ಮೇ.15ರಿಂದ ಬೆಂಗಳೂರಿನಲ್ಲಿ ಹಲಸು ಮೇಳ
ಬೆಂಗಳೂರು, ಮೇ14: ರಾಜ್ಯದಲ್ಲಿ ಹಲಸು ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು(ಜಿಕೆವಿಕೆ) ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಲಸು ಮೇಳ ಹಾಗೂ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಮೇ 15 ಮತ್ತು 16ರಂದು ವಿಚಾರ ಸಂಕಿರಣ ನಡೆಯಲಿದ್ದು, ಸಂಕಿರಣದಲ್ಲಿ ಬೆಳೆಗಾರರಿಗೆ ಬೇಕಾದ ತಾಂತ್ರಿಕ ಮಾಹಿತಿಯ ನಾನಾ ಗೋಷ್ಠಿಗಳು ನಡೆಯಲಿದೆ. ಹಲಸಿನಿಂದ ತಯಾರಿಸಲಾದ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಈ ಸಂಕಿರಣದಲ್ಲಿರಲಿದೆ.[ಬೆಂಗಳೂರಿನಲ್ಲಿ ಸಾವಯವ ಮಾವು ಮೇಳ ಆರಂಭ]

ಕೇರಳದ 'ಸಿಂಧೂರ', 'ಮೊಟ್ಟಂವರಿಕಾ', ತಮಿಳುನಾಡಿನ ಪಾಲೂರ್-1 ಮತ್ತು 2, ಕರ್ನಾಟಕದಲ್ಲಿ ಜಿಕೆವಿಕೆಯವರು ಬಿಡುಗಡೆ ಮಾಡಿರುವ 'ಸ್ವರ್ಣ ಹಲಸು' ಮತ್ತಿತರ ತಳಿಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ. ಬೆಳಕಿಗೆ ಬಾರದಿರುವ ರೈತರ ನಾನಾ ತಳಿಯ ಹಲಸಿನ ಹಣ್ಣುಗಳ ಬಗ್ಗೆ ಸಹ ಮಾಹಿತಿ ನೀಡಲಾಗುತ್ತದೆ.
ಮಲೇಷಿಯಾ, ಅಮೆರಿಕ, ವಿಯೆಟ್ನಾಂದಿಂದ ಹಲಸು ಬೆಳೆಯ ತಜ್ಞರು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಇದರೊಂದಿಗೆ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ತಮಿಳುನಾಡು, ಮೇಘಾಲಯ, ತ್ರಿಪುರ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಡ ಮತ್ತಿತರ ಭಾಗಗಳಿಂದ ಸುಮಾರು 300 ಮಂದಿ ದೇಶೀಯ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಹಲಸು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದುಕೊಂಡಿದ್ದು, ದೇಶದ ಯಾವುದೇ ಹಲಸು ಬೆಳೆಗಾರರು ಈ ಮೇಳದಲ್ಲಿ ಭಾಗವಹಿಸಿ ತಾವು ಬೆಳೆದಿರುವ ಹಲಸು ಪ್ರದರ್ಶನ ಮತ್ತು ಮಾರಾಟ ಮಾಡಬಹುದು.
ಈ ಮೇಳದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳ ರೈತರು ಈ ದೂರವಾಣಿ ಸಂಖ್ಯೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು:ದೂ. 080- 2333 2442 ಹಾಗೂ ಮೊ. 94488 56958 ಸಂಪರ್ಕಿಸಬಹುದು.












Click it and Unblock the Notifications