ನಕಲಿ ಎಸ್‌ಸಿ ಪ್ರಮಾಣಪತ್ರ: ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಪ್ರತಿಪಕ್ಷಗಳ ಆಗ್ರಹ
ಬೆಂಗಳೂರು, ಮಾರ್ಚ್ 24: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ತಮ್ಮ ಮಗಳು ಪರಿಶಿಷ್ಟ ಜಾತಿಯ ವ್ಯಕ್ತಿ ಎಂಬ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಈ ಬೆನ್ನಲ್ಲೇ ಕರ್ನಾಟಕದ ವಿಧಾನಸಭೆಯಲ್ಲಿ ಗದ್ದಲ ನಡೆದಿದ್ದು, ಈಗ ವಿರೋಧ ಪಕ್ಷಗಳು ಎಂಪಿ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.
ರೇಣುಕಾಚಾರ್ಯ ಅವರ ಸಹೋದರ ತಮ್ಮ ಮಗಳಿಗೆ ಎಸ್‌ಸಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ ಎಂದು ಎಂಪಿ ರೇಣುಕಾಚಾರ್ಯ ಒಪ್ಪಿಕೊಂಡಿದ್ದಾರೆ. "ನಾನು ಈಗಾಗಲೇ ಆ ಎಸ್‌ಸಿ ಪ್ರಮಾಣಪತ್ರವನ್ನು ವಾಪಾಸ್ ನೀಡುವಂತೆ ಹೇಳಿದ್ದೇನೆ. ನಾನು ಯಾವುದೇ ಪ್ರಮಾಣ ಪತ್ರವನ್ನು ಬಳಸಿಕೊಳ್ಳುತ್ತಿಲ್ಲ, ಮಾಡಿಸಿಕೊಂಡಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
"ನನ್ನ ಸಹೋದರ ಮತ್ತು ನಾನು 25 ವರ್ಷಗಳ ಹಿಂದೆಯಿಂದ ಭಿನ್ನಾಭಿಪ್ರಾಯವನ್ನು ಹೊಂದಿದ್ದೇವೆ. ನನ್ನ ಸಹೋದರ ಗುಲ್ಬರ್ಗದಿಂದ (ಎಸ್‌ಸಿ ಮೀಸಲು) ಸ್ಪರ್ಧಿಸಲು ಬಯಸಿದ್ದರು, ನಾನು ಆಗ ಕೂಡಾ ಆಕ್ಷೇಪಿಸಿದ್ದೆ," ಎಂದು ಹೇಳಿದರು. "ನಾನು ಯಾವುದೇ ನಕಲಿ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿಲ್ಲ ಅಥವಾ ಎಸ್‌ಸಿ ಸಮುದಾಯಕ್ಕೆ ಸೇರಬೇಕಾದ ಸವಲತ್ತುಗಳನ್ನು ಪಡೆದುಕೊಂಡಿಲ್ಲ," ಎಂದು ತಿಳಿಸಿದ್ದಾರೆ.

"ನಾನು ಅಂತಹ ಯಾವುದೇ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೇನೆ ಅಥವಾ ಎಸ್‌ಸಿ ಸಮುದಾಯಕ್ಕಾಗಿ ನಾನು ಯಾವುದೇ ಸೌಲಭ್ಯವನ್ನು ಪಡೆದಿದ್ದೇನೆ ಎಂಬುದಕ್ಕೆ ಯಾವುದೇ ಪುರಾವೆಗಳಿದ್ದರೆ, ಅವರು ದಾಖಲೆಗಳನ್ನು ಬಿಡುಗಡೆ ಮಾಡಲಿ. ನಾನು ಎಸ್‌ಸಿ ಪ್ರಮಾಣ ಪತ್ರವನ್ನು ಬಳಸಿದ್ದರೆ ಗಲ್ಲಿಗೇರಿಸಲು ಸಿದ್ಧ," ಎಂದು ರೇಣುಕಾಚಾರ್ಯ ಭಾವುಕರಾಗಿ ಹೇಳಿದರು.
