ಅನ್ನದಾತರ ಹತ್ಯೆ, ಪ್ರಿಯಾಂಕಾ ಗಾಂಧಿ ಬಂಧನ; ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ

ಬೆಂಗಳೂರು, ಅಕ್ಟೋಬರ್ 4: ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದೇಶದ ಅನ್ನದಾತರಲ್ಲಿ ಅನಾಥ ಪ್ರಜ್ಞೆ ಕಾಡುವಂತಾಗಿದೆ. ರೈತ ವಿರೋಧಿ ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ರೈತರ ಉಸಿರನ್ನೇ ಅಡಗಿಸಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಇದನ್ನು ಖಂಡಿಸಿ ಸೋಮವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿತು.

ಅಲ್ಲದೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ರನ್ನು ಕಾಂಗ್ರೆಸ್ ನಿಯೋಗ ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

ಭಾನುವಾರ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಬೆಂಗಾವಲು ಕಾರು ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿದ್ದನ್ನು ಹಾಗೂ ಹತ್ಯೆಗೊಳಗಾದ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳಿದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಮೇಲೆ ಪೊಲೀಸರ ದೌರ್ಜನ್ಯ, ಕಾನೂನು ಬಾಹಿರ ಬಂಧನ ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಪಂಜಿನ ಮೆರವಣಿಗೆ ನಡೆಸಿದರು.

 ಕೃಷಿ ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು

ಕೃಷಿ ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು

ಸೋಮವಾರ ಸಂಜೆ 6 ಗಂಟೆಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಬಾಳೆಕುಂದ್ರಿ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು, ರೈತ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ರಾಜ್ಯಪಾಲರನ್ನು ಭೇಟಿ ಮಾಡಿ, ರೈತರ ಹತ್ಯೆ ಮಾಡಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಪಡೆದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಕಾನೂನು ಬಾಹಿರವಾಗಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಬಿಡುಗಡೆ ಮಾಡಬೇಕು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ತಪ್ಪಿಸಬೇಕು. ರೈತರ ಮರಣ ಶಾಸನವಾಗಿರುವ ಕೃಷಿ ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿರುವುದೇ ಹೋರಾಟದಿಂದ

ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿರುವುದೇ ಹೋರಾಟದಿಂದ

ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಇಂದು ದೇಶದಲ್ಲಿ ಸ್ವಾತಂತ್ರ್ಯಕ್ಕೆ ದೊಡ್ಡ ಅಪಮಾನವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿರುವುದೇ ಹೋರಾಟದಿಂದ. ಹೋರಾಟ ನಮ್ಮ ಹಕ್ಕು. ದೇಶದ ಅನ್ನದಾತ ಹೋರಾಟ ಮಾಡುವಾಗ ಅವರನ್ನು ಗೌರವಯುತವಾಗಿ ನೋಡಲಿಲ್ಲ, ಅವರ ಕಷ್ಟ ಆಲಿಸಲಿಲ್ಲ. ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರ ಕುಟುಂಬ ಕಾರು ಹರಿಸಿ ಕೊಲೆ ಮಾಡಿರುವುದು, ಮಾನವ ಕುಲಕ್ಕೇ ಮಾಡಿರುವ ಅಪಮಾನ, ಅನ್ಯಾಯ.''

"ಈ ಸಾವು ಯಾರಿಂದ, ಯಾವ ಕಾರಣಕ್ಕೆ ಆಗಿದೆ ಎಂಬುದು ಈಗಿನ ಪ್ರಶ್ನೆ. ರೈತರನ್ನು ಹತ್ಯೆ ಮಾಡಿದ ಮಂತ್ರಿ ಮಗನನ್ನು ಇದುವರೆಗೂ ಬಂಧಿಸಲು ಸಾಧ್ಯವಾಗಿಲ್ಲ ಎಂದರೆ ಇದು ಯಾವ ಆಡಳಿತ? ಯಾವ ಪ್ರಜಾಪ್ರಭುತ್ವ? ಯಾವ ಕಾನೂನು? ಇಷ್ಟು ಹೊತ್ತಿಗೆ ಉತ್ತರ ಪ್ರದೇಶದ ಸಿಎಂ ಹಾಗೂ ಡಿಸಿಎಂ, ಕೇಂದ್ರ ಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ. ರಾಜೀನಾಮೆಯೂ ಇಲ್ಲ, ಬಂಧನವೂ ಇಲ್ಲ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಪ್ರಿಯಾಂಕಾ ಗಾಂಧಿಯನ್ನು ಎಳೆದಾಡಿ ಬಂಧಿಸಿದ್ದಾರೆ

ಪ್ರಿಯಾಂಕಾ ಗಾಂಧಿಯನ್ನು ಎಳೆದಾಡಿ ಬಂಧಿಸಿದ್ದಾರೆ

"ನಮ್ಮ ರಾಷ್ಟ್ರೀಯ ನಾಯಕಿ, ಉತ್ತರಪ್ರದೇಶ ರಾಜ್ಯದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ರೈತರಿಗೆ ಸಾಂತ್ವನ ಹೇಳಲು ಹೋದರೆ, ಅದು ನಮ್ಮ ಹಕ್ಕಲ್ಲವೇ? ಹೋರಾಟವು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗವಲ್ಲವೇ? ಪ್ರಿಯಾಂಕಾ ಗಾಂಧಿ ಅವರು ಕೇವಲ 4 ಜನರ ಜತೆ ತೆರಳಿದಾಗ, ಅವರನ್ನು ಎಳೆದಾಡಿ ಬಂಧಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ರೈತರ ಹತ್ಯೆ ಜಲಿಯನ್ ವಾಲಬಾಗ್ ನರಮೇಧಕ್ಕಿಂತ ಹೀನ ಕೃತ್ಯ. ಬಿಜೆಪಿ ಸರ್ಕಾರ ಬ್ರಿಟಿಷರಿಗಿಂತ ಹೀನಾಯವಾಗಿ ನಡೆದುಕೊಳ್ಳುತ್ತಿದೆ,'' ಎಂದು ಕಿಡಿಕಾರಿದರು.

"ದೇಶದಲ್ಲಿ ಕಾನೂನು ದುರುಪಯೋಗ ಆಗುತ್ತಿದ್ದು, ಜನ ಎಚ್ಚೆತ್ತುಕೊಳ್ಳಬೇಕು. ನಾವು ಹೋರಾಟ ಮಾಡುತ್ತಿದ್ದು, ನಾಳೆ, ನಾಡಿದ್ದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಪ್ರಸ್ತಾವನೆ ಸಲ್ಲಿಸಬೇಕು. ಇದು ಕೇವಲ ಪಕ್ಷದ ವಿಚಾರವಲ್ಲ. ಪ್ರಜಾಪ್ರಭುತ್ವದ ಉಳಿವಿನ ವಿಚಾರ,'' ಎಂದರು.

 ಕಾಂಗ್ರೆಸ್ ರೈತರ ಪರವಾಗಿ ಹೋರಾಟ ಮಾಡುತ್ತದೆ

ಕಾಂಗ್ರೆಸ್ ರೈತರ ಪರವಾಗಿ ಹೋರಾಟ ಮಾಡುತ್ತದೆ

"ಸಾಂತ್ವನ ಹೇಳುವುದು ಭಾರತೀಯ ಸಂಸ್ಕೃತಿಯ ಭಾಗವೋ ಅಲ್ಲವೋ ಎಂಬ ಪ್ರಶ್ನೆಯೂ ಈಗ ಮೂಡಿದೆ. ಯಾವುದೇ ಕಾನೂನಿನ ವಾರೆಂಟ್ ಇಲ್ಲದೆ ನಮ್ಮ ನಾಯಕಿಯನ್ನು ಬಂಧಿಸಿದ್ದು, ಅದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಇಡೀ ಕಾಂಗ್ರೆಸ್ ಪಕ್ಷ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದಾದ್ಯಂತ ರೈತರ ಪರವಾಗಿ ಹೋರಾಟ ಮಾಡುತ್ತದೆ. ಅವರ ಧ್ವನಿಯಾಗಿ ನಾವೆಲ್ಲರೂ ನಿಲ್ಲುತ್ತೇವೆ.''

"ರೈತರನ್ನು ಕೊಂದವರನ್ನು ಈವರೆಗೂ ಬಂಧಿಸಿಲ್ಲ. ಅವರ ವಿರುದ್ಧ ಸರಿಯಾದ ಸೆಕ್ಷನ್‌ಗಳ ಮೂಲಕ ಪ್ರಕರಣ ದಾಖಲಿಸಿಲ್ಲ. ಅವರನ್ನು ಬಂಧಿಸುವ ಬದಲು ಸಾಂತ್ವನ ಹೇಳಲು ಹೊರಟವರನ್ನು ಬಂಧಿಸಿದೆ. ಪ್ರತಿಭಟನೆ ಮಾಡುವುದು, ಸಾಂತ್ವನ ಹೇಳುವುದು ನಮ್ಮ ಹಕ್ಕು. ರೈತರನ್ನು ಹತ್ಯೆ ಮಾಡಿದವರನ್ನು ಬಂಧಿಸಬೇಕು. ಈ ಕೊಲೆಗಡುಕ, ನೀಚ ಸರ್ಕಾರದ ವಿರುದ್ಧ ನಾವು ಹೋರಾಟ ಮುಂದುವರೆಸುತ್ತೇವೆ,'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Recommended Video

      Priyanka Gandhi ತಾನು ಭಂದಿಯಾಗಿರುವ ಕೋಣೆ ಗೀಡಿಸಿದ್ದು ಹೀಗೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+