Akon viral video: ಬೆಂಗಳೂರಿನ ಸ್ಟೇಜ್‌ನಲ್ಲೇ ಖ್ಯಾತ ಸಿಂಗರ್ ಅಕಾನ್ ಪ್ಯಾಂಟ್ ಎಳೆದ ಫ್ಯಾನ್ಸ್
ಅಮೇರಿಕಾ ಮೂಲಕ ಖ್ಯಾತ ಗಾಯಕ ಅಕಾನ್ (Akon) ಸದ್ಯ ಭಾರತದ ಪ್ರವಾಸದಲ್ಲಿದ್ದು, ವಿವಿಧ ನಗರದಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳ ಸರಣಿಯಲ್ಲಿದ್ದಾರೆ. ಬೆಂಗಳೂರಿಗೂ ಬಂದಿರುವ ಗಾಯಕ ಅಕಾನ್ ತೀವ್ರ ಮುಜುಗರಕ್ಕೀಡಾಗಿದ್ದಾರೆ ಎಂದು ಹೇಳಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವಾಗ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ಅಭಿಮಾನಿಗಳು ಅಕಾನ್ ಪ್ಯಾಂಟ್ ಅನ್ನು ವೇದಿಕೆಯ ಮೇಲೆ ಎಳೆದ ನಂತರ ಅವರ ಬೆಂಗಳೂರಿನ ಸಂಗೀತ ಕಾರ್ಯಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನವೆಂಬರ್ 14ರ ರಾತ್ರಿ ಬೆಂಗಳೂರಿನಲ್ಲಿ ಸಂಗೀತನ ಪ್ರದರ್ಶನದ ವೀಡಿಯೊದಲ್ಲಿ, ಹಾಡಿನ ಮಧ್ಯದಲ್ಲಿ ಮುಂದಿನ ಸಾಲಿನಲ್ಲಿದ್ದ ಅಭಿಮಾನಿಗಳು ಅಕಾನ್ ಅವರ ಪ್ಯಾಂಟ್ ಅನ್ನು ಎಳೆಯುವುದನ್ನು ತೋರಿಸಲಾಗಿದೆ. ಇದರಿಂದಾಗಿ ಅವರು ಅವುಗಳನ್ನು ಪದೇ ಪದೇ ಪ್ಯಾಂಟ್ ಎಳೆದುಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಸಂಗೀತ ಕಚೇರಿಯ ಅಂತಹ ಒಂದು ವೀಡಿಯೊ ಬಿಸಿ ಚರ್ಚೆಗೆ ನಾಂದಿ ಹಾಡಿದೆ. ಸಂಪೂರ್ಣ ಬಿಳಿ ಉಡುಪನ್ನು ಧರಿಸಿದ್ದ ಗಾಯಕ ಅಕಾನ್ ವೇದಿಕೆಯಲ್ಲೇ ಈ ಮುಜುಗರಕ್ಕೀಡಾಗಿದ್ದು, ಜಾಗತಿಕವಾಗಿ ಬೆಂಗಳೂರಿಗೂ ಇದು ಮುಜುಗರದ ವಿಚಾರ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ಸ್ಟೇಜ್ ಮೇಲೆ ಹಾಡುತ್ತಿದ್ದಾಗ ಅಕಾನ್ ಬೆಂಗಳೂರಿನ ಪ್ರದರ್ಶನದಲ್ಲಿ ಅಭಿಮಾನಿಗಳು ತಮ್ಮ ಬಿಳಿ ಪ್ಯಾಂಟ್ ಅನ್ನು ಎಳೆಯುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಅಭಿಮಾನಿಗಳು ಪ್ರದರ್ಶನದ ಮಧ್ಯದಲ್ಲಿ ಅಂತರರಾಷ್ಟ್ರೀಯ ಕಲಾವಿದನಿಗೆ ಈ ರೀತಿ "ಕಿರುಕುಳ" ಕೊಟ್ಟಿದ್ದಾರೆ ಎಂದು ಹಲವರು ಕಾಮೆಂಟ್ ಆರೋಪ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುಃಖಕರ, ಅವರಿಗೆ ವೇದಿಕೆಯಲ್ಲಿ ಲೈವ್‌ನಲ್ಲೇ ಕಿರುಕುಳ ನೀಡುತ್ತಿದ್ದರು. ಅವರು ಅಂತರರಾಷ್ಟ್ರೀಯ ಕಲಾವಿದರಾಗಿದ್ದು, ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಬೇಸರ ಹೊರಹಾಕಿದ್ದಾರೆ.
ಇದಕ್ಕೂ ಮುನ್ನ ಸಿಂಗರ್ ಭಾರತಕ್ಕೆ ಮರಳುವ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದರು. ಭಾರತ ಯಾವಾಗಲೂ ನನಗೆ ತುಂಬಾ ಪ್ರೀತಿಯನ್ನು ತೋರಿಸಿದೆ. ಇದು ನನಗೆ ಎರಡನೇ ಮನೆ ಇದ್ದಂತೆ. ಇಲ್ಲಿ ಶಕ್ತಿ, ಸಂಸ್ಕೃತಿ, ಅಭಿಮಾನಿಗಳು ಬೇರೊಂದು ಮಟ್ಟದಲ್ಲಿದೆ. ನಾನು ಹಿಂತಿರುಗಿ ನಿಮ್ಮೆಲ್ಲರಿಗಾಗಿ ನೇರ ಪ್ರದರ್ಶನ ನೀಡಲು ಉತ್ಸುಕನಾಗಿದ್ದೇನೆ. ಈ ಪ್ರವಾಸವು ವಿಶೇಷವಾದದ್ದು, ಒಟ್ಟಿಗೆ ಇತಿಹಾಸ ನಿರ್ಮಿಸೋಣ ಎಂದಿದ್ದರು. ಆದರೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯು ಸಂಚಲನ ಸೃಷ್ಟಿಸಿದೆ.
ತಲೆಕೆಡಿಸಿಕೊಳ್ಳದ ಅಕಾನ್
ನವೆಂಬರ್ 9ರಂದು ದೆಹಲಿಯಿಂದ ಪ್ರವಾಸ ಪ್ರಾರಂಭಿಸಿದ ಅಕಾನ್, ನವೆಂಬರ್ 14ರಂದು ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದರು. ಬಳಿಕ ಈ ವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ, ಅಭಿಮಾನಿಗಳು ಗಾಯಕನ ಪ್ಯಾಂಟ್ ಎಳೆಯುತ್ತಿರುವುದು ಕಂಡುಬಂದಿದ್ದು, ನಂತರ ಗಾಯಕ ವೇದಿಕೆಯಲ್ಲಿ ಕಷ್ಟಪಟ್ಟಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಅಕಾನ್, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿ, "ಬೆಂಗಳೂರು, ನೀವು ನಿನ್ನೆ ರಾತ್ರಿ ಅದ್ಭುತವಾಗಿದ್ದಿರಿ. ಹೀಗೆಯೇ ಮುಂದುವರಿಸಿ. ಮುಂಬೈ, ಶೀಘ್ರದಲ್ಲೇ ಭೇಟಿಯಾಗೋಣ" ಎಂದು ಬರೆದುಕೊಂಡಿದ್ದಾರೆ.












Click it and Unblock the Notifications