ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಕದನ: ದಿನಗೂಲಿ ಕಾರ್ಮಿಕರ ನೆರವಿಗೆ ನಿಂತ ಗೀವ್ಇಂಡಿಯಾ

|
Google Oneindia Kannada News

ಬೆಂಗಳೂರು, ಮಾರ್ಚ್ 27: ದೇಶಾದ್ಯಂತ ಕೊವಿಡ್-19 ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಸ್ಥೆಯಾಗಿರುವ ಗೀವ್‍ಇಂಡಿಯಾ ದಿನಗೂಲಿ ನೌಕರರಿಗೆ ನೈರ್ಮಲ್ಯ ಕಿಟ್ ಅನ್ನು ನೀಡುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೀವ್ ಇಂಡಿಯಾ ಸಂಸ್ಥೆಯು ದಿನಗೂಲಿ ನೌಕರರು ಮತ್ತು ಅವರ ಕುಟುಂಬಗಳ ಸದಸ್ಯರ ಆರೋಗ್ಯ ರಕ್ಷಣೆಗೆ ಈ ಕ್ರಮವನ್ನು ಕೈಗೊಂಡಿದೆ.

ಈ ಕುಟುಂಬಗಳ ನೈರ್ಮಲ್ಯವನ್ನು ಕಾಪಾಡಲೆಂದು ಗೀವ್‍ಇಂಡಿಯಾ ನೈರ್ಮಲ್ಯ ಮಿಷನ್ ಅನ್ನು ಆರಂಭಿಸಿದ್ದು, ಇದರಡಿ ಎಲ್ಲರಿಗೂ ನೈರ್ಮಲ್ಯ ಕಿಟ್‍ಗಳನ್ನು ಪೂರೈಸುತ್ತಿದೆ. ಈ ಮಿಷನ್‍ನಡಿ ಎರಡು ಉಪಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಇದರಲ್ಲಿ ಒಂದು ದಿನಗೂಲಿ ನೌಕರರಿಗೆ ಆಹಾರವನ್ನು ಒದಗಿಸುವುದು ಮತ್ತು

ಭಾರತದಲ್ಲಿ ಕೊರೊನಾ ರೋಗಿಗಳು-LIve tracker

ಎರಡನೆಯದು #IndiaFightsCoronavirusನ ಮೂಲಕ ದೇಶಾದ್ಯಂತ ಸೋಪ್ಸ್ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳಿಂದ ವಂಚಿತರಾಗಿರುವ ದುರ್ಬಲ ವರ್ಗದ ಕುಟುಂಬಗಳಿಗೆ ನೈರ್ಮಲ್ಯ ಕಿಟ್ ಅನ್ನು ಪೂರೈಕೆ ಮಾಡುವ ಮೂಲಕ ಅವರನ್ನು ವೈರಸ್ ಹರಡುವಿಕೆಯಿಂದ ಪಾರು ಮಾಡುವುದಾಗಿದೆ.

1.5 ಕೋಟಿ ರು ಸಂಗ್ರಹವಾಗಿದೆ

1.5 ಕೋಟಿ ರು ಸಂಗ್ರಹವಾಗಿದೆ

ಈ ಅಭಿಯಾನವನ್ನು ಆರಂಭಿಸಿದ ಮೂರು ದಿನಗಳಲ್ಲಿ ಗೀವ್ ಇಂಡಿಯಾ 6000 ಕ್ಕೂ ಅಧಿಕ ದಾನಿಗಳಿಂದ 1.5 ಕೋಟಿ ರೂಪಾಯಿಗಳ ದೇಣಿಗೆಯನ್ನು ಸಂಗ್ರಹ ಮಾಡಿದ್ದು, ಈ ನಿಧಿಯಿಂದ ದುರ್ಬಲ ವರ್ಗದವರಿಗೆ ನೈರ್ಮಲ್ಯ ಕಿಟ್‍ಗಳನ್ನು ಪೂರೈಕೆ ಮಾಡುತ್ತಿದೆ. ಈ ಮೂಲಕ ಜನರನ್ನು ಮತ್ತು ಆರೋಗ್ಯ ರಕ್ಷಣೆಯ ವೃತ್ತಿಪರರನ್ನು ವೈರಸ್ ವಿರುದ್ಧ ಹೋರಾಟ ಮಾಡಲು ಅಣಿಯಾಗುವಂತೆ ಮಾಡಲಾಗುತ್ತಿದೆ.

ಗೀವ್ಇಂಡಿಯಾ ಸಿಇಒ ಅತುಲ್

ಗೀವ್ಇಂಡಿಯಾ ಸಿಇಒ ಅತುಲ್

ಈ ಉಪಕ್ರಮದ ಬಗ್ಗೆ ಮಾತನಾಡಿದ ಗೀವ್‍ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅತುಲ್ ಸತಿಜಾ ಅವರು, "ತುರ್ತು ಕಾರ್ಮಿಕ ವರ್ಗದ ಕುಟುಂಬಗಳಿಗೆ ಸುರಕ್ಷತೆ ನೀಡುವ ದೃಷ್ಟಿಯಿಂದ ನಾವು ಈ ಅಭಿಯಾನವನ್ನು ಆರಂಭಿಸಿದ್ದೇವೆ. ಈ ನಿಧಿಯ ಮೂಲಕ ನಾವು ದಿನಗೂಲಿ ನೌಕರರಿಗೆ ನೇರವಾಗಿ ಬೆಂಬಲ ಮತ್ತು ನೆರವು ನೀಡುತ್ತಿದ್ದೇವೆ. ನಿಮ್ಮ ಈ ಬೆಂಬಲದೊಂದೊಗೆ ವೈರಸ್ ನಿರ್ಮೂಲನೆಯಾಗುವವರೆಗೆ ಮತ್ತು ಈ ನೌಕರರು ಕೆಲಸವನ್ನು ಆರಂಭಿಸುವವರೆಗೆ ಅಭಿಯಾನವನ್ನು ಮುಂದುವರಿಸಲಿದ್ದೇವೆ"ಎಂದು ತಿಳಿಸಿದರು.

ಫೇಸ್ಬುಕ್‌ನಲ್ಲಿ ಕೊರೊನಾ ಮಾಹಿತಿಗಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್ಫೇಸ್ಬುಕ್‌ನಲ್ಲಿ ಕೊರೊನಾ ಮಾಹಿತಿಗಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್

ದೇಣಿಗೆ ನೀಡಲು ಮನವಿ

ದೇಣಿಗೆ ನೀಡಲು ಮನವಿ

"ಇಂತಹ ಸಾಮಾಜಿಕ ಕಳಕಳಿಯ ಅಭಿಯಾನಕ್ಕೆ ಸಾರ್ವಜನಿಕರು ದೇಣಿಗೆ ನೀಡಬೇಕು'' ಎಂದು ಅವರು ಮನವಿ ಮಾಡಿದರು.''ಇಡೀ ಜಗತ್ತು ಕೊವಿಡ್-19 ನಿಂದ ಬಳಲುತ್ತಿದೆ. ಆದರೆ, ಉದ್ಯೋಗ ಭದ್ರತೆ ಇಲ್ಲದೇ ಅಥವಾ ಉಳಿತಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಅಭಿಯಾನದಲ್ಲಿ ಕೈಜೋಡಿಸಿ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕು'' ಎಂದರು.

ಆನ್ ಲೈನ್ ನಲ್ಲಿ ದೇಣಿಗೆ ನೀಡಬಹುದು

ಆನ್ ಲೈನ್ ನಲ್ಲಿ ದೇಣಿಗೆ ನೀಡಬಹುದು

ಕೋವಿಡ್19 ಪೀಡಿತ ಕುಟುಂಬಕ್ಕೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸಾ ವೆಚ್ಚ ಸಿಗುತ್ತಿದೆ. ಮಿಕ್ಕಂತೆ ಅವರ ಆರೈಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಲು ಗೀವ್ ಇಂಡಿಯಾ ಮುಂದಾಗಿದೆ. ಇದಕ್ಕಾಗಿ ದಾನಿಗಳು ಆನ್ ಲೈನ್ ನಲ್ಲಿ ದೇಣಿಗೆ ನೀಡಬಹುದು. ಸುಮಾರು 10 ಕೋಟಿ ರು ಸಂಗ್ರಹದ ನಿರೀಕ್ಷೆಯಿದ್ದು, 2.5 ಕೋಟಿ ರು ಈ ಸಮಯಕ್ಕೆ ಸಂಗ್ರಹವಾಗಿದೆ. ಆನ್ ಲೈನ್ ಮೂಲಕ ಗೀವ್ ಇಂಡಿಯಾ ವೆಬ್ ತಾಣದಲ್ಲಿ ಮಾಡುವ ಪ್ರತಿ ದೇಣಿಗೆಗೂ 80ಜಿ ಹಾಗೂ 501 ಸಿ 3 ಅನ್ವಯ ದೇಣಿಗೆ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ.

English summary
Fight Against Covid19: GiveIndia provides hygiene kits to daily wage workers and underprivileged families across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X