ಖಾಸಗಿ ಬಸ್‌ ಸಿಬ್ಬಂದಿಯಿಂದ ಯುವತಿಗೆ ಲೈಂಗಿಕ ಕಿರುಕುಳ: ದೂರು

ಬೆಂಗಳೂರು, ಜನವರಿ 18: ಖಾಸಗಿ ಬಸ್ ಸಿಬ್ಬಂದಿ ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು ದೂರು ದಾಖಲಿಸಲಾಗಿದೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಕಂಡಕ್ಟರ್‌ 19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ, ಆತ ತಲೆ ಮರೆಸಿಕೊಂಡಿದ್ದಾನೆ.

ಈ ಮಧ್ಯೆ ಯುವತಿಯ ಸಂಬಂಧಿಕರು ಕಿರುಕುಳ ನೀಡಿದ ವ್ಯಕ್ತಿಯನ್ನು ಹಿಡಿಯುವ ಬದಲು ಬಸ್‌ ಚಾಲಕನನ್ನು ಹಿಡಿದು ಥಳಿಸಿದ್ದು, ಇದೀಗ ಯುವತಿಯ ಸಂಬಂಧಿಕರ ಮೇಲೆ ದೂರು ದಾಖಲಾಗಿದೆ.

Engineering student sexually assaulted by Private bus conductor

ಹೊಸಕೋಟೆಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಶಿವಮೊಗ್ಗದಿಂದ ಬೆಂಗಳೂರಿಗೆ ವಾಪಾಸ್ಸಾಗುವಾಗ ಈ ಘಟನೆ ನಡೆದಿದೆ. ಆಕೆ ನಿದ್ದೆಗೆ ಜಾರಿದ್ದ ಸಂದರ್ಭದಲ್ಲಿ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಕೂಗಾಡಿದಾಗ ಆತ ಸ್ಥಳದಿಂದ ಹೋಗಿದ್ದಾನೆ. ಯುವತಿ ಕೂಡಲೇ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಪರೀಕ್ಷೆ ಮುಗಿಸಿಕೊಂಡು ಬಳಿಕ ದೂರು ನೀಡು ಎಂದು ಸಲಹೆ ನೀಡಿದ್ದರು.

ಅದೇ ದಿನ ರಾತ್ರಿ ಆ ಬಸ್ ತುಮಕೂರು ರಸ್ತೆ ಗೊರಗುಂಟೆಪಾಳ್ಯ ಬಳಿ ಬಂದಾಗ ಬಸ್ ನಿಲ್ಲಿಸಿ ಅವರು ಕಂಡಕ್ಟರ್‌ಗಾಗಿ ಹುಡುಕಾಟ ನಡೆಸಿದ್ದಾರೆ, ಆತ ಸಿಗದ ಕಾರಣ ಚಾಲಕನಿಗೆ ಥಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+