ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ, ವೆಂಕಟಸುಬ್ಬುಗೆ ಸನ್ಮಾನ
ಬೆಂಗಳೂರು, ಸೆಪ್ಟೆಂಬರ್ 13: "ಕಳೆದ ಐವತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದೀನಿ. ಆದರೆ ಈಗಿನ ಸ್ಥಿತಿಯಲ್ಲಿ ಭಯದಲ್ಲೇ ಕೆಲಸ ಮಾಡುವಂತಿದೆ. ಆದರೆ ಹಿಂದೆ ನಿರ್ಭೀತಿಯಿಂದ ಕೆಲಸ ಮಾಡಬಹುದಿತ್ತು" ಎಂದು ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ ಹೇಳಿದರು.
ದಿವ್ಯ ಚೇತನ ಚಾರಿಟಬಲ್ ಟ್ರಸ್ಟ್ ಹಾಗೂ 'ನಿಮ್ಮ ನಾಯಕ' ಮಾಸಪತ್ರಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗ ಮಾಧ್ಯಮಗಳು ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಇದು ಆತಂಕದ ಪರಿಸ್ಥಿತಿ ಎಂದು ಅವರು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ಹಿರಿಯ ಪತ್ರಕರ್ತ ವೆಂಕಟಸುಬ್ಬು ಮೋಕ್ಷಗುಂಡಂ, ವಿವಿಧ ಕ್ಷೇತ್ರದ ಸಾಧಕರಾದ ಭಾಸ್ಕರ್ ರಾವ್, ಕೆ.ಎಸ್.ಮೃತ್ಯುಂಜಯ, ಧಮೇಂದ್ರ, ಡಿ.ಮುನಿರಾಜು, ಅಶ್ವತ್ಠಮ್ಮ, ಸಿ.ಪಿ.ಶಿವಣ್ಣ ಹಾಗೂ ಕೃಷ್ಣಪ್ಪ್ ಅವರನ್ನು ಸಹ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆಯೋಜಕ ಎಂ.ರಾಮು, ಬಿ.ಕೆ.ಪ್ರಸನ್ನ, ರವಿದಾಸ್ ಬಿಂಡಿಗನವಿಲೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Click it and Unblock the Notifications