ಪರಿಸರ ಸ್ನೇಹಿ ಇ-ಸಿಟಿ ಹಬ್ಬಕ್ಕೆ ಪಲ್ಲವಿ ಗಾಯನದ ಮೆರಗು
ಬೆಂಗಳೂರು, ಆಗಸ್ಟ್ 28: ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ (ಎಲ್ಸಿಟಾ) ಯು ಆಗಸ್ಟ್ 31ರಂದು ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಮೈದಾನದಲ್ಲಿ ಇ-ಸಿಟಿ ಹಬ್ಬವನ್ನು ಆಯೋಜಿಸಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ, ಟೆಕ್ ಮಹೀಂದ್ರಾ, ಹಿಕಾಲ್, ಟೆಸಾಲ್ವ್, ಹೆಚ್‍ಪಿವಿ ಹಾಗೂ ಇತರ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಒದಗಿಸುವ ವೇದಿಕೆ ಇದಾಗಿದೆ.
ಸಂಗೀತ, ರಂಗ, ನೃತ್ಯ ಹಾಗೂ ಇತರ ಸಾಂಸ್ಕೃತಿಕ ಮತ್ತು ಕಲಾ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಇ-ಸಿಟಿ ಉದ್ಯೋಗಿಗಳು ಸಾದರಪಡಿಸಲಿದ್ದಾರೆ.
ಕನ್ನಡದ ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ಹಾಗೂ ಇ-ಸಿಟಿಯ ಜನಪ್ರಿಯ ಮೇಘಧ್ವನಿ ತಂಡದವರು ಈ ಕಾರ್ಯಕ್ರಮದಲ್ಲಿ ಗಾಯನ - ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ಇ-ಸಿಟಿ ಹಬ್ಬವು, ಜೀವಭೂಮಿ, ಕ್ವಾಂಟಮ್ ಲೀಪ್ ಗುರು ಹಾಗೂ ಇತರ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನ ಮಳಿಗೆಗಳನ್ನು ಹೊಂದಿರಲಿದೆ.

ವೈವಿಧ್ಯ ಸಾರಲು ಹಾಗೂ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆ ಗುರುತಿಸುವ ಸಲುವಾಗಿ ಎಲ್ಸಿಟಾ ಸಂಸ್ಥೆಯು ಇ-ಸಿಟಿಯ ಉದ್ಯೋಗಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ವೇದಿಕೆ ಕಲ್ಪಿಸಿದೆ. ಪರಿಸರದ ಹಿತವನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.
ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ ಎಂಬುದು ಎಲ್ಸಿಟಾ ಸಂಸ್ಥೆಯ ಅಭಿಪ್ರಾಯ. ಕಲಾ ಪ್ರಕಾರಗಳ ಉಳಿವಿಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಸಮಾಜ ಮತ್ತು ಕಲೆಯ ನಡುವೆ ಅವಿನಾಭಾವ ಸಂಬಂಧವಿದೆ. ಸಂಸ್ಕೃತಿಯು ಕೇವಲ ವ್ಯಕ್ತಿಕೇಂದ್ರಿತವಲ್ಲ. ಬದಲಿಗೆ ಅದು ಸಮಾಜದ ಬದಲಾವಣೆ- ಬೆಳವಣಿಗೆಗಳ ವಿಕಸಿತ ರೂಪ.
ಇ-ಸಿಟಿಯೊಂದಿಗೆ ಸ್ನೇಹ- ಬಾಂಧವ್ಯ ಬೆಸೆಯುವ ಹಾಗೂ ಒಗ್ಗಟ್ಟಿನ ಮನೋಭಾವ ಬೆಳೆಸುವುದಕ್ಕೆ ಈ ಕಾರ್ಯಕ್ರಮವು ಅವಕಾಶ ಕಲ್ಪಿಸಲಿದೆ. ಇ-ಸಿಟಿಯು ಕೇವಲ ಉದ್ಯೋಗಕ್ಕಾಗಿ ಮೀಸಲಿರುವಂತಹ ಪ್ರದೇಶವಾಗಿ ಮಾತ್ರ ಉಳಿದಿಲ್ಲ. ಹಲವರ ವಾಸಕ್ಕೆ ನೆಲೆ ಒದಗಿಸಿರುವ ಸ್ಥಳವೂ ಹೌದು. ಆದ್ದರಿಂದ ಸಾಂಸ್ಕೃತಿಕ ಹಬ್ಬದ ವಾತಾವರಣ ರೂಪಿಸುವ ಅಗತ್ಯವಿದೆ.
ಇ-ಸಿಟಿ ಹಬ್ಬದ ಸಾಂಸ್ಕೃತಿಕ ಹಾಗೂ ಕಲಾ ವೈಭವವನ್ನು ಸವಿಯಲು ಇಂದೇ ತಮ್ಮ ಹೆಸರನ್ನು ಇಸಿಟಿಹಬ್ಬ.ಇನ್ ನಲ್ಲಿ ನೋಂದಾಯಿಸಬಹುದು.
ಎಲ್ಸಿಟಾ (ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ)
2013ರಲ್ಲಿ ಸ್ಥಾಪಿಸಲಾದ ಎಲ್ಸಿಟಾ ಸಂಸ್ಥೆಯು ಇಲೆಕ್ಟ್ರಾನಿಕ್ ಸಿಟಿಯ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಸರಕಾರವು 2013ರಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಿ ಇದರ ನಿರ್ವಹಣೆಗಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್ ಅಡಿಯಲ್ಲಿ ಎಲ್ಸಿಟಾ ಸಂಸ್ಥೆಯನ್ನು ಸ್ಥಾಪಿಸಿದೆ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications