• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಧಿ ಜಯಂತಿ ದಿನದಂದು ರಾಷ್ಟ್ರವ್ಯಾಪ್ತಿ ಪ್ರತಿಭಟನಾ ಉಪವಾಸ ಸತ್ಯಾಗ್ರಹ

|

ಬೆಂಗಳೂರು, ಅ.1: ಅಕ್ಟೋಬರ್ 2, 2020, ಗಾಂಧಿ ಜಯಂತಿ ದಿನದಂದು ರಾಷ್ಟ್ರವ್ಯಾಪ್ತಿ ಪ್ರತಿಭಟನಾ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘಟನೆಗಳು ಘೋಷಿಸಿವೆ.

ರಾಷ್ಟ್ರದಲ್ಲಿ ಸುಮಾರು 200 ಸಂಘಟನೆಗಳಿಗೂ ಹೆಚ್ಚಿನ ರೈತ ಸಂಘಟನೆಗಳಿಂದ ರಚನೆಯಾಗಿರುವ ಅಖಿಲ ಭಾರತ ಸಂಘರ್ಷ ಸಮನ್ವಯ ಸಮಿತಿ (AIKSCC) ಭಾಗವಾಗಿರುವ ರಾಜ್ಯದ ಬಹುತೇಕ ಎಲ್ಲಾ ರೈತ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳನ್ನು ಒಳಗೊಂಡಿರುವ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (AISCC) ಅಕ್ಟೋಬರ್ 2 ರಂದು ಪ್ರತಿಭಟನಾ ಉಪವಾಸ ಸತ್ಯಾಗ್ರಹ ವನ್ನು ಬೆಳಿಗ್ಗೆ ಯಿಂದ ಮಹಾತ್ಮಗಾಂಧಿ ಪ್ರತಿಮೆ ಎದುರು ಆರಂಭಗೊಂಡು ಸಂಜೆವರೆಗೂ ಕರ್ನಾಟಕ ರಾಜ್ಯ ಘಟಕ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ AISCC ಕೇಂದ್ರ ಸಮಿತಿ ಸದಸ್ಯರಾದ ಶ್ರೀಮತಿ ಕವಿತಾ ಕುರುಗಂಟಿ, ಕೋಡಿಹಳ್ಳಿ ಚಂದ್ರಶೇಖರ್, KRRS ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, KPRS ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ, AIKS ರಾಜ್ಯ ನಾಯಕರಾದ ಪಿ.ವಿ. ಲೋಕೇಶ್, AIKS ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ದಿವಾಕರ್, AIAWUರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮತ್ತು ಕರ್ನಾಟಕ ಜನಶಕ್ತಿ ರಾಜ್ಯ ನಾಯಕರಾದ ಕುಮಾರ್ ಸಮತಲ ಮತ್ತು ಕಾರ್ಮಿಕ ಮುಖಂಡರು ಹಾಗೂ ವಿದ್ಯಾರ್ಥಿ, ಯುವಜನ ಮುಖಂಡರುಗಳು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸ್ಥಳ: ಮಹಾತ್ಮಗಾಂಧಿ ಪತ್ರಿಮೆ ಎದುರು, ಮೌರ್ಯ ಹೋಟೆಲ್ ಹತ್ತಿರ, ಆನಂದರಾವ್ ಸರ್ಕಲ್, ಬೆಂಗಳೂರು.

ಸಮಯ: ಬೆಳಿಗ್ಗೆ - 11.30 ಕ್ಕೆ

ದಿನಾಂಕ: 2-10-2020 (ಶುಕ್ರವಾರ)

ಕರ್ನಾಟಕ ಸರಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ-2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಹಾಗೂ ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣ ಕೈಬಿಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಲಾಗುವುದು.

English summary
Many Farmers association plan stage Nataionwide Protest, hunger strike on Gandhi Jayanti opposing Farm bills by BJP government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X