ಸ್ಪಷ್ಟನೆ ಬೆನ್ನಲ್ಲೇ ಕ್ರಮಕ್ಕೆ ಕಾಂಗ್ರೆಸ್ ಶಾಸಕರ ಆಗ್ರಹ
ರೇಣುಕಾಚಾರ್ಯ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಶಾಸಕರು ಒತ್ತಾಯಿಸಿದರು. ರೇಣುಕಾಚಾರ್ಯ ವಿರುದ್ದ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು ಬೇಡ ಜಂಗಮ ಸರ್ಟಿಫಿಕೇಟ್ ಪಡೆದ ಬಗ್ಗೆ ರೇಣುಕಾಚಾರ್ಯ ಒಪ್ಕೊಂಡಿದ್ದಾರೆ. ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದನ ಬಾವಿಯಲ್ಲಿ ಧರಣಿ ನಡೆಸಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, "ಸತ್ಯಾಂಶವನ್ನು ತಪ್ಪಾಗಿ ಬಿಂಬಿಸಿ ಪ್ರಮಾಣಪತ್ರ ಪಡೆದಿದ್ದರೆ ಅದು ಶಿಕ್ಷಾರ್ಹ ಅಪರಾಧ. ಸವಲತ್ತುಗಳನ್ನು ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ. ಸವಲತ್ತುಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರವನ್ನು ಪಡೆಯಲಾಗುತ್ತದೆ. ಮತ್ಯಾಕೆ ಪಡೆಯಲಾಗುತ್ತದೆ," ಎಂದು ಪ್ರಶ್ನಿಸಿದರು.
ಈ ವಿಚಾರಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದ ಮಾಧುಸ್ವಾಮಿ
ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, "ಈ ವಿಚಾರಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಸರ್ಕಾರವು ನ್ಯಾಯಾಲಯ ಅಥವಾ ನ್ಯಾಯಾಧೀಶರಲ್ಲದ ಕಾರಣ ಯಾವುದೇ ಕ್ರಮವನ್ನು ಕೈಗೊಳ್ಳಲು ಸಾಧ್ಯವಿಲ್ಲ," ಎಂದು ಹೇಳಿದರು. "ನಿಮ್ಮಲ್ಲಿ ಪುರಾವೆಗಳು ಅಥವಾ ಯಾವುದೇ ಸಾಕ್ಷ್ಯಗಳು ಇದ್ದರೆ, ತಹಶೀಲ್ದಾರ್, ಸಹಾಯಕ ಆಯುಕ್ತರು, ಉಪ ಆಯುಕ್ತರು ಅಥವಾ ಸೂಕ್ತ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿ," ಎಂದು ತಿಳಿಸಿದರು.
ಇನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ತನ್ನ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಪರವಾಗಿ ಬ್ಯಾಟ್ ಬೀಸಿದರು. "ನಮ್ಮ ಮುಂದೆ ಯಾವುದೇ ಸತ್ಯ ಅಥವಾ ದಾಖಲೆಗಳಿಲ್ಲ, ಸರ್ಕಾರವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಈ ಸಮಸ್ಯೆಯನ್ನು ಸತ್ಯದ ಆಧಾರದಲ್ಲಿ ಚರ್ಚೆ ನಡೆಸಬೇಕಾಗಿದೆ," ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರೇಣುಕಾಚಾರ್ಯ ಅವರ ರಕ್ಷಣೆಗೆ ಮುಂದಾದರು. "ನಮ್ಮ ಮುಂದೆ ಯಾವುದೇ ಸತ್ಯ ಅಥವಾ ದಾಖಲೆಗಳಿಲ್ಲ, ಸರ್ಕಾರವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಈ ಸಮಸ್ಯೆಯನ್ನು ಸತ್ಯದ ಆಧಾರದ ಮೇಲೆ ಚರ್ಚಿಸಬೇಕು" ಎಂದು ಅವರು ಹೇಳಿದರು. ಮಂಗಳವಾರ ನಡೆದ ಚರ್ಚೆಯ ವೇಳೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ರೇಣುಕಾಚಾರ್ಯ ಅವರ ಪುತ್ರಿ ಚೇತನಾ ಬೇಡ ಜಂಗಮ (ಎಸ್‌ಸಿ) ಪ್ರಮಾಣಪತ್ರ ಪಡೆದಿದ್ದಾರೆ ಎಂಬ ದಾಖಲೆಯನ್ನು ವಿಧಾನಸಭೆಯಲ್ಲಿ ತೋರಿಸಿದ್ದರು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications