ಬೆಂಗಳೂರು: ಶುಭ ಸಮಾರಂಭಗಳ ಸಾಲು ಏರಿದ ತರಕಾರಿ, ಸೊಪ್ಪು ದರ
ಬೆಂಗಳೂರು, ಜೂನ್ 26: ಶುಭ ಸಮಾರಂಭಗಳು ಸಾಲು ಸಾಲಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ತರಕಾರಿ, ಸೊಪ್ಪು, ಹಣ್ಣು, ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಮದುವೆ, ಗೃಹಪ್ರವೇಶ ನಡೆಯುತ್ತಿದೆ.ಆಷಾಡಮಾಸ ಆರಂಭವಾಗುವವರೆಗೆ ತರಕಾರಿ, ಸೊಪ್ಪುಗಳ ಭಾರಿ ಬೇಡಿಕೆ ಇರಲಿದೆ. ಬೆಲೆ ಏರುಗತಿಯಲ್ಲಿ ಸಾಗುವ ಸಾಧ್ಯತೆ ಇದೆ. ಮೇ ಮತ್ತು ಜೂನ್ ತಿಂಗಳಿಗೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.
ಟೊಮೆಟೋ 15 ರೂ ಇದ್ದಿದ್ದು 21 ರೂ.ಗೆ ತಲುಪಿದೆ, ಬೀನ್ಸ್ ಕಳೆದ ತಿಂಗಳು ಒಂದು ವಾರ ಕೆ.ಜಿಗೆ 100 ರೂ. ಇತ್ತು, ಕ್ರಮೇಣ 50 ರೂ.ಗೆ ಬಂದು ಮತ್ತೀಗ 60ರೂ.ಗೆ ಏರಿಕೆಯಾಗಿದೆ. ಮೆಣಸಿನಕಾಯಿ ಸರವೂ ಏರಿಕೆಯಾಗುತ್ತಿದೆ. ಕಳೆದ ತಿಂಗಳು 45 ರೂ. ಇದ್ದ ದಪ್ಪ ಮೆಣಸಿನಕಾಯಿ ಈ ಕೆಜಿಗೆ 74 ರೂ.ಗೆ ಏರಿಕೆಯಾಗಿದೆ.

ಸೊಪ್ಪು ಬೆಳೆಯುವ ಪ್ರದೇಶದ ಪ್ರಮಾಣ, ಉತ್ಪಾದನೆ ಕುಸಿತವಾಗಿದೆ. ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿ ಇವುಗಳ ಬೆಲೆಯೂ ಹೆಚ್ಚಿದೆ. ಬೀಟ್‌ರೂಟ್ 32 ರೂ, ಬದನೆಕಾಯಿ 40 ರೂ, ಕ್ಯಾರೇಟ್ 35ರೂ. ಹೀರೇಕಾಯಿ 60ರೂ., ಪಾಲಕ್ ಸೊಪ್ಪು 40ರೂ, ಬೆಂಡೇಕಾಯಿ 33ರೂ ಇದೆ ಯಾವ ತರಕಾರಿಗಳು ಕೂಡ 20ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲ.












Click it and Unblock the Notifications