Bengaluru: ಫ್ಯಾಷನ್‌ಗಾಗಿ ₹54 ಲಕ್ಷ ಸಂಬಳ ಬರುವ ಕೆಲಸ ಬಿಟ್ಟ ಬೆಂಗಳೂರು ಉದ್ಯೋಗಿ
ಕೆಲವರಿಗೆ ಕೆಲಸ ಸಿಕ್ಕರೆ ಸಾಕಪ್ಪ ಜೀವನದಲ್ಲಿ ಹಣ ಸಂಪಾದನೆ ಮಾಡಿ ಸೆಟಲ್ ಆಗಬಹುದು ಎಂದು ಕೊಳ್ಳುತ್ತಾರೆ. ಇನ್ನೂ ಕೆಲವರು ಕಡಿಮೆ ಸಂಬಳ ಬರುವ ಕೆಲಸ ಬದಲಾವಣೆ ಮಾಡಲು ಬೇರೆ ಕೆಲಸಕ್ಕೆ ಹುಡುಕಾಟ ನಡೆಸುತ್ತಾರೆ. ಇನ್ನೂ ಕೆಲವರು ಬದುಕಿನ ಅನಿವಾರ್ಯತೆಗೆ ತಮ್ಮಿಷ್ಟದ ಕೆಲಸ ಮಾಡಲಾಗದೆ, ಸಂಬಳ ಬರುವ ಕೆಲಸಕ್ಕೆ ಅಂಟಿಕೊಂಡಿರುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕೂಡ ತನಗಿಷ್ಠವಾದ ಕೆಲಸ ಮಾಡಲು ವರ್ಷಕ್ಕೆ ₹54 ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನೇ ಬಿಟ್ಟಿದ್ದಾರೆ.
ಸ್ಕ್ವೇರ್ ಯಾರ್ಡ್‌ನಲ್ಲಿ ಮಾಜಿ ಸಹಾಯಕ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಪರಂತಪ್ ಚೌಧರಿ ಈ ನಿರ್ಧಾರ ಮಾಡಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೈಜು ಮತ್ತು ಸ್ಕ್ವೇರ್ ಯಾರ್ಡ್ಸ್‌ನಂತಹ ಕಂಪನಿಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಕೆಲಸ ಮಾಡಿರುವ ಅವರು, ಬರವಣಿಗೆ ಮತ್ತು ಉದ್ಯಮಶೀಲತೆಯ ಬಗ್ಗೆ ಗಮನ ನೀಡಲು ಕೆಲಸ ಬಿಟ್ಟಿದ್ದಾರೆ.

ಆರು ತಿಂಗಳ ಹಿಂದೆ, ಚೌಧರಿ ಅವರು ಕಾರ್ಪೊರೇಟ್ ಕೆಲಸದ ಜಂಜಾಟದಿಂದ ಹೊರಬಂದು ಆರಾಮದಾಯಕ ಬದುಕು ನಡೆಸುವ ಬಗ್ಗೆ ಯೋಚಿಸಿದರಯ. ಈಗ ಮಾಡುತ್ತಿರುವ ಕೆಲಸದಲ್ಲಿ ಮೊದಲಿಗಿಂತ ಆದಾಯ ಕಡಿಮೆ ಇದ್ದರೂ ತಮ್ಮ ಹೊಸ ಜೀವನಶೈಲಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದಾಗಿ ತಿಳಿಸಿದ್ದಾರೆ.
ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ತಮ್ಮ ಹೊಸ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಪ್ರತಿ ದಿನ ಬರೆಯಲು ₹54,00,000 ಸಂಬಳ ಬರುತ್ತಿದ್ದ ಕೆಲಸ ಬಿಟ್ಟಿದ್ದೇನೆ. ಜೀವನದಲ್ಲಿ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಲು ಮತ್ತು ರಿಮೋಟ್, ಡಿಜಿಟಲ್ ಮತ್ತು ಲಾಭದಾಯಕ ವ್ಯಾಪಾರವನ್ನು ಮಾಡಲು ಕೆಲಸ ಬಿಟ್ಟಿದ್ದೇನೆ ಎಂದಿದ್ದಾರೆ.
ಈ ಮೊದಲು ವಾರಕ್ಕೆ 70 ಗಂಟೆಗಳ ಕೆಲಸ ಮಾಡುತ್ತಿದ್ದ ಅವರು, ತಮ್ಮ ಆಯ್ಕೆಯ ಪ್ರಭಾವದ ಬಗ್ಗೆ ಮಾತನಾಡಿದ್ದಾರೆ. ನಾನು ಕೆಲಸ ಬಿಟ್ಟರೂ ಈಗ ಹಿಂದಿನ ಸಂಬಳದ 10% ಕ್ಕಿಂತ ಕಡಿಮೆ ಗಳಿಸಿದ್ದೇನೆ, ಆದರೆ ಕಳೆದ ಮೂರು ವರ್ಷಗಳಿಗಿಂತ ಈ ಮೂರು ತಿಂಗಳಿನಲ್ಲಿ ಹೆಚ್ಚು ಜೀವಿಸಿದ್ದೇನೆ ಎಂದು ಹೇಳಿದ್ದಾರೆ.
ಪರಂತಪ್ ಚೌಧರಿ ಅವರಿಗೆ ಬರೆಯುವುದು ಎಂದರೆ ಮೊದಲಿನಿಂದಲೂ ಹೆಚ್ಚು ಇಷ್ಟವಾದ ಕೆಲಸವಾಗಿತ್ತು, ಈಗ ಅದನ್ನೇ ಪ್ರವೃತ್ತಿಯನ್ನಾಗಿ ಮಾಡಿಕೊಂಡು ಅದರ ಸುತ್ತ ವ್ಯವಹಾರ, ವ್ಯಾಪಾರ ವೃದ್ಧಿಸಲು ಕೆಲಸ ಮಾಡುತ್ತಿದ್ದಾರೆ.
ಲಕ್ಷಾಂತರ ಉದ್ಯೋಗಿಗಳು ಇಂದಿಗೂ ತಮಗೆ ಇಷ್ಟ ಇಲ್ಲದೇ ಇದ್ದರೂ ಕುಟುಂಬಕ್ಕಾಗಿ, ಕಮಿಟ್‌ಮೆಂಟ್‌ಗಳಿಗಾಗಿ ಅಥವಾ ಹಣದ ಅನಿವಾರ್ಯತೆಗಾಗಿ ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಚೌಧರಿಯಂತಹ ಕೆಲವರು ಮಾತ್ರ ರಿಸ್ಕ್ ತೆಗೆದುಕೊಂಡು ಕೆಲಸದಿಂದ ಹೊರಬಂದು ಇಷ್ಟದ ಕೆಲಸ, ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ಸು ಕಾಣುತ್ತಾರೆ.












Click it and Unblock the Notifications