ವಾಹನಗಳ ಮಾಲೀಕರೇ ಗಮನಿಸಿ, ಮಾಲಿನ್ಯ ತಪಾಸಣೆಗೆ ಕೂಡ ಎದುರಾಯ್ತು ಸಮಸ್ಯೆ... Emission Testing
ವಾಹನಗಳ ಮಾಲೀಕರಿಗೆ ಒಂದಲ್ಲ ಒಂದು ಹೊಸ ಹೊಸ ಟೆನ್ಷನ್ ಇದ್ದೇ ಇರುತ್ತೆ, ಅದ್ರಲ್ಲೂ ಯಾವುದೇ ಒಂದೇ ಒಂದು ಡಾಕ್ಯುಮೆಂಟ್ ಮಿಸ್ ಮಾಡಿಕೊಂಡು ರಸ್ತೆಗೆ ಇಳಿದರು ಸಾಕು ಟೆನ್ಷನ್ ಮೇಲೆ ಟೆನ್ಷನ್ ಗ್ಯಾರಂಟಿ. ಹೀಗಿದ್ದಾಗ ವಾಯುಮಾಲಿನ್ಯ ತಪಾಸಣೆ ಕೂಡ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು, ಇದಕ್ಕಾಗಿ ವಾಹನಗಳ ಮಾಲೀಕರು ಪರದಾಡಿದ್ದೂ ಉಂಟು. ಪೊಲೀಸರ ಕೈಗೆ ಸಿಕ್ಕರೆ ಅದಕ್ಕೂ ದಂಡ ಕಟ್ಟುವ ಭಯ ಕಾಡುತ್ತಿತ್ತು ವಾಹನಗಳ ಮಾಲೀಕರಿಗೆ. ಆದರೆ ಇದೀಗ ಸ್ವತಃ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲೇ ದೊಡ್ಡ ಸಮಸ್ಯೆ ಎದುರಾಗಿಬಿಟ್ಟಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹಾಗೂ ಇಡೀ ದೇಶದಲ್ಲೇ ವಾಹನಗಳ ಸಂಖ್ಯೆ ಭಾರಿ ಏರಿಕೆ ಕಾಣುತ್ತಿರುವ ಹಿನ್ನೆಲೆ, ವಾಹನಗಳ ಮಾಲೀಕರಿಗೆ ಹಲವು ಹೊಸ ಹೊಸ ನಿಯಮ ಹೇರಿಕೆ ಮಾಡಿ ಮಾಲಿನ್ಯಕ್ಕೆ ಲಗಾಮು ಹಾಕಲಾಗುತ್ತಿದೆ. ಅದರಲ್ಲೂ ವಾಹನಗಳ ಮಾಲಿನ್ಯ ತಪಾಸಣೆ ಕಡ್ಡಾಯವಾದ ನಂತರ ಸಾಕಷ್ಟು ಚರ್ಚೆ ಕೂಡ ಆಗಿತ್ತು. ವಾಹನಗಳ ನೋಂದಣಿ ಪ್ರಮಾಣಪತ್ರ ಎಂದರೆ ಆರ್‌ಸಿ & ಚಾಲನಾ ಪರವಾನಗಿ ಅರ್ಥಾತ್ ಡಿಎಲ್ ಸೇರಿದಂತೆ ಎಸ್‌ಎಸ್‌ಆರ್‌ಪಿ ನಕಲು ತಡೆಗೆ ಇದರ ಜೊತೆಗೆ ಭದ್ರತೆ ಹೆಚ್ಚಿಸಲು ಹಾಲೊಗ್ರಾಂ ಸ್ಟಿಕ್ಕರ್ ಬಳಕೆ ಮಾಡಲಾಗುತ್ತಿದೆ. ವಾಹನಗಳ ಮಾಲಿನ್ಯ ತಪಾಸಣೆಗೆ ಹಾಲೊಗ್ರಾಂ ಸ್ಟಿಕ್ಕರ್ ಕಡ್ಡಾಯವಾಗಿತ್ತು, ಆದರೆ ಇದೀಗ ಹಾಲೊಗ್ರಾಂ ಸ್ಟಿಕ್ಕರ್ ಕೊರತೆ ದೊಡ್ಡ ಸವಾಲು ತಂದೊಡ್ಡಿದೆ.

