ಇಂಥಾ ಕಳ್ಳರು ಇರ್ತಾರಾ? ಲ್ಯಾಪ್‌ಟಾಪ್ ಕಳ್ಳನಿಂದ ಅಸಲಿ ಮಾಲೀಕನಿಗೆ ಒಂದು ಪತ್ರ
ಬೆಂಗಳೂರು, ನವೆಂಬರ್ 30: ಕಳ್ಳ ಎಂದ ಮೇಲೆ ಪ್ರಾಮಾಣಿಕತೆ ಎಲ್ಲಿಂದ ಬಂತು, ಕಳ್ಳತನ ಮಾಡುತ್ತಾನೆ ವಸ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಇಲ್ಲೊಬ್ಬ ಪ್ರಾಮಾಣಿಕ ಲ್ಯಾಪ್‌ಟಾಪ್ ಕಳ್ಳನಿದ್ದಾನೆ ಅವನ ಪ್ರಾಮಾಣಿಕತೆಯನ್ನೊಮ್ಮೆ ನೋಡಿ ..
ಕಳ್ಳನೊಬ್ಬನ ಬಗ್ಗೆ ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆಯಾಗುತ್ತಿದೆ, ಸ್ಟೀವ್ ವ್ಯಾಲಂಟೈನ್ ಅವರು ಹಂಚಿಕೊಂಡಿರುವ ಫೋಟೊ ಇದೀಗ ವೈರಲ್ ಆಗಿದೆ. ಕಳ್ಳನೊಬ್ಬ ವಿದ್ಯಾರ್ಥಿಯ ಲ್ಯಾಪ್‌ಟಾಪ್ ಕದ್ದು ಪರಾರಿಯಾಗಿದ್ದ ನಂತರ ಲ್ಯಾಪ್ ಟಾಪ್ ಮಾಲಿಕನಿಗೆ ಇ-ಮೇಲ್ ಮೂಲಕ ಪತ್ರವೊಂದನ್ನು ರವಾನಿಸಿದ್ದ, ಕಳ್ಳ ಕ್ಷಮೆ ಕೇಳುವುದಲ್ಲದೇ ಕಾಲೇಜಿಗೆ ಸಂಬಂಧಿಸಿದ ಅಸೈನ್‌ಮೆಂಟ್‌ಗಳು ಇದ್ದರೆ ವಾಪಸ್ ಕೊಡುವುದಾಗಿಯೂ ಹೇಳಿದ್ದ.
So my flat mates laptop got stolen today, please pree what the thief sent him 😂😂😂😂 pic.twitter.com/pDhhpmncPz
— Stevie Valentine (@StevieBlessed) November 28, 2018
ದಯವಿಟ್ಟು ನನ್ನ ಕ್ಷಮಿಸಿ.. ನಾನು ಕಡು ಬಡವ.. ಹಣಕ್ಕಾಗಿ ನಿಮ್ಮ ಲ್ಯಾಪ್‌ಟಾಪ್ ಅನಿವಾರ್ಯವಾಗಿ ಕಳ್ಳತನ ಮಾಡಿದ್ದೇನೆ. ನಿಮ್ಮ ಪೋನ್ ಮತ್ತು ವಾಲೆಟ್ ಮುಟ್ಟಿಲ್ಲ. ಅದರಿಂದ ನಿಮಗೆ ಕೊಂಚ ಸಹಾಯ ಆಗಿದೆ ಎಂದು ಭಾವಿಸಿದ್ದೇನೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ.

ನೀವು ಯೂನಿವರ್ಸಿಟಿ ಸ್ಟೂಡೆಂಟ್ ಎಂದು ತಿಳಿಸಿದೆ, ಇದರಲ್ಲಿ ಇರುವ ಡ್ಯಾಕ್ಯುಮೆಂಟ್‌ಗಳು ಬೇಕಾದರೆ ಕೇಳಿ..ಕಳುಹಿಸಿ ಕೊಡುತ್ತೇನೆ ಎಂದು ಸಹ ಕಳ್ಳ ಆಫರ್ ನೀಡಿದ್ದಾನೆ. ಸ್ಟೀವ್ ವ್ಯಾಲೆಂಟೈನ್ ಅವರ ಈ ಟ್ವೀಟ್‌ನ್ನು 68 ಸಾವಿರ ಮಂದಿ ರಿಟ್ವೀಟ್ ಮಾಡಿದ್ದು, 220 ಕೆ ಲೈಕ್ ಮಾಡಿದ್ದಾರೆ.











Click it and Unblock the Notifications