ಕಿಮ್ಸ್‌ನಲ್ಲಿ ಶಿಶುಗಳ ಸರಣಿ ಸಾವು, ತನಿಖೆಗೆ ಆದೇಶ

ಬೆಂಗಳೂರು, ಜುಲೈ 10 : ಕಿಮ್ಸ್‌ನಲ್ಲಿ ನವಜಾತ ಶಿಶುಗಳ ಸಾವಿನ ಹಿನ್ನಲೆಯಲ್ಲಿ ಪೋಷಕರು ಮಕ್ಕಳನ್ನು ಬೇರೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಮಕ್ಕಳ ಸರಣಿ ಸಾವಿನ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಒಂದೇ ದಿನ ನಾಲ್ಕು ಮಕ್ಕಳು ಮೃತಪಟ್ಟಿವೆ. ಆದರೆ, ಮಕ್ಕಳು ಸಾವನ್ನಪ್ಪಲು ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣವಲ್ಲ ಎಂದು ವೈದ್ಯರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. [ವೈದ್ಯರ ಕೆಲಸ ನಿಲ್ಲಿಸಿದ ವಾಟ್ಸಪ್ ಸಂದೇಶ!]

ut khader

ಮಕ್ಕಳ ಸರಣಿ ಸಾವಿನ ಹಿನ್ನಲೆಯಲ್ಲಿ ಪೋಷಕರು ಮಕ್ಕಳನ್ನು ಬೇರೆ ಆಸ್ಪತ್ರೆಗಳಿಗೆ ದಾಖಲು ಮಾಡಿದ್ದು, ಕಿಮ್ಸ್‌ನ ನವಜಾತ ಶಿಶುಗಳ ತುರ್ತು ನಿಗಾ ಘಟಕ (ಎನ್‌ಐಸಿಯು)ಗೆ ಬೀಗ ಹಾಕಲಾಗಿದೆ. ಆಸ್ಪತ್ರೆಯಲ್ಲಿನ ನವಜಾತ ಶಿಶುಗಳ ಸಾವಿನ ಕುರಿತು ರಾಜ್ಯ ಮಕ್ಕಳ ಹಕ್ಕು ಆಯೋಗ ಸ್ವಯಂಪ್ರೇರಿತವಾದ ದೂರನ್ನು ದಾಖಲು ಮಾಡಿಕೊಂಡಿದೆ.'[ಕಿಮ್ಸ್ ಆಸ್ಪತ್ರೆಯಲ್ಲಿ ಐದು ಮಕ್ಕಳ ಸಾವು]

ಉನ್ನತ ಮಟ್ಟದ ಸಮಿತಿ ರಚನೆ : ಕಿಮ್ಸ್‌ನಲ್ಲಿನ ಮಕ್ಕಳ ಸಾವಿನ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಬೆಳಗಾವಿಯಲ್ಲಿ ತಿಳಿಸಿದ್ದಾರೆ. [ಕಿಮ್ಸ್ ನೋಡಿ ಸಚಿವರು ಗರಂ]

ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ವಾಮದೇವ್ ನೇತೃತ್ವದಲ್ಲಿ ಐವರು ವೈದ್ಯರ ತಂಡ ಮಕ್ಕಳ ಸಾವಿನ ಕುರಿತು ತನಿಖೆ ನಡೆಸಲಿದ್ದು, ಸೋಮವಾರ ವರದಿ ನೀಡಲಿದೆ. ವರದಿ ಬಂದ ನಂತರ ಸಿಬ್ಬಂದಿಗಳ ಲೋಪವಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಮಕ್ಕಳ ಸಾವಿನ ಪ್ರಕರಣ

* ಬುಧವಾರ ಬೆಳಗ್ಗೆ ಮಾಗಡಿಯ ಹರೀಶ್ ಮತ್ತು ರಶ್ಮಿ ದಂಪತಿಯ ಮಗು
* ಸಂಜೆ 4 ಗಂಟೆಗೆ ಯಲಚೇನಹಳ್ಳಿಯ ಮಂಜುನಾಥ್ ಮತ್ತು ದಾಕ್ಷಾಯಿಣಿ ದಂಪತಿಯ ಮಗು
* ರಾತ್ರಿ 9 ಗಂಟೆಗೆ ಕಲಬುರಗಿಯ ಭಾಗ್ಯಲಕ್ಷ್ಮೀ ಮತ್ತು ದೇವರಾಜ್ ದಂಪತಿ ಮಗು
* ರಾತ್ರಿ ಯಲಹಂಕದ ರೇಖಾ ಮತ್ತು ರಾಜೇಶ್ ದಂಪತಿಯ ಮಗು ಕಿಮ್ಸ್‌ನಲ್ಲಿ ಮೃತಪಟ್ಟಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+