Get Updates
Get notified of breaking news, exclusive insights, and must-see stories!

ಪ್ರಧಾನಿ ಮೋದಿ ಅವರಿಗೆ ಡಾ. ರಾಜ್ ಕೃತಿ ಗಿಫ್ಟ್ ಕೊಟ್ಟ ಪುನೀತ್

ಬೆಂಗಳೂರು, ಮೇ 03: ಕರ್ನಾಟಕದ ವಿಧಾನಸಭೆ ಚುನಾವಣೆಗಾಗಿ ಬಿರುಸಿನ ಪ್ರಚಾರ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ಮಾಡುವ ಅವಕಾಶ ಸಿಕ್ಕಿದೆ.

ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶಕ್ಕಾಗಿ ಆಗಮಿಸಿದ ಮೋದಿ ಅವರನ್ನು ವಿಮಾನದ ಬಳಿ ಭೇಟಿ ಮಾಡಿದರು. ನಟ ಪುನೀತ್ ಅವರು ತಮ್ಮ ಪತ್ನಿ ಅಶ್ವಿನಿ ಜತೆಗೂಡಿ, ಮೋದಿ ಅವರನ್ನು ಭೇಟಿ ಮಾಡಿ, ಡಾ. ರಾಜ್ ಕುಮಾರ್ ಅವರ ಜೀವನ ಚರಿತ್ರೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

Elections 2018 : Actor Puneeth Rajkumar gifts Dr Rajkumar book to PM Modi

ಈ ಬಗ್ಗೆ ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ತಮ್ಮ ಸಂತಸವನ್ನು ಪುನೀತ್ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ.ಚುನಾವಣಾ ಆಯೋಗದ ರಾಯಭಾರಿ ಕೂಡಾ ಆಗಿರುವ ಪುನೀತ್ ಅವರು ಬಿಜೆಪಿ ಸಮಾವೇಶದ ಬಳಿ ಕಾಣಿಸಿಕೊಳ್ಳುವಂತಿಲ್ಲ. ಹೀಗಾಗಿ, ವೇದಿಕೆ ತಲುಪುವುದಕ್ಕೂ ಮುನ್ನವೇ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ತಮ್ಮ ತಂದೆ ಡಾ ರಾಜ್ ಕುಮಾರ್ ಅವರ ಬಗ್ಗೆ ತಾವು ಬರೆದಿರುವ 'ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ' (person behind personality) ಪುಸ್ತಕವನ್ನ ಪ್ರಧಾನಿಗೆ ಉಡುಗೊರೆಯಾಗಿ ನೀಡಿ ಗೌರವಿಸಿದರು.

ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಇತ್ತೀಚೆಗೆ ಮೋದಿ ಅವರು ಭಾಷಣ ಮಾಡುವಾಗ ಡಾ ರಾಜ್ ಕುಮಾರ್ ಅವರ ಹೆಸರನ್ನ ಪ್ರಸ್ತಾಪಿಸಿ, ಕೊಂಡಾಡಿದ್ದರು.

ಪುನೀತ್ ಅವರು ಸದ್ಯ, ಪವನ್ ಒಡೆಯರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ನಟ ಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+