• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಔರಾದ್ಕರ್ ವರದಿ ಯಥಾವತ್ ಜಾರಿಗೆ ಮಾಜಿ ಗೃಹ ಸಚಿವ ಆಗ್ರಹ

|
Google Oneindia Kannada News

ಬೆಂಗಳೂರು: ನ. 14: ಪೊಲೀಸ್ ಸಿಬ್ಬಂದಿಗೆ ವೇತನ ಹಾಗೂ ಇತರೆ ಸೌಲಭ್ಯ ಹೆಚ್ಚಳ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದಕರ್ ನೀಡಿರುವ ವರದಿಯನ್ನು ಯತಾವತ್ ಜಾರಿ ಮಾಡುವಂತೆ ಕೋರಿ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪೊಲೀಸ್ ಸಿಬ್ಬಂದಿ ವೇತನ ಶ್ರೇಣಿ ಹೆಚ್ಚಿಸುವ ಸಂಬಂಧ ಔರಾದ್ಕರ್ ವರದಿಯನ್ನು ಭಾಗಶಃ ಜಾರಿ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿಲ್ಲ. ಹಣಕಾಸು ಇಲಾಖೆಯ ಈ ನಿರ್ಧಾರದಿಂದ ಇಲಾಖೆಗೆ ಹೊಸದಾಗಿ ಸೇರುವರಿಗೆ ಮಾತ್ರ ಅನುಕೂಲವಾಗಲಿದೆ. ಈಗಾಗಲೇ ಅನೇಕ ವರ್ಷಗಳಿಂದ ಹಗಳಿರುಳು ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿಗೆ ಅನ್ಯಾಯವಾಗಲಿದ್ದು, ಇದು ನಿರಾಶದಾಯಕ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

   ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada

   ನಾಡಿನ ಸೇವೆಯಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಗೆ ವೇತನ, ಭತ್ಯೆ ಹೆಚ್ಚಿಸಿ ಅವರನ್ನು ಗೌರವಿಸಬೇಕಿದೆ. ಕರೋನಾದಂತಹ ಸಂಕಷ್ಟ ಕಾಲದಲ್ಲಿ ಜೀವ ಒತ್ತೆಯಿಟ್ಟ ಪೊಲೀಸ್ ಸಿಬ್ಬಂದಿಯ ಕ್ಷೇಮಕ್ಕಾಗಿ ಔರಾದ್ಕರ್ ವರದಿಯನ್ನು ಯಥಾವತ್ ಜಾರಿಗೆ ತರುವ ಮೂಲಕ ಪೊಲೀಸ್ ಸಿಬ್ಬಂದಿಗೆ ನ್ಯಾಯ ದೊರಕಿಸಿಕೊಡಬೇಕಿದೆ ಎಂದು ಪಾಟೀಲ್ ಒತ್ತಾಯಿಸಿದ್ದಾರೆ.

   English summary
   Ex home minister M.B. Patil writes a letter to CM and Home Minister Bommai to exucute Raghavendra Auradkar Report.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X