ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಬಟ್ಟೆ ಸುತ್ತಿ ಹೊಡೆದರಾ ಮಾಜಿ ಪ್ರಧಾನಿ ದೇವೇಗೌಡರು?

|
Google Oneindia Kannada News

Recommended Video

ಬಿಜೆಪಿಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟ ಎಚ್ ಡಿ ದೇವೇಗೌಡ | Oneindia Kannada

ಬೆಂಗಳೂರು, ನವೆಂಬರ್.28: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹೋಗಿ ಮುಗ್ಗರಿಸಿದ ಬಿಜೆಪಿ ಬಗ್ಗೆ ದೇಶಾದ್ಯಂತ ಸುದ್ದಿ ಆಗುತ್ತಿದೆ. ವಿರೋಧ ಪಕ್ಷದ ನಾಯಕರಿಗಂತೂ ಭಾರತೀಯ ಜನತಾ ಪಕ್ಷದ ಯಡವಟ್ಟು ಆಹಾರವಾಗಿ ಬಿಟ್ಟಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳು ಒಗ್ಗೂಡಿವೆ. ಅದರ ಪ್ರತಿಫಲವಾಗಿ ಇಂದು ಮಹಾ ವಿಕಾಸ್ ಅಗಾದಿ ಜನ್ಮ ತಾಳಿದೆ. ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ಒಂದಾದ ಮೂರು ಪಕ್ಷಗಳು ಸರ್ಕಾರ ರಚಿಸಿವೆ.

ತ್ರಿಪಕ್ಷ 'ಮಹಾ' ಸರ್ಕಾರ ರಚನೆ: ಠಾಕ್ರೆ ಸಂಪುಟ ಸೇರಿದವರ ಪಟ್ಟಿತ್ರಿಪಕ್ಷ 'ಮಹಾ' ಸರ್ಕಾರ ರಚನೆ: ಠಾಕ್ರೆ ಸಂಪುಟ ಸೇರಿದವರ ಪಟ್ಟಿ

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜ್ಯದ 19ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇದರ ಬೆನ್ನಲ್ಲೇ ನೂತನ ಸರ್ಕಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಶುಭಾಶಯ ಕೋರಿದ್ದಾರೆ. ಇದರ ಜೊತೆಗೆ ಬಿಜೆಪಿಗೂ ಟ್ವೀಟ್ ಏಟು ಕೊಟ್ಟಿದ್ದಾರೆ.

Ex-Prime Minister H.D.Devegowda Attcked On Bjp Leaders.

ಬಿಜೆಪಿಗೆ ಬಟ್ಟೆ ಸುತ್ತಿ ಹೊಡೆದರಾ ಗೌಡರು?

ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಪಕ್ಷಗಳಿಗೆ ಒಂದು ಪಾಠವಾಗಬೇಕು. ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳು ಸರ್ಕಾರ ರಚಿಸಿದ್ದು ಆಗಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಟ್ಟೆಯನ್ನೇ ಹರಿದು ಹಾಕಲು ಯತ್ನಿಸಿದ ಪಕ್ಷದ ಮುಖ ಮೇಲೆ ಹೊಡೆದಂತೆ ಆಗಿದೆ.

ಮಹಾರಾಷ್ಟ್ರ ಮೈತ್ರಿ ಸರ್ಕಾರದ ಬಗ್ಗೆ ದೇವೇಗೌಡ ಭವಿಷ್ಯಮಹಾರಾಷ್ಟ್ರ ಮೈತ್ರಿ ಸರ್ಕಾರದ ಬಗ್ಗೆ ದೇವೇಗೌಡ ಭವಿಷ್ಯ

ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಲು ಮುಂದಾಗಿದ್ದ ಪಕ್ಷಕ್ಕೆ ಸರಿಯಾದ ಸ್ಥಿತಿ ಬಂದಿದೆ. ಇದು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಗೆಲುವು ಎಂಬ ಅರ್ಥದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಟ್ವೀಟ್ ಮಾಡಿದ್ದಾರೆ.

English summary
This Is A Tight Slap On The Face Of Those Trying To Destroy The Democratic Fabric- HDD Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X