ಹಾಸ್ಟೆಲ್ ಮಹಡಿಯಿಂದ ಬಿದ್ದ ವಿದ್ಯಾರ್ಥಿನಿ ದಾರುಣ ಸಾವು

ಬೆಂಗಳೂರು, ಡಿ.8: ಹಾಸ್ಟೆಲ್‌​ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸೋಮವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

19 ವರ್ಷದ ವಯಸ್ಸಿನ ವಿದ್ಯಾರ್ಥಿನಿ ಲಾವಣ್ಯ ಸಾವನ್ನಪ್ಪಿರುವ ಹುಡುಗಿ. ತೊಗಟವೀರ ಕ್ಷತ್ರಿಯ ಸಂಘ ಹಾಸ್ಟೆಲ್​ನಲ್ಲಿ ಈ ಘಟನೆ ನಡೆದಿತ್ತು. ಲಾವಣ್ಯ ಕೆಆರ್ ವೃತ್ತದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ 2ನೇ ಸೆಮಿಸ್ಟರ್​ನ ವಿದ್ಯಾರ್ಥಿನಿಯಾಗಿದ್ದಳು.

ಈಕೆ ಕಾರ್ಪೋರೇಷನ್​ ಬಳಿಯಿರುವ ತೊಗಟವೀರ ಕ್ಷತ್ರಿಯ ಸಂಘ ಹಾಸ್ಟೆಲ್​ನಲ್ಲಿ ತಂಗಿದ್ದಳು. ಲಾವಣ್ಯ ವೈ.ಎನ್ ಹೊಸಕೋಟೆ ನಿವಾಸಿಯಾಗಿದ್ದು, ನಿನ್ನೆ ಮಧ್ಯಾಹ್ನದ ವೇಳೆ ಹಾಸ್ಟೆಲ್ ಮಹಡಿ ಮೇಲೆ ಓಡಾಡುತ್ತಿದ್ದವಳು ಮಹಡಿಯಲ್ಲಿ ಹಾಕಿದ್ದ ಪ್ಲಾಸ್ಟಿಕ್ ಶೀಟ್ ಮೇಲೆ ಕಾಲಿಟ್ಟಿದ್ದಾಳೆ.

Engineer student commits suicide in Bengaluru

ಅಷ್ಟೇನು ಗಟ್ಟಿಯಾಗಿರದ ಪ್ಲಾಸ್ಟಿಕ್ ಶೀಟ್ ಕುಸಿದಿದೆ.ನೆಲಕ್ಕೆ ಬಿದ್ದ ಲಾವಣ್ಯ ತೀವ್ರವಾಗಿ ಗಾಯಗೊಂಡಿದ್ದಾಳು. ಸ್ಥಳೀಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಮಹಡಿಯಿಂದ ಅಕಸ್ಮಾತ್ ಆಗಿ ಬಿದ್ದಳೇ? ಅಥವಾ ಆತ್ಮಹತ್ಯೆ ಮಾಡಿಕೊಂಡಳೇ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಸಂಪಗಿರಾಮನಗರ ಪೊಲೀಸರು ಸದ್ಯಕ್ಕೆ ಅತ್ಮಹತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೀದರ್ :ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಯುವತಿಯರು ಡೆತ್‌ನೋಟ್ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಇಬ್ಬರು ಯುವಕರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಚಂಡಕಾಪುರದ ಹೊರವಲಯದ ಬಾವಿಗೆ ಬಿದ್ದು ಸುನೀತಾ (19) ಮತ್ತು ಸರಸ್ವತಿ (20) ಆತ್ಮಹತ್ಯೆಗೆ ಶರಣಣಾಗಿದ್ದಾರೆ. ಪ್ರೇಮ ಪ್ರಕರಣದಲ್ಲಿ ಸಿಲುಕಿದ್ದ ಇವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಬಸವಕಲ್ಯಾಣ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+