ನಿರ್ಮಾಪಕ ಕೆ. ಮಂಜು ಹೆಸರಲ್ಲಿ ಮೋಸ: ಆರೋಪಿ ಬಂಧನ
ಕನ್ನಡ ಚಿತ್ರ ನಿರ್ಮಾಪಕ ಕೆ. ಮಂಜು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯುವತಿಯರನ್ನು ವಂಚಿಸುತ್ತಿದ್ದ ಮಂಜುನಾಥ್ ಎಂಬುವನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ಜೂನ್ 3: ಕನ್ನಡ ಚಿತ್ರ ನಿರ್ಮಾಪಕ ಕೆ. ಮಂಜು ಹೆಸರಿನಲ್ಲಿ ನಿರ್ಮಾಪಕನ ಪೋಸು ಕೊಡುತ್ತಾ ಹಲವಾರು ಯುವತಿಯರ ಸಂಪರ್ಕ ಸಾಧಿಸಿ , ಅವರನ್ನು ಸೌದಿ ದೇಶಗಳಿಗೆ ಮಾರುವ ಕುತಂತ್ರ ಹೊಂದಿದ್ದ ವಂಚಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ಗಾಂಧಿ ಸೇರಿದಂತೆ ಹಲವರು ಗಣ್ಯ ವ್ಯಕ್ತಿಗಳ ಜತೆಗೆ ಫೋಟೋಗಳನ್ನು ತೆಗೆಸಿಕೊಂಡಿದ್ದ ಈತ ಆ ಫೋಟೋಗಳನ್ನು ಉಪಯೋಗಿಸಿಕೊಂಡು ತಮಗೆ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಪೋಸು ಕೊಡುತ್ತಿದ್ದ.

ಅಲ್ಲದೆ, ಇತ್ತೀಚೆಗೆ ಪುಣೆಯಿಂದ ಯುವತಿಯರನ್ನು ಕರೆಯಿಸಿಕೊಂಡು ದೆಹಲಿಯ ಕರ್ನಾಟಕ ಭವನದಲ್ಲಿ ಉಳಿಸಿಕೊಂಡಿದ್ದ ಆತ, ಆನಂತರ ಅವರನ್ನು ಬೆಂಗಳೂರಿಗೆ ಕರೆ ತಂದಿದ್ದ. ಅದಾದ ಮೇಲೆ, ಅವರೊಂದಿಗೆ ಅನುಚಿತವಾಗಿ ವರ್ತಿಸಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.













Click it and Unblock the Notifications