ಬೆಂಗಳೂರು ದಸರಾ: ಬಾನೆತ್ತರಕ್ಕೇರಿದ ಬೂದುಗುಂಬಳ, ಹೂವಿನ ದರ
Recommended Video

ಬೆಂಗಳೂರು, ಅಕ್ಟೋಬರ್ 17: ವಿಜಯದಶಮಿ ಅಂಗವಾಗಿ ಅಂಗಡಿ ಪೂಜೆ, ವಾಹನಗಳ ಪೂಜೆ, ಕಚೇರಿಗಳ ಪೂಜೆ ಹೀಗೆ ಎಲ್ಲಾ ಪೂಜೆಗಳಿಗೂ ಬೂದು ಗುಂಬಳ ಶ್ರೇಷ್ಠ. ಹೂವು ಹಾಗೂ ಬೂದುಗುಂಬಳ ಬೆಲೆ ಬಾನೆತ್ತರಕ್ಕೇರಿದೆ.
ನಗರದ ಕೆಆರ್ ಮಾರುಕಟ್ಟೆ, ಮಡಿವಾಳ, ಮಲ್ಲೇಶ್ವರ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿದಂತೆ ಅನೇಕ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬೂದುಗುಂಬಳಕಾಯಿ, ನಿಂಬೆ ಹಾಗೂ ಪೂಜಾ ಸಾಮಗ್ರಿಗಳಿಂದ ತುಂಬಿದೆ. ತಮಿಳುನಾಡಿನಿಂದ ಬರುವ ಮಲ್ಲಿಗೆ, ಮಾರಿಗೋಲ್ಡ್, ಸೇವಂತಿಗೆ, ಐಸ್‌ಬರ್ನ್ ಸೇವಂತಿಗೆ ದರ ಸ್ವಲ್ಪ ಏರಿಕೆಯಾಗಿದೆ.
ಆಯುಧಪೂಜೆ ಹಾಗೂ ವಿಜಯದಶಮಿಗೆ ಮಳಿಗೆಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ವಿತರಿಸುವ ಕಡ್ಲೆಪುರಿಗೆ ಹೆಚ್ಚು ಬೇಡಿಕೆ ಇದ್ದು, ಒಂದು ಸೇರಿಗೆ 7ರೂ.ನಿಂದ 10ರವರೆಗೆ ಮಾರಾಟವಾಗುತ್ತಿದೆ.

ನಿಂಬೆ ಹಾಗೂ ಹೂವಿಗೆ ಬಾರಿ ಬೇಡಿಕೆ
ಹಬ್ಬದವರೆಗೆ ಸ್ಥಿರತೆ ಕಾಯ್ದುಕೊಂಡಿದ್ದ ನಿಂಬೆ ಹಾಗೂ ಹೂವುಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಕೆಆರ್ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಹೂವಿನ ಬೆಲೆ ನಿಗದಿಯಾಗಿದೆ. ಗೌರಿಬಿದನೂರು, ಮೈಸೂರು ಮತ್ತಿತರೆ ಭಾಗಗಳಿಂದ ಸೇವಂತಿ, ಚೆಂಡು ಹೂವು ಬಂದಿದೆ. ತಮಿಳುನಾಡು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಮಲ್ಲಿಗೆ ಬರುತ್ತಿದ್ದು, ಮಲ್ಲಿಗೆ ಮೊಗ್ಗು ಕೆಜಿಗೆ 400-500ರೂ ಆಗಿದೆ. ಬೆಂಗಳೂರು ಸುತ್ತಮುತ್ತ ಪಾಲಿಹೌಸ್‌ಗಳಲ್ಲಿ ಬೆಳೆದ ಸೇವಂತಿಗೆಗೆ ಹೆಚ್ಚು ಬೇಡಿಕೆ ಇದ್ದು, ಕೆಜಿಗೆ 200-250 ರೂಪಾಯಿಗೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಹೂವುಗಳ ದರ
ಮಂಗಳವಾರ ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಸೇವಂತಿಗೆ ಮೊಳಕ್ಕೆ 50 ರೂ ಇತ್ತು, ಮಲ್ಲಿಗೆ ಮೊಳಗ್ಗೆ 30ರೂ, ಕನಕಾಂಬರ 20ರೂಗೆ ಮಾರಾಟವಾಗುತ್ತಿತ್ತು. ಬೂದುಗುಂಬಳ ಗಾತ್ರಕ್ಕೆ ತಕ್ಕಂತೆ 50-60, ಸಪೋಟ 60ರೂ,ಮೂಸಂಬಿ 40, ದಾಳಿಂಬೆ 120, ಸೇಬು 100ರಿಂದ 150 ರರೆಗೆ ಮಾರಾಟ ಮಾಡಲಾಯಿತು.

ದಸರಾಗೆ ತಮಿಳುನಾಡು, ಆಂಧ್ರದಿಂದ ಬಂದ ಬೂದುಗುಂಬಳ
ದಸರಾ ಹಬ್ಬಕ್ಕಾಗಿ ತಮಿಳುನಾಡು, ಆಂಧ್ರಪ್ರದೇಶದಿಂದ ರಾಶಿಗಟ್ಟಲೆ ಬೂದುಗುಂಬಳಕಾಯಿ ಕೆ.ಆರ್. ಮಾರುಕಟ್ಟೆಗೆ ಬಂದಿದೆ. ಇಳುವರಿ ಉತ್ತಮವಾಗಿದ್ದು ಈ ಬಾರಿ ಹೋಲ್‌ಸೇಲ್ ದರ ಕೆಜಿಗೆ 20ರಿಂದ 50ರವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷದ ದಸರಾದಲ್ಲಿ 80-100ರೂಗೆ ಮಾರಾಟವಾಗಿತ್ತು.ನಿಂಬೆ ಹಣ್ಣು ದರ 3 ರೂ. ಇದೆ ಆದರೆ ಚಿಲ್ಲರೆಯಾಗಿ 5-10ರೂ,ವರೆಗೂ ಮಾರಾಟ ಮಾಡಲಾಗುತ್ತಿದೆ.

ಬಾಳೆಕಂಬ, ತೆಂಗಿನ ಕಾಯಿ ದರ
ವಿಜಯದಶಮಿಯಂದು ಬಾಳೆ ಕಂಬ ಇಲ್ಲದೆ ಪೂಜೆ ಮಾಡುವುದಿಲ್ಲ ಹಾಗಾಗಿ ಬಾಳೆ ಕಂಬ ಕೊಳ್ಳುವುದು ಅನಿವಾರ್ಯ, ಬಾಳೆ ಕಂಬ ಒಂದು ಜೋಡಿಗೆ 40-200ರೂ.ಇದೆ. ತೆಂಗಿನಕಾಯಿ ಜೋಡಿ 50ರೂ.ಗೆ ಮಾರಾಟವಾಗುತ್ತಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications