ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ: ಟ್ವಿಟ್ಟರ್ ನಲ್ಲಿ ಮಂಗಳೂರು ಚಲೋದ್ದೇ ಸದ್ದು!
ಬೆಂಗಳೂರು, ಸೆಪ್ಟೆಂಬರ್ 5: ಮಂಗಳೂರಿನ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಮತ್ತು ಹಿಂದುಪರ ಸಂಘಟನೆಯ ಕಾರ್ಯಕರ್ತರು, ಮುಖಂಡರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ನಡೆಯುತ್ತಿರುವ ಮಂಗಳೂರು ಚಲೋ ಜಾಥಾ ಕರ್ನಾಟಕದಾದ್ಯಂತ ಸದ್ದು ಮಾಡುತ್ತಿದೆ.
ಜಾಥಾದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ #EmergencyInKarnataka ಹ್ಯಾಶ್ ಟ್ಯಾಗ್ ಸೃಷ್ಟಿಯಾಗಿದೆ.
ನ್ಯಾಯಕ್ಕಾಗಿ ಬಿಜೆಪಿ ಕಾರ್ಯಕರ್ತರು ಜಾಥಾ ಮಾಡುತ್ತಿದ್ದರೆ ಅವರನ್ನು ಬಂಧಿಸಿದ ಕರ್ನಾಟಕ ಸರ್ಕಾರದ್ದು ನಿರಂಕುಶ ವರ್ತನೆ ಎಂದು ಹಲವು ಬಿಜೆಪಿ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ಚಲೋಕ್ಕೆ ಅನುಮತಿ ನೀಡದೆ, ಈಗ ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಬೆಂಬಲಿಗರು ಕಿಡಿಕಾರಿದ್ದಾರೆ.
#EmergencyInKarnataka ಹ್ಯಾಶ್ ಟ್ಯಾಗ್ ಅಂತೂ ಇವತ್ತಿನ ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಆಗುವತ್ತ ದಾಪುಗಾಲಿಡುತ್ತಿದೆ.
|
ಶೋಭಾ ಕರಂದ್ಲಾಜೆ
ಸಿದ್ದರಾಮಯ್ಯ ಅವರ ಸೂಚನೆಯಂತೆ ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ನಮ್ಮ ಶಾಂತಿಯುತ ಪ್ರತಿಭಟನೆಗೆ ತಡೆವೊಡ್ಡುತ್ತಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಇದು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟ್ ಮಾಡಿದ್ದಾರೆ.
|
ಕಾಂಗ್ರೆಸ್ ನಿಂದ ಕೋಮುಗಲಭೆಗೆ ಉತ್ತೇಜನ
ಕರ್ನಾಟಕ ಬಿಜೆಪಿಯು ಮಂಗಳೂರು ಚಲೋ ಜಾಥಾವನ್ನು ಶಾಂತಿಯುತವಾಗಿಯೇ ನಡೆಸಲು ತೀರ್ಮಾನಿಸಿತ್ತು. ಆದರೆ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯಂಥ ವಾತಾವರಣ ಸೃಷ್ಟಿಸುವ ಮೂಲಕ ಕೋಮು ಗಲಭೆಗೆ ಉತ್ತೇಜನ ನೀಡುತ್ತಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ಟ್ವೀಟ್ ಮಾಡಿದ್ದಾರೆ.
|
ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು!
ಪಿಎಫ್ ಐ ಒಂದು ಭಯೋತ್ಪಾದಕ ಸಂಘಟನೆ. ಕರ್ನಾಟಕ ಸರ್ಕಾರ ಅದನ್ನು ಕಾಪಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಅವರು ಟ್ವೀಟ್ ಮಾಡಿದ್ದಾರೆ.
|
ಮಾನವ ಹಕ್ಕಿನ ಕಗ್ಗೊಲೆ
ರಾಜ್ಯದಲ್ಲಿ ಮಾನವ ಹಕ್ಕುಗಳ ಕಗ್ಗೊಲೆಯಾಗುತ್ತಿದೆ ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದಾರೆ.
|
ಇಂದಿರಾ ಗಾಂಧಿಗೆ ಗುರುಕಾಣಿಕೆ ನೀಡಿದೆ!
ಶಿಕ್ಷಕರ ದಿನದಂದು ಕರ್ನಾಟಕದಲ್ಲೂ ತುರ್ತುಪರಿಸ್ಥಿತಿಯಂಥ ಸನ್ನಿವೇಶ ಸೃಷ್ಟಿಸುವ ಮೂಲಕ ಗುರು ಇಂದಿರಾ ಗಾಂಧಿಗೆ ಕಾಂಗ್ರೆಸ್ಸಿಗರು ಗುರುಕಾಣಿಕೆ ನೀಡೀದ್ದಾರೆ ಎಂದು ತಿಮ್ಮಯ್ಯ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications