಟಿ ರು. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಒಳಚರಂಡಿ ನೀರನ್ನು ತಡೆಗಟ್ಟುವುದು, ಕಳೆಯನ್ನು ತೆರವುಗೊಳಿಸುವುದು, ನಡಿಗೆ ಪಥ ನಿರ್ಮಿಸುವುದು ಸಹ ಈ ಕಾಮಗಾರಿಯಲ್ಲಿ ಸೇರಿದೆ.

ಕೆರೆ ಸುತ್ತಮುತ್ತ ತಲೆಎತ್ತಿರುವ ಅಪಾರ್ಟ್ ಮೆಂಟ್, ಖಾಸಗಿ ಬಡಾವಣೆಗಳು ಹಾಗೂ ಗೋಮಾಳದಲ್ಲಿರುವ ಕೊಳೆಗೇರಿಯ ತ್ಯಾಜ್ಯ ನೀರು ಜಲಮೂಲ ಸೇರುತ್ತಿದೆ. ಕೊಳಚೆ ನೀರನ್ನು ಶುದ್ಧೀಕರಿಸದೆ ರಾಜಕಾಲುವೆಗೆ ಬಿಡಲಾಗುತ್ತಿದೆ. ಇದನ್ನು ತಡೆಗಟ್ಟಲು ಜಲಮಂಡಳಿ ಸಹಾಯದಿಂದ ಪ್ರತ್ಯೇಕ ಒಳಚರಂಡಿ ನಿರ್ಮಿಸಲಾಗುತ್ತದೆ.
'ಕೆರೆಯನ್ನು ಅಭಿವೃದ್ಧಿ ಪಡಿಸಲು ಕನಿಷ್ಠ ಆರು ತಿಂಗಳಿಂದ ಒಂದು ವರ್ಷ ಹಿಡಿಯಬಹುದು' ಎಂದು ಬಿಬಿಎಂಪಿ ಇಂಜಿನಿಯರ್ ಹೇಳಿದರು.











Click it and Unblock the Notifications