ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಗಿಳಿಯಲಿವೆ ಉಬರ್ ಪರಿಸರ ಸ್ನೇಹಿ ಕಾರುಗಳು

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 15: ಬೆಳೆಯುತ್ತಿರುವ ಬೆಂಗಳೂರಿನ ಪ್ರಮುಖ ಸಮಸ್ಯೆ ಪರಿಸರ ಮಾಲಿನ್ಯ. ಹೀಗಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಉಬರ್ ಕಂಪನಿ ಪರಿಸರ ಸ್ನೇಹಿ ಕಾರುಗಳನ್ನು ಬೆಂಗಳೂರಿನ ರಸ್ತೆಗಿಳಿಸಲು ಮುಂದಾಗಿದೆ.

ಹಸಿರು ಬೆಂಗಳೂರು ಹೆಸರಿನಲ್ಲಿ ಈ ತಿಂಗಳ ಅಂತ್ಯಕ್ಕೆ ನೈಸರ್ಗಿಕ ಅನಿಲ ಬಳಸುವ ಕ್ಯಾಬ್ ಗಳು ಬೆಂಗಳೂರಿನ ರಸ್ತೆಗಳನ್ನು ಆಕ್ರಮಿಸಿಕೊಳ್ಳಲಿವೆ. ಜೂನ್ 20ರಂದು ಮೊದಲ ಹಂತದಲ್ಲಿ ಕ್ಯಾಬ್ ಗಳಿಗೆ ಚಾಲನೆ ನೀಡಲಾಗುತ್ತದೆ. ನೈಸರ್ಗಿಕ ಅನಿಲ ಬಳಸುವ ಕ್ಯಾಬ್ ಗಳ ಬಳಕೆಗಾಗಿ ಜಿಎಐಎಲ್ ಜೊತೆಗೆ ಉಬರ್ ಒಪ್ಪಂದ ಮಾಡಿಕೊಂಡಿದೆ.

ಓಲಾಗೆ 4,898 ಕೋಟಿ ರೂಪಾಯಿ ನಷ್ಟಓಲಾಗೆ 4,898 ಕೋಟಿ ರೂಪಾಯಿ ನಷ್ಟ

ಇದೇ ವೇಳೆ ಇದೇ ಜೂನ್ 25ರಿಂದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಮತ್ತೊಂದು ಕಂಪನಿ ಝಿಬ್ ಕ್ಯಾಬ್ಸ್ ಕೂಡ 50 ಪರಿಸರ ಸ್ನೇಹಿ ಕಾರುಗಳನ್ನು ರಸ್ತೆಗಿಳಿಸಲಿದೆ. ಮೊದಲ ಹಂತದಲ್ಲಿ ಎರಡೂ ಕಂಪನಿಗಳು ವಿಮಾನ ನಿಲ್ದಾಣದ ಮಾರ್ಗದಲ್ಲಿ ಈ ಕಾರುಗಳನ್ನು ಓಡಿಸಲಿವೆ.

 Environment friendly cabs to hit Bengaluru roads

ಜಿಎಐಎಲ್ ಈಗಾಗಲೆ ಲಗ್ಗೆರೆ ಮತ್ತು ಸುಂಕದಕಟ್ಡೆಯಲ್ಲಿ ಗ್ಯಾಸ್ ರಿಫಿಲಿಂಗ್ ಸ್ಟೇಷನ್ ಗಳನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಪೀಣ್ಯ, ಬೊಮ್ಮಸಂದ್ರ, ಜಿಗಣಿ ಮತ್ತು ಬಂಡೆ ಕೊಡಿಗೆಹಳ್ಳಿಯಲ್ಲಿ ಇದೇ ರೀತಿಯ ಸ್ಟೇಷನ್ ಗಳನ್ನು ತೆರೆಯಲಿದೆ.

ಬೆಂಗಳೂರು ನಗರದಲ್ಲಿ ಒಟ್ಟು 1.56 ಲಕ್ಷ ಟ್ಯಾಕ್ಸಿಗಳು ಕಾರ್ಯ ನಿರ್ವಹಿಸುತ್ತವೆ. ಇದರಲ್ಲಿ ಹೆಚ್ಚಿನವು ಪೆಟ್ರೋಲ್ ಮತ್ತು ಡೀಸೆಲ್ ನಿಂದ ಕಾರ್ಯನಿರ್ವಹಿಸುತ್ತವೆ. ಈಗಾಗಲೇ ದೆಹಲಿಯಲ್ಲಿ ಹೆಚ್ಚಿನ ಕಾರುಗಳು ನೈಸರ್ಗಿಕ ಅನಿಲ ಬಳಕೆ ಆರಂಭಿಸಿವೆ. ಇದೀಗ ಮುಂಬೈ ಮತ್ತು ಬೆಂಗಳೂರಿನಲ್ಲಿ ಇಂಥಹ ಪ್ರಯತ್ನಗಳು ಆರಂಭವಾಗಿವೆ.

English summary
Environment friendly compressed natural gas (CNG) cabs will finally hit Bengaluru city roads this month-end. Uber, a major cab aggregator in the city to launch ‘Hasiru Bengaluru’ (Green Bengaluru) on June 20 to roll out CNG cabs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X