2 ತಿಂಗಳಿಂದ ಪೂರೈಕೆ ಆಗಿಲ್ಲ
ಹಾಲೊಗ್ರಾಂ ಸ್ಟಿಕ್ಕರ್ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಬಳಕೆ ಮಾಡಲಾಗುತ್ತದೆ, ಅಷ್ಟಕ್ಕೂ ವಾಹನಗಳ ಮಾಲಿನ್ಯ ತಪಾಸಣೆ ನಂತರ ಪ್ರಮಾಣಪತ್ರಕ್ಕೆ ಅಂಟಿಸಲು ಹಾಲೊಗ್ರಾಂ ಸ್ಟಿಕ್ಕರ್ ಯ್ಯುಸ್ ಆಗುತ್ತದೆ. ಇದು ನಕಲು ತಡೆಗೆ ಹಾಗೂ ಭದ್ರತೆ ಹೆಚ್ಚಿಸಲು ಪೂರಕವಾಗಿತ್ತು. ಆದರೆ ಇದೀಗ ನಾನಾ ಕಾರಣದಿಂದ ಹಾಲೊಗ್ರಾಂ ಸ್ಟಿಕ್ಕರ್ ಪೂರಕೆಯಲ್ಲಿ ಏರುಪೇರಾಗಿದೆ. ಹೀಗಾಗಿ ಸಾರಿಗೆ ಇಲಾಖೆಯಿಂದ ಪೂರೈಕೆ ಆಗಬೇಕಿದ್ದ ಹಾಲೊಗ್ರಾಂ ಸ್ಟಿಕ್ಕರ್ ಕಳೆದ 2 ತಿಂಗಳಿಂದ ಪೂರೈಕೆ ಆಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ವಾಹನಗಳ ಮಾಲಿನ್ಯ ತಪಾಸಣೆ ಕೂಡ ಏರುಪೇರಾಗುತ್ತಿದೆ.
ತಪಾಸಣಾ ಕೇಂದ್ರಗಳ ಮಾಲೀಕರ ಒದ್ದಾಟ
ಅಂದಹಾಗೆ ಈ ಹಾಲೊಗ್ರಾಂ ಸ್ಟಿಕ್ಕರ್ ಬಳಕೆ, ನಕಲು ಮಾಡಲು ಸಾಧ್ಯವಿಲ್ಲದ ಲೇಸರ್-ಕಟ್ ಭದ್ರತಾ ವೈಶಿಷ್ಟ್ಯ ಹೊಂದಿದೆ. ಇದರಿಂದಾಗಿ ದಾಖಲೆ ದೃಢೀಕರಣ ಕೂಡ ಸುಲಭವಾಗುತ್ತದೆ. ತಪಾಸಣಾ ಕೇಂದ್ರ ಮಾಲೀಕರು ಸಾರಿಗೆ ಇಲಾಖೆಗೆ ಹಣ ಪಾವತಿ ಮಾಡಿ ಹಾಲೊಗ್ರಾಂ ಪಡೆದು ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಯಲ್ಲಿ ಇತ್ತು. ಆದರೆ ಎರಡು ತಿಂಗಳಿನಿಂದ ಹಾಲೊಗ್ರಾಂ ಪೂರೈಕೆ ಆಗುತ್ತಿಲ್ಲ ಎಂದು ಇದೀಗ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ಮಾಲೀಕರ ಹೇಳುತ್ತಿದ್ದಾರೆ. ಆದಷ್ಟು ಬೇಗನೇ ಈ ಸಮಸ್ಯೆ ಬಗೆಹಿಯಲಿ ಎಂದು ಮನವಿ ಮಾಡುತ್ತಿದ್ದಾರೆ.












Click it and Unblock the Notifications