ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಎಲಿವೇಟೆಡ್ ಕಾರಿಡಾರ್ ಯೋಜನೆ ಇಲ್ಲ: ಸಿಎಂ
ಬೆಂಗಳೂರು, ಮಾರ್ಚ್ 20: ಸಾರ್ವಜನಿಕರ ಅಭಿಪ್ರಾಯವನ್ನು ಕೇಳದೆ ಎಲಿವೇಟೆಡ್ ಕಾರಿಡಾರ್ ಯೋಜನೆ ಮುಂದುವರೆಯುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ತರಾತುರಿಯಲ್ಲಿ ಆರಂಭವಾಗಿರುವ ಎಲಿವೇಟೆಡ್ ಕಾರಿಡಾರ್ ಅನ್ನು ನಿರ್ಮಾಣ ಕಾರ್ಯ ಆರಂಭ ಮಾಡುತ್ತಿರುವ ಕ್ರಮ ವಿರೋಧಿಸಿ ಸಿಟಿಜನ್ಸ್ ಫಾರ್ ಬೆಂಗಳೂರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಮುಖ್ಯಮಂತ್ರಿ ಕುಮಾರಸ್ವಾಮಿ ಈ ಸಂಘಟನೆಗಳ ಸದಸ್ಯರಿಗೆ ಮುಕ್ತ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಹಾಗೆಯೇ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯದೇ ಮುಂದುವರೆಯುವುದಿಲ್ಲ, ಸಾರ್ವಜನಿಕರ ಅಭಿಪ್ರಾಯಕ್ಕೆ ಮುಕ್ತ ಆಹ್ವಾನವಿದೆ ಎಂದು ತಿಳಿಸಿದ್ದಾರೆ.

ಎಲಿವೇಟೆಡ್ ಕಾರಿಡಾರ್ ನಿರ್ಮಾಣದಿಂದ ಮೂರು ಸಾವಿರಕ್ಕೂ ಹೆಚ್ಚು ಮರಗಳು ನಾಶವಾಗುತ್ತದೆ, ಕೆರೆಗಳಿಗೂ ಹಾನಿ ಇದೆ ಎಂದು ವರದಿಯೊಂದು ತಿಳಿಸಿತ್ತು.












Click it and Unblock the Notifications