ಸಿಟಿ ರವಿ ನಾನು ಅಭ್ಯರ್ಥಿಯಾದ ದಿನವೇ ನಿದ್ದೆ, ಊಟ ಬಿಟ್ಟರು!
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೀನಾಯ ಸೋಲು ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರನ್ನ ಕಂಗೆಡಿಸಿದೆ. ಜೊತೆಯಲ್ಲಿದ್ದ ವ್ಯಕ್ತಿಗಳೇ ಸಿಟಿ ರವಿಯ ಸೋಲಿಗೆ ಮುನ್ನುಡಿ ಬರೆದಿದ್ದು ಈಗ ಇತಿಹಾಸ. ಖಾಸಗಿ ಸಂದರ್ಶನದಲ್ಲಿ ಖುದ್ದು ಸಿಟಿ ರವಿ ಎದುರಾಳಿ, ಹಾಲಿ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಮುಕ್ತವಾಗಿ ಮಾತನಾಡಿ, ಸಿಟಿ ರವಿ ಸೋಲಿಗೆ ಪಕ್ಕಾ ಕಾರಣ ತಿಳಿಸಿದ್ದಾರೆ ಬನ್ನಿ ತಿಳಿಯೋಣ.
ಚಿಕ್ಕಮಗಳೂರು ಕ್ಷೇತ್ರ ಅಂದ್ರೆ ಬಿಜೆಪಿ, ಕೇಸರಿ ಪಡೆ ಅಂದ್ರೆ ಅದು ಚಿಕ್ಕಮಗಳೂರು ಕ್ಷೇತ್ರ. ಹೀಗೆ ಕರ್ನಾಟಕದ ರಾಜಕೀಯದಲ್ಲಿ ಚಿಕ್ಕಮಗಳೂರು ಬಿಜೆಪಿ ಭದ್ರಕೋಟೆ ಎನಿಸಿತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಭೀಕರ ಸೋಲು ಕಂಡಿದೆ. ಸಿಟಿ ರವಿ (CR Ravi) ಅವರ ಎಡವಟ್ಟು ಹೀನಾಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಹಾಗಾದರೆ ರವಿ ಸೋಲಿಗೆ ಅಸಲಿ ಕಾರಣ ಏನು? ಸಿಟಿ ರವಿ ಸೋಲನ್ನ ಮೊದಲೇ ಜನ ಡಿಸೈಡ್ ಮಾಡಿದ್ರಾ? ಅದನ್ನ ಸ್ವತಃ ಸಿಟಿ ರವಿ ಸೋಲಿಸಿದ (HD Thammaiah) ಅಭ್ಯರ್ಥಿಯೇ ಹೇಳಿದ್ದಾರೆ ಮುಂದೆ ಓದಿ.

ಅಭ್ಯರ್ಥಿಯಾದ ದಿನವೇ ಸೋಲು ಫಿಕ್ಸ್!
ಹಿಂದುತ್ವದ ಫೈರ್ ಬ್ರ್ಯಾಂಡ್, ಆರ್‌ಎಸ್‌ಎಸ್‌ನ ನಿಕಟ ಸಂಪರ್ಕ ಹೊಂದಿದ್ದ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದ ಸಿ.ಟಿ.ರವಿ ಸೋಲುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಹೀಗಾಗಿಯೇ ದೇಶದ ಗಮನ ಸೆಳೆದಿದ್ದ ಸಿಟಿ ರವಿ ಸ್ಪರ್ಧಿಸಿದ್ದ ಚಿಕ್ಕಮಗಳೂರು ಕ್ಷೇತ್ರ ಹೈವೋಲ್ಟೇಜ್ ಆಗಿತ್ತು. ಆದರೆ ಇಲ್ಲಿ ಸಿಟಿ ರವಿಗೆ ಒಂದು ಕಾಲದ ಆಪ್ತನೇ ಎದುರಾಳಿಯಾಗಿ ನಿಂತಿದ್ದು ಸಂಚಲನ ಸೃಷ್ಟಿಸಿತ್ತು. ಎಚ್.ಡಿ.ತಮಯ್ಯ ಸಿಟಿ ರವಿ ವಿರುದ್ಧ ತೊಡೆತಟ್ಟಿ ನಿಂತು ಗೆದ್ದೇಬಿಟ್ಟರು. ಅದರಲ್ಲೂ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಖಚಿತವಾದ ದಿನವೇ ಸಿಟಿ ರವಿ ಊಟ, ನಿದ್ದೆ ಬಿಟ್ಟರು ಎಂದಿದ್ದಾರೆ ಎಚ್‌ಡಿ ತಮಯ್ಯ.
ಜನಬಲ Vs ಹಣಬಲದ ಹೋರಾಟ!
ಚಿಕ್ಕಮಗಳೂರು ಕ್ಷೇತ್ರದ ನೂತನ ಶಾಸಕ ಹಾಗೂ ಸಿಟಿ ರವಿ ಎದುರಾಳಿ ತಮಯ್ಯ ಖಾಸಗಿ ಸಂದರ್ಶನದಲ್ಲಿ ಮಾತನಾಡುತ್ತಾ, ತಮ್ಮ ಗೆಲುವಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ಸಿಟಿ ರವಿ ವಿರುದ್ಧ ತಾವು ಚುನಾವಣೆಗೆ ನಿಂತಿದ್ದ ಕ್ಷಣವೇ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಸಿಟಿ ರವಿ 4 ಬಾರಿ ಗೆದ್ದು ಹಣಬಲದ ಮೂಲಕ ಚುನಾವಣೆ ಎದುರಿಸಲು ಮುಂದಾದರು. ಆದರೆ ನಾನು ಜನಬಲದ ಮೂಲಕ ಚುನಾವಣೆ ಎದುರಿಸಿದೆ. ಪರಿಣಾಮ ಜನರು ಆಶೀರ್ವಾದ ಮಾಡಿದರು ಎಂದಿದ್ದಾರೆ ಎಚ್.ಡಿ.ತಮಯ್ಯ. ಮತ್ತಷ್ಟು ಇನ್‌ಸೈಡ್ ವಿಚಾರಗಳನ್ನೂ ತಮಯ್ಯ ಇದೇ ವೇಳೆ ಬಿಚ್ಚಿಟ್ಟಿದ್ದಾರೆ.
ಸಿಟಿ ರವಿ ದೊಡ್ಡ ನಾಯಕ ಅನಿಸಲಿಲ್ಲ!
ಯೆಸ್.. ಸ್ವತಃ ಎಚ್.ಡಿ. ತಮಯ್ಯ ಬಾಯಲ್ಲಿ ಬಂದಿರುವ ಮಾತು ಇದು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ ನಮಗೆ ದೊಡ್ಡ ಲೀಡರ್ ಅನಿಸಲಿಲ್ಲ. ಈ ಚುನಾವಣೆ ನಮಗೆ ಸಾಮಾನ್ಯ ಎನಿಸಿತ್ತು. ಹೀಗಾಗಿ ಸುಲಭವಾಗಿ ಸಿಟಿ ರವಿ ವಿರುದ್ಧ ಗೆಲುವು ಕಂಡೆ ಎಂದಿದ್ದಾರೆ ತಮಯ್ಯ. ಮತ್ತೊಂದ್ಕಡೆ ಚಿಕ್ಕಮಗಳೂರು ಕ್ಷೇತ್ರದಲ್ಲಿ 4 ಚುನಾವಣೆ ಬಳಿಕ ಹೊಸದೊಂದು ಗಾಳಿ ಬೀಸಿದೆ. ಆದರೆ ಈ ಕ್ಷೇತ್ರದಲ್ಲಿ ಸಿಟಿ ರವಿ ಸೋಲಿಗೆ ಮತ್ತಷ್ಟು ಅಂಶಗಳು ಪ್ರಮುಖ ಕಾರಣ ಎಂಬ ಚರ್ಚೆ ಕ್ಷೇತ್ರದ ಜನರ ನಡುವೆ ನಡೆಯುತ್ತಿದೆ. ಅದರ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.

ಸತತ 4 ಬಾರಿ ಗೆದ್ದಿದ್ದ ಸಿಟಿ ರವಿ!
ಹೌದು ಸಿಟಿ ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮದೇ ಹವಾ ಇಟ್ಟಿದ್ದರು. ಸಾಲು ಸಾಲು ಗೆಲುವಿನ ಮೂಲಕ ಈ ಬಾರಿ ಕೂಡ ಮತ್ತೆ ಆಯ್ಕೆಯಾಗುವ ವಿಶ್ವಾಸದಲ್ಲಿ ಸಿಟಿ ರವಿ ಇದ್ದರು. ಈ ಚುನಾವಣೆಯೂ ಸೇರಿ ಒಟ್ಟು 6 ಬಾರಿ ಸ್ಪರ್ಧೆ ಮಾಡಿದ್ದರು ಸಿಟಿ ರವಿ. ಸತತ 4 ಗೆಲುವು ರವಿ ಅವರಿಗೆ ಭಾರಿ ಶಕ್ತಿ ತುಂಬಿದ್ದು, ಈಗ ಕೂಡ ಅದೇ ರೀತಿ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿ ಇದ್ದರು. ಆದರೆ ಸಿ.ಟಿ.ರವಿ ಆಪ್ತನೇ 5ನೇ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟಿದ್ದು, ಕರ್ನಾಟಕದ ಮುಂದಿನ ಸಿಎಂ ಆಗುವ ಕನಸು ಕಂಡಿದ್ದ ಸಿಟಿ ರವಿಗೆ ಹಿನ್ನಡೆ ಮಾಡಿದೆ. ಹಾಗಾದ್ರೆ ಸಿಟಿ ರವಿ ಸೋಲಿಗೆ ಪ್ರಮುಖ ಕಾರಣ ಏನು? ಅದರ ಮಾಹಿತಿ ಇಲ್ಲಿದೆ ಓದಿ.
2018ರಲ್ಲಿ ಗೆದ್ದು 2023ರಲ್ಲಿ ಸೋತರು
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿ.ಟಿ.ರವಿಗೆ ಸಾಕಷ್ಟು ಪ್ಲಸ್ ಪಾಯಿಂಟ್ ಇತ್ತು. 2018ರ ಚುನಾವಣೆ ರವಿ ಅವರಿಗೆ ಕಷ್ಟವೂ ಆಗಿರಲಿಲ್ಲ. ಜತೆಗೆ ಪಕ್ಷದ ಒಗ್ಗಟ್ಟು, ಜನಾಭಿಪ್ರಾಯ ಕೂಡ ಅವರ ಪರ ಇದ್ದಿದ್ದು ಒಳ್ಳೆಯದೇ ಆಗಿತ್ತು. ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಅಷ್ಟು ಸವಾಲು ನೀಡದೆ ಸಿಟಿ ರವಿ ಗೆಲುವಿಗೆ ವೇದಿಕೆ ಒದಗಿಸಿದರು. ಆದರೆ ಈ ಬಾರಿ ಎಲ್ಲವೂ ಉಲ್ಟಾ ಆಗಿ, ಸಿಟಿ ರವಿ ಭಾರಿ ದೊಡ್ಡ ಸಂಕಷ್ಟದಲ್ಲಿ ಸಿಲುಕಿಬಿಟ್ಟರು. ಅದನ್ನ ಇಲ್ಲಿ ವಿವರವಾಗಿ ತಿಳಿಯೋಣ.
ಸಿಟಿ ರವಿ ವಿರುದ್ಧ ನಿಂತ ಜೆಡಿಎಸ್
2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲಎಂಬತಾಗಿತ್ತು. ತಮ್ಮದೇ ಪಕ್ಷದ ಅಭ್ಯರ್ಥಿ ಇದ್ದರೂ ಜೆಡಿಎಸ್ ಮುಖಂಡ ಹಾಗೂ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಕಾಂಗ್ರೆಸ್ ಪರ ಮತ ನೀಡಲು ಕರೆಕೊಟ್ಟಿದ್ದರು. ಇದು ಸಿ.ಟಿ.ರವಿಗೆ ದೊಡ್ಡ ಹೊಡೆತ ನೀಡುವ ಜೊತೆಗೆ, ನೂರಾರು ಸವಾಲು ಎದುರಿಸುವಂತೆ ಮಾಡಿತ್ತು. ಜಿಲ್ಲೆಯ ವಿವಿಧ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿ ಸಿ.ಟಿ.ರವಿ ಸೋಲಿಸಲು ತಂತ್ರ ರೂಪಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಕೂಡ ಸಿಟಿ ರವಿಯ ಸೋಲಿಗೆ ದೊಡ್ಡ ಕೊಡುಗೆ ನೀಡಿತು.

ಬೇರೆ ನಾಯಕರನ್ನು ಬೆಳೆಯಲು ಬಿಡಲಿಲ್ವಾ?
ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಒಬ್ಬ ಸತತವಾಗಿ ಒಂದೇ ಪಕ್ಷದಿಂದ ಆಯ್ಕೆಯಾಗಿ ಬರುತ್ತಿದ್ದಾನೆ ಎಂದರೆ ಆ ಕ್ಷೇತ್ರದಲ್ಲಿ ಬೇರೆಯವರಿಗೆ ಬೆಳೆಯಲು ಅವಕಾಶ ಇಲ್ಲ ಎಂದೇ ಅರ್ಥ. ಚಿಕ್ಕಮಗಳೂರು ಕ್ಷೇತ್ರದಲ್ಲೂ ಅಷ್ಟೇ ಇಂತಹದ್ದೇ ಪರಿಸ್ಥಿತಿ ಇತ್ತು. ಸಿಟಿ ರವಿ ಹೊರತು ಪರ್ಯಾಯ ನಾಯಕತ್ವ ಕ್ಷೇತ್ರದಲ್ಲಿ ಬೆಳೆಯಲೇ ಇಲ್ಲ. ಈ ಕಾರಣ ಕೂಡ ಸಿಟಿ ರವಿಗೆ ದೊಡ್ಡ ಹೊಡೆತ ನೀಡಿತ್ತು. 20 ವರ್ಷದಲ್ಲಿ ಸಿ.ಟಿ.ರವಿ ತಮ್ಮ ಕಾರ್ಯಕರ್ತರಿಗೆ ದೊಡ್ಡ ಹುದ್ದೆ ಕೊಡಿಸಲಿಲ್ಲ ಎಂಬ ಆರೋಪ ಅಸಮಾಧಾನದ ಹೊಗೆಯನ್ನ ಒಳಗೊಳಗೆ ಹುಟ್ಟುಹಾಕಿತ್ತು.
ಅಂತಿಮವಾಗಿ ಬಿಜೆಪಿಯಲ್ಲಿ ಉನ್ನತ ಹುದ್ದೆ ಪಡೆದ ತಕ್ಷಣ ಬಿಜೆಪಿ ಕಟ್ಟಿ ಬೆಳೆಸಿದ್ದ, ಕಮಲ ಪಡೆಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಾ ಬಂದರು. ಇದರ ಪರಿಣಾಮ ಹಲವು ಸಮುದಾಯಗಳು ಸಿಟಿ ರವಿ ವಿರುದ್ಧ ತಿರುಗಿಬಿದ್ದವು ಎಂಬ ಆರೋಪವಿದೆ. ಇದೆಲ್ಲದರ ಫಲಿತಾಂಶ ಈಗ ಎಲೆಕ್ಷನ್ ರಿಸಲ್ಟ್ ನೀಡಿದೆ. ಆದರೆ ಮುಂದೆ ಪರಿಸ್ಥಿತಿ ಯಾರ ರೀತಿ ಬದಲಾಗುತ್ತೆ? ಕಾದು ನೋಡಬೇಕು.
-
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್












Click it and Unblock the Notifications