ಬೆಂಗಳೂರಿನ ಮೊದಲ ಎಲಿವೇಟರ್ ಟ್ರೇಡ್ ಸೆಂಟರ್ ಉದ್ಘಾಟನೆ
ಬ್ಯಾಟರಾಯನಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಲಿವೇಟರ್ ಟ್ರೇಡ್ ಸೆಂಟರ್ ಉದ್ಘಾಟಿಸಿ ಹಾಗೂ ಎಲಿವೇಟರ್ ರೆಸ್ಕ್ಯೂ ವಾಹನಕ್ಕೆ ಗೃಹ ಸಚಿವ ಜಿ ಪರಮೇಶ್ವರ ಚಾಲನೆ ನೀಡಿದರು.
ಬೆಂಗಳೂರು, ಫೆಬ್ರವರಿ 13: ಬ್ಯಾಟರಾಯನಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಲಿವೇಟರ್ ಟ್ರೇಡ್ ಸೆಂಟರ್ ಉದ್ಘಾಟಿಸಿ ಹಾಗೂ ಎಲಿವೇಟರ್ ರೆಸ್ಕ್ಯೂ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್, ತುರ್ತು ಸೇವೆಗಳತ್ತ ಖಾಸಗಿ ಕಂಪನಿಗಳು ಒಲವು ತೋರಿಸುತ್ತಿರುವುದು ಬಹಳ ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದರು.
ಎಲಿವೇಟರ್ ಟ್ರೇಡ್ ಸೆಂಟರ್‍ನ ಈ ಹೊಸ ರೆಸ್ಕ್ಯೂ ವಾಹನ ಅಗ್ನಿಶಾಮದ ಸಿಬ್ಬಂದಿಗಳ ಜೊತೆಗೂಡುವ ಮೂಲಕ ತಾಂತ್ರಿಕತೆಯ ಉಪಯೋಗದಿಂದ ಲಿಫ್ಟ್ ಗಳಲ್ಲಿ ಸಿಲುಕಿರುವವರನ್ನು ಹೊರತರಲು ಸಹಾಯಕ್ಕೆ ಮುಂದಾಗಿರುವುದು ಬಹಳ ಶ್ಲಾಘನೀಯ ವಿಷಯ. ಇಂತಹ ಸೌಲಭ್ಯ ಮುಂದಿನ ದಿನಗಳಲ್ಲಿ ರಾಜ್ಯದ ಇತರ ನಗರಗಳಿಗೂ ಹರಡಬೇಕು ಎಂದರು.
ಬೆಂಗಳೂರು ನಗರದಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಎಲಿವೇಟರ್‍ಗಳನ್ನ ಉಪಯೋಗಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಈ ಲಿಫ್ಟ್ ಗಳ ಬಳಕೆ ಬಹಳಷ್ಟು ವಿರಳವಾಗಿತ್ತು. ಆದರೆ, ಆಧುನೀಕರಣ ಹಾಗೂ ಬದಲಾದ ಜೀವನ ಸ್ಥಿತಿ ಹೆಚ್ಚೆಚ್ಚು ಲಿಫ್ಟ್‍ಗಳನ್ನು ಬಳಸುವಂತೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಎರಡು ಮಹಡಿಯ ಮನೆಗಳಲ್ಲೂ ಲಿಫ್ಟ್ ಇರುವುದನ್ನು ಕಾಣಬಹುದಾಗಿದೆ. ಲಿಫ್ಟ್ ಹಾಗೂ ಎಲಿವೇಟರ್‍ಗಳ ನಿರ್ವಹಣೆಯಲ್ಲಿ ಸ್ವಲ್ಪಮಟ್ಟಿನ ಆಚೀಚೆ ಆದರೂ ಜನರು ಆತಂಕಕ್ಕೀಡಾಗುವುದು ಸಾಮಾನ್ಯ. ಇಂತಹ ಸಂಧರ್ಭಗಳಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಹೆಚ್ಚಿನ ತಾಂತ್ರಿಕ ಜ್ಞಾನವಿಲ್ಲದೆ ಸಾಂಪ್ರದಾಯಿಕ ವಿಧಾನಗಳ ಮೂಲಕ ಲಿಫ್ಟ್ ಗಳಲ್ಲಿ ಸಿಲುಕಿರುವವರನ್ನು ಹೊರತರುತ್ತಾರೆ.

ಲೈವ್ ವರ್ಕಿಂಗ್ ಎಲಿವೇಟರ್ಸ್
ಮೊದಲ ಬಾರಿಗೆ ಎಲ್ಲಾ ವಿಧವಾದ ಲೈವ್ ವರ್ಕಿಂಗ್ ಎಲಿವೇಟರ್ಸ್ ಗಳನ್ನು ಒಂದೇ ಸೂರಿನಡಿಯಲ್ಲಿ ನೋಡಬಹುದಾಗಿದೆ. ಇದು ಗ್ರಾಹಕರಿಗೆ ಅತ್ಯುತ್ತಮ ಎಲಿವೇಟರ್ ಆಯ್ಕೆ ಮಾಡಲು ಸಹಕಾರಿಯಾಗಲಿದೆ. ಎಲಿವೇಟರ್ ತಯಾರಕರಿಗೆ, ವಿತರಕರಿಗೆ ಎಲ್ಲಾ ರೀತಿಯ ಸಿದ್ಧ ಮತ್ತು ಬಿಡಿಭಾಗಗಳು ಒಂದೇ ಕಡೆ ಲಭ್ಯವಾಗಲಿದೆ. ಇದರಿಂದ ಸಮಯ, ಶ್ರಮ ಮತ್ತು ಹಣದ ಉಳಿತಾಯವಾಗಲಿದೆ.

ತುರ್ತು ಸೇವೆಗಳ ಇಲಾಖೆಗೆ ಮುಕ್ತ
ವಿಶ್ವದಲ್ಲೇ ಮೊದಲ ಬಾರಿಗೆ ಎಲಿವೇಟರ್ ರೆಸ್ಕ್ಯೂ ವೆಹಿಕಲ್ ಜನರ ತುರ್ತು ಸೇವೆಗಾಗಿ ಲೋಕಾರ್ಪಣೆಯಾಗುತ್ತಿದೆ. ಈ ವಾಹನವು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮುಕ್ತ ಬೆಂಬಲ ನೀಡಲಿದೆ.

ಕಾರ್ಮಿಕರ ಹಿತದೃಷ್ಟಿ
ಪ್ರಪ್ರಥಮ ಬಾರಿ ಕಾರ್ಮಿಕ ಬಂಧು ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಎಲಿವೇಟರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಅವಘಡ ಸಂಭವಿಸಿ ಅಂಗವೈಕಲ್ಯ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಹಾಗೂ ಮಕ್ಕಳ ಸ್ಕಾಲರ್‍ಶಿಪ್ ಮತ್ತು ಮೆಡಿಕಲ್ ಫೆಸಿಲಿಟೀಸ್ ಹಾಗೂ ರಾಜ್ಯ - ಅಂತರರಾಜ್ಯ ಕಾರ್ಮಿಕರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ.

ಹೈಡ್ರಾನಿಕ್ ಲಿಫ್ಟ್
ಎಲಿವೇಟರ್ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ - ಎಲಿವೇಟರ್ ಕ್ಷೇತ್ರದ ತಯಾರಕರನ್ನು ಒಳಗೊಂಡ ಸಮಿತಿ ಐವರನ್ನು ಗುರುತಿಸಿ ವಿಶೇಷ ಸಾಧನೆಗಾಗಿ ಸನ್ಮಾನಿಸಲಾಗುತ್ತಿದೆ.
ಇದೇ ವೇದಿಕೆಯಲ್ಲಿ ಡಾ. ಉಮೇಶ್ ಕುಮಾರ್ ಸಾಧನೆಯ ಕುರಿತು ಚಿತ್ತಾರ ಹೊರತರುತ್ತಿರುವ ವಿಶೇಷ ಸಂಚಿಕೆ ಲೋಕಾರ್ಪಣೆಯಾಗಲಿದೆ.
ಗೃಹ ಬಳಕೆಗೆ ಯೋಗ್ಯವಾದ ಇಟಲಿ ದೇಶದ ಹೈಡ್ರಾನಿಕ್ ಲಿಫ್ಟ್ ಅನ್ನು ಪ್ರಪ್ರಥಮ ಬಾರಿಗೆ ಲೋಕಾರ್ಪಣೆ ಮಾಡಲಾಗುತ್ತಿದೆ.

ಎಲಿವೇಟರ್ ಟ್ರೇಡ್ ಸೆಂಟರ್
ಬ್ಯಾಟರಾಯನಪುರದಲ್ಲಿ ಎಲಿವೇಟರ್ ಟ್ರೇಡ್ ಸೆಂಟರ್ ಇಂದು ಆರಂಭವಾಗಿದ್ದು. ಇಲ್ಲಿ ಎಲಿವೇಟರ್ ಗೆ ಸಂಬಂಧಿಸಿದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಉಪಕರಣಗಳು ಲಭ್ಯವಿರಲಿದೆ. ಇದು ಬೆಂಗಳೂರಿನ ಏಕೈಕ ಎಲಿವೇಟರ್ ಟ್ರೇಡ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಅಲ್ಲದೆ, ವಿಶ್ವದಲ್ಲೇ ಮೊದಲ ಬಾರಿಗೆ ಎಲಿವೇಟರ್ ರೆಸ್ಕ್ಯೂ ವೆಹಿಕಲ್ ಜನರ ತುರ್ತು ಸೇವೆಗಾಗಿ ಲೋಕಾರ್ಪಣೆಯಾಗುತ್ತಿದೆ. ಈ ವಾಹನವು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮುಕ್ತ ಬೆಂಬಲ ನೀಡಲಿದೆ ಎಂದರು.

ಎಲಿವೇಟರ್ ಸಂಬಂಧಿ ಉಪಕರಣಗಳು
ಕೈಲಾಶ ಆಶ್ರಮದ ಜಗದ್ಗುರು ಜಯೇಂದ್ರ ಪುರಿ ಮಹಾಸ್ವಾಮೀಗಳು ಮಾತನಾಡಿ, ಒಂದೇ ಸೂರಿನಡಿಯಲ್ಲಿ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಗೆ ಯೋಗ್ಯವಾದ ಲಿಫ್ಟ್ ಮತ್ತು ಎಲಿವೇಟರ್ ಸಂಬಂಧಿ ಉಪಕರಣಗಳು ದೊರಕುವುದು ಬಹಳ ಸಂತಸದ ವಿಷಯ ಎಂದರು.

ಗಣ್ಯಾತಿಗಣ್ಯರ ಉಪಸ್ಥಿತಿ
ಮಾಜಿ ಉಪಸಭಾಪತಿ ಪುಟ್ಟಣ್ಣ, ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಐ.ಎ.ಎಸ್, ಟ್ರಾನ್ಸಿಟಿಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ನಂದಗೋಪಾಲ್ ಮತ್ತು ಬಿಬಿಎಂಪಿ ಸದಸ್ಯೆ ಉಮಾ ವೇಣುಗೋಪಾಲ್.ಎನ್, ಸೌಮೇಂದು ಮುಖರ್ಜಿ ಐ.ಪಿ.ಎಸ್, ಕರ್ನಾಟಕ ಸರ್ಕಾರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಐಜಿಪಿ ಮತ್ತು ಎಜಿಡಿಪಿ, ಎಚ್. ನಾಗೇಶ್ - ಕೆಪಿಟಿಸಿಎಲ್ ನಿರ್ದೇಶಕ (ಪ್ರಸರಣ), ಡಿ.ಎಚ್. ಬಸವರಾಜು ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್, ಕೆ. ಸಿದ್ಧರಾಜು - ಬೆಸ್ಕಾಂನ ತಾಂತ್ರಿಕ ನಿರ್ದೇಶಕರು, ಎಂ.ಸಿ. ದಿನೇಶ್, ಎ. ಪದ್ಮನಾಭ